ಡೈಲಿ ವಾರ್ತೆ:12 ಮೇ 2023

ಬಲೂನ್‌ನೊಂದಿಗೆ ಆಟವಾಡುತ್ತಾ ಇದ್ದ 3 ವರ್ಷದ ಬಾಲಕಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತ್ಯು!

ಮಡಿಕೇರಿ: ಆಟವಾಡುತ್ತಿದ್ದ ವೇಳೆ ಮಗುವೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ರೋಶನ್ ಅವರ ಪುತ್ರಿ ಸಿಯಾನ್ (3) ಮೃತಪಟ್ಟ ಬಾಲಕಿ, ರೋಶನ್ ವೋಟ್ ಮಾಡಲು ಮತದಾನ ಕೇಂದ್ರಕ್ಕೆ ತೆರಳಿದ್ದರು.

ಮಗುವಿನ ತಾಯಿ ಹಾಗೂ ಅಜ್ಜಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದು ಮನೆಯ ಮುಖ್ಯ ದ್ವಾರವನ್ನು ತೆರೆದಿಡಲಾಗಿತ್ತು . ವೇಳೆ ಮಗು ಬಲೂನ್‌ನೊಂದಿಗೆ ಆಟವಾಡುತ್ತಾ ಮನೆಯಿಂದ ಆಚೆ ಹೋಗಿದೆ. ಕಂದಮ್ಮ ಆಟವಾಡುತ್ತಿದ್ದಾಗ ಬಲೂನು ಬಾವಿಯೊಳಗೆ ಬಿದ್ದಿದೆ. ಅದನ್ನು ಹೊರಗೆ ತೆಗೆಯುವ ಪ್ರಯತ್ನದಲ್ಲಿದ್ದ ಮಗು ಬಾವಿಗೆ ಇಣುಕಿ ನೋಡಿದ್ದು, ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದು ಸಾವನ್ನಪ್ಪಿದೆ.

ಪಾಲಕರು ಮನೆಯೊಳಗೆ ಇದ್ದುದರಿಂದ ಮಗು ಬಾವಿಯೊಳಗೆ ಬಿದ್ದ ವಿಷಯ ಯಾರಿಗೂ ತಿಳಿದಿರಲಿಲ್ಲ. ಸಂಜೆ ವೇಳೆ ಮನೆಯ ಸದಸ್ಯರೆಲ್ಲರೂ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಬಳಿಕ ಬಾವಿಯನ್ನು ಪರಿಶೀಲಿಸಿದಾಗ ಮಗು ಸಾವನ್ನಪ್ಪಿರುವುದು ಬಾವಿಗೆ ಬಿದ್ದು ಬೆಳಕಿಗೆ ಬಂದಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.