



ಡೈಲಿ ವಾರ್ತೆ: 27 ಮೇ 2023


ಕಟಪಾಡಿ: ಕಂಟೈನರ್ ಹಾಗೂ ಸಿಮೆಂಟ್ ಮಿಕ್ಸರ್ ಲಾರಿ ಅಪಘಾತ – ಚಾಲಕನ ರಕ್ಷಣೆ
ಕಟಪಾಡಿ: ರಾ. ಹೆ. 66ರ ತೇಕಲ್ ತೋಟ ಕಿಯಾ ಶೋರೂಮ್ ಮುಂಭಾಗದಲ್ಲಿ ಕಂಟೈನರ್ ಲಾರಿ ಮತ್ತು ಸಿಮೆಂಟ್ ಮಿಕ್ಸರ್ ಲಾರಿ ನಡುವೆ ಅಪಘಾತ ಸಂಭವಿಸಿದ ಘಟನೆ ಶನಿವಾರ ನಡೆದಿದೆ.
ಕಂಟೈನರ್ ಲಾರಿ ಚಾಲಕ ಸಿಲುಕಿಕೊಂಡಿದ್ಫು ಸಾರ್ವಜನಿಕರು, ಸ್ಥಳೀಯರ ಸಹಕಾರದಿಂದ ಹೊರಗೆ ತೆಗೆದು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.
ವಾಹನಗಳು ಜಖಂಗೊಂಡಿದ್ದು ವಾಹನ ಸಂಚಾರದಲ್ಲಿ ವ್ಯತ್ಯಾಯ ಉಂಟಾಗಿದ್ದು, ಕಾಪು ಪೊಲೀಸರು ಘಟನೆ ಸ್ಥಳಕ್ಕಆಗಮಿಸಿದ್ದಾರೆ.