

ಡೈಲಿ ವಾರ್ತೆ: ಫೆ./08/2026
ಆನ್‌ಲೈನ್ ಇನ್ವೆಸ್ಟ್‌ಮೆಂಟ್ ನೆಪದಲ್ಲಿ ₹14 ಲಕ್ಷ ವಂಚನೆ: ಉಡುಪಿಯಲ್ಲಿ ಸೈಬರ್ ಮೋಸ

ಉಡುಪಿ: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ಭಾರೀ ಹಣ ವಂಚನೆ ಮಾಡಿರುವ ಪ್ರಕರಣ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಸುರತ್ಕಲ್ ಎಂಜಿ ರಸ್ತೆ ನಿವಾಸಿ ಇರ್ಫಾನ್ (40) ಎಂಬವರು ಉಡುಪಿ ಜಿಲ್ಲೆಯ ವಿವಿಧ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ್ದ ಅವರು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದಿನಾಂಕ 03-08-2025 ರಂದು ಪಿರ್ಯಾದಿದಾರರಿಗೆ ಅಪರಿಚಿತ ವ್ಯಕ್ತಿಯಿಂದ ಆನ್‌ಲೈನ್ ಕರೆ ಬಂದಿದ್ದು, ವಿಶಾಲ್ ರಾವ್ ಎಂಬುವವರು ಇನ್ವೆಸ್ಟ್‌ಮೆಂಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಆತನ ಸೂಚನೆಯಂತೆ www.mirrox.vip� ವೆಬ್‌ಸೈಟ್‌ನಲ್ಲಿ ಖಾತೆ ತೆರೆಯಲು ತಿಳಿಸಿದ್ದು, ನಂತರ ಜೂಮ್ ಮೀಟಿಂಗ್‌ಗಳು ಹಾಗೂ [email protected] ಇ-ಮೇಲ್ ಮೂಲಕ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುವಂತೆ ಪ್ರೇರೇಪಿಸಲಾಗಿದೆ.
ಆರೋಪಿತರ ಮಾತು ನಂಬಿದ ಪಿರ್ಯಾದಿದಾರರು ದಿನಾಂಕ 03-08-2025 ರಿಂದ 29-11-2025ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು ₹14,07,025.68 ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಆದರೆ ಹೂಡಿಕೆ ಮಾಡಿದ ಮೊತ್ತವನ್ನಾಗಲೀ ಅಥವಾ ಲಾಭಾಂಶವನ್ನಾಗಲೀ ನೀಡದೇ ಆರೋಪಿತರು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2026ರ ಅಡಿಯಲ್ಲಿ ಐಟಿ ಕಾಯ್ದೆಯ ಕಲಂ 66(ಸಿ), 66(ಡಿ) ಹಾಗೂ BNS ಕಲಂ 318(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.