ಡೈಲಿ ವಾರ್ತೆ:24 ಮೇ 2023
ಮಾಣಿ: ಬಿಜೆಪಿ – ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಟ್ಟಿಗೆಯಿಂದ ಹಲ್ಲೆ: ತಲವಾರಿನಿಂದ ಹಲ್ಲೆ ನಡೆದಿಲ್ಲ-ಪೊಲೀಸ್ ಇಲಾಖೆ ಸ್ಪಷ್ಟನೆ.
ಮಾಣಿ: ಬಜರಂಗದಳ, ಬಿಜೆಪಿ ಕಾರ್ಯಕರ್ತರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾಣಿಯಲ್ಲಿ ಜಗಳ ನಡೆದಿದ್ದು, ಈ ಘಟನೆಯಲ್ಲಿ ತಲವಾರು ದಾಳಿಯಾಗಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ.
ಮಾಣಿಯಲ್ಲಿ ನಡೆದ ಪ್ರಕರಣದಲ್ಲಿ ತಲವಾರಿನಿಂದ ಹಲ್ಲೆ ನಡೆಸಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದು, ಸದರಿ ಗಲಾಟೆಯಲ್ಲಿ ಕಟ್ಟಿಗೆಯಿಂದ ಹಲ್ಲೆ ನಡೆಸಿರುವುದಾಗಿದೆ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದ್ದು, ಹೆಚ್ಚಿನ ಮಾಹಿತಿ ನೀಡಲಾಗುವುದು
ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಲ್ವಾರ್ ನಿಂದ ಹಲ್ಲೆ ಅಂತ ಸುದ್ದಿ ಹಾಕಲಾಗಿದೆ. ದಯವಿಟ್ಟು ಅದನ್ನು ಸರಿಪಡಿಸ, ಕಟ್ಟಿಗೆಯಿಂದ ಹಲ್ಲೆ ಆಗಿರುವ ಬಗ್ಗೆ ಸ್ಪಷ್ಟಿಕರಣ ನೀಡುತ್ತಿದ್ದೇವೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.