ಡೈಲಿ ವಾರ್ತೆ:11 ಏಪ್ರಿಲ್ 2023
ಏ.16, 17 ರಂದು ಕೋಟತಟ್ಟು ಪಡುಕರೆ ಶ್ರೀ ಅಮ್ಮ ಮತ್ತು ಸಪರಿವಾರ ದೈವಸ್ಥಾನ ಬ್ರಹ್ಮಕುಂಭಾಭಿಷೇಕ, ಗೆಂಡಸೇವೆ ಹಾಗೂ ತುಲಾಭಾರ ಸೇವೆ
ಕೋಟ:ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆ ಶ್ರೀ ಅಮ್ಮ ಮತ್ತು ಸಪರಿವಾರ ದೈವಸ್ಥಾನದ ಬ್ರಹ್ಮಕುಂಭಾಭಿಷೇಕ, ಅನ್ನಸಂತರ್ಪಣೆ ಗೆಂಡಸೇವೆ ಹಾಗೂ ತುಲಾಭಾರ ಸೇವೆಯು ಏಪ್ರಿಲ್ 16 ಆದಿತ್ಯವಾರ ಹಾಗೂ 17 ಸೋಮವಾರದಂದು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.
ದಿನಾಂಕ 16-04-2023ನೇ ಆದಿತ್ಯವಾರ ಬೆಳಿಗ್ಗೆ 8.00 ರಿಂದ ಶ್ರೀ ಕ್ಷೇತ್ರದಲ್ಲಿ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ಗಣಹೋಮ, ಬ್ರಹ್ಮಕುಂಭಾಭಿಷೇಕ, ಮಹಾಪೂಜೆ ನಡೆಯಲಿರುವುದು.
ಮಧ್ಯಾಹ್ನ 11.30ಕ್ಕೆ ಶ್ರೀ ಭಗವತ್ ಭಜನಾ ಮಂದಿರ (ರಿ.) ಕೋಟತಟ್ಟು-ಪಡುಕರೆ “ಭಜನಾ ಕಾರ್ಯಕ್ರಮ“
ಮಧ್ಯಾಹ್ನ 12:30ಕ್ಕೆ ಮಹಾಅನ್ನಸಂತರ್ಪಣೆ
ರಾತ್ರಿ 8.00 ಗಂಟೆಗೆ ಗೆಂಡಸೇವೆ ನಡೆಯಲಿದೆ.
ರಾತ್ರಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ಇವರಿಂದ ಕಾಲಮಿತಿ ಯಕ್ಷಗಾನ ಬಯಲಾಟ
ದಿನಾಂಕ 17-04-2023ನೇ ಸೋಮವಾರ ಬೆಳಿಗ್ಗೆ 8:00 ಗಂಟೆಗೆ ಮಹಾಪೂಜೆ, ಬೆಳಿಗ್ಗೆ 9.30ಕ್ಕೆ ತುಲಾಭಾರ ಸೇವೆ
ಬೆಳಿಗ್ಗೆ 11.00ಕ್ಕೆ ಕಾಲಾವಧಿ ಭೋಗ ಸೇವೆ
ಸಕಲ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.
ಶ್ರೀ ದೇವಿಯ ಪ್ರೇರಣೆ ಹಾಗೂ ಸಕಲ ಭಕ್ತರ ಸಂಪೂರ್ಣ ಪ್ರೋತ್ಸಾಹದಿಂದಲೇ ನಡೆಯುವ ಈ ದೇವತಾ ಕಾರ್ಯಕ್ಕೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು ಮನ ಧನ ಸಹಾಯವನ್ನು ನೀಡಿ ಶ್ರೀದೇವಿಯ ಪವಿತ್ರ ಕುಂಕುಮ ಪ್ರಸಾದವನ್ನು ಸ್ವೀಕರಿಸಿ ಶ್ರೀ ಅಮ್ಮ ಮತ್ತು ಸಪರಿವಾರ ದೇವರುಗಳ ಕೃಪಾಕಟಾಕ್ಷಕ್ಕೆ ಪಾತ್ರರಾದಬೇಕಾಗಿ ದೈವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.
ಮುಕ್ತೇಸರರು / ಅಧ್ಯಕ್ಷರು, ಆಡಳಿತ ಮಂಡಳಿ ಮತ್ತು ನಂಬಿದ ಕುಟುಂಬಸ್ಥರು, ಅರ್ಚಕರು ಪೂಜಾ ವರ್ಗದವರು ಮತ್ತು ಪಾತ್ರಿ ವರ್ಗದವರು ಹಾಗೂ ಗ್ರಾಮದ ಹತ್ತು ಸಮಸ್ತರು.