ಡೈಲಿ ವಾರ್ತೆ:01 ಜೂನ್ 2023
ಮುಖದ ಮೇಲೆ ಆಗಾಗ ಕಾಣಿಸಿಕೊಳ್ಳುವ ಮೊಡವೆಗಳಿಗೆ ಸರಳ ಮನೆಮದ್ದುಗಳು.!
ಹದಿಹರೆಯದ ದಿನಗಳಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಮೊಡವೆ. ಇದು ಹೆಣ್ಣಿಗಾಗಲಿ, ಗಂಡಿಗಾಗಲಿ ದೊಡ್ಡ ಸಮಸ್ಯೆಯಂತೆ ಕಾಡುತ್ತದೆ.
ಮೊಡವೆ ಏಳಲು ಕಾರಣ :
ವಿಟಮಿನ್ ‘ಎ’ ಕೊರತೆಯಿಂದಲೂ ಮೊಡವೆ ಕಾಣಿಸಿಕೊಳ್ಳುತ್ತದೆ. ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೇ ಇರುವುದು. ತ್ವಚೆಗೆ ಸೂಕ್ತವಲ್ಲದ ಬ್ಯೂಟಿ ಪ್ರೊಡಕ್ಟ್ಸ್‌ಗಳನ್ನು ಬಳಸುವುದು. ಅತಿಯಾದ ಎಣ್ಣೆ ಪದಾರ್ಥಗಳನ್ನು ತಿನ್ನುವುದು, ಮಾನಸಿಕ ಒತ್ತಡ, ಧೂಳು ಇತ್ಯಾದಿ.
ಮೊಡವೆ ನಿವಾರಣೆಗೆ ಸರಳ ಮನೆಮದ್ದುಗಳು :
ಒಬ್ಬ ಆರೋಗ್ಯವಂತ ವ್ಯಕ್ತಿ ದಿನಕ್ಕೆ 2-3 ಲೀಟರ್ ನೀರನ್ನು ಕುಡಿಯಬೇಕು. ಇನ್ನು ಮುಖದಲ್ಲಿ ಮೊಡವೆ ಇರುವವರು ಹೆಚ್ಚಾಗಿ ನೀರು ಕುಡಿದರೆ ದೇಹದ ಉಷ್ಣತೆಯನ್ನು ಸಮತೋಲದಲ್ಲಿ ಇರಿಸಿ ಮೊಡವೆಗಳು ಕಡಿಮೆ ಮಾಡಬಹುದು. ಇನ್ನು ಆಗಾಗ ಶುದ್ಧ ನೀರಿನಿಂದ ಮುಖ ತೊಳೆಯವುದು ಮೊಡವೆಗಳ ನಿವಾರಣೆಗೆ ಸಿಂಪಲ್ ಆದ ಪರಿಹಾರ. ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯುವರಿಂದ ಮುಖದ ಆರೋಗ್ಯ ಕಾಪಾಡಿಕೊಳ್ಳಬಹುದು.
2) ಲೋಳೆ ರಸ :
ಲೋಳೆ ರಸ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯ. ಅನೇಕ ಕಾಯಿಲೆಗಳಿಗೆ ಔಷಧವಾಗಿರುವ ಅಲೋವೇರಾ ಮೊಡವೆಗೆ ರಾಮಬಾಣ. ಯಾವುದೇ ಇತರ ವಸ್ತುಗಳನ್ನು ಮಿಶ್ರಣ ಮಾಡದೇ ಅಲೋವೇರಾ ಲೋಳೆಯನ್ನು ಪ್ರತಿ ನಿತ್ಯ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಕಡಿಮೆಯಾಗುತ್ತದೆ.
3) ಅರಿಶಿನ :
ಪುರಾತನ ಕಾಲದಿಂದಲೂ ಸೌಂದರ್ಯ ವರ್ಧಕವಾಗಿ ಅರಿಶಿನವನ್ನು ಬಳಸುತ್ತಿದ್ದರು. ಹೀಗಾಗಿ ಧಾರ್ಮಿಕವಾಗಿಯೂ ಅರಿಶಿನಕ್ಕೆ ವಿಶೇಷ ಸ್ಥಾನವಿದೆ. ನಂಜು ನಿವಾರಿಸುವ, ತ್ವಚೆಯ ಆರೋಗ್ಯ ಕಾಪಾಡುವ ಅರಶಿನವನ್ನು ನೀರಿನೊಂದಿಗೆ ಕಲಿಸಿ ಮೊಡವೆಗಳ ಮೇಲೆ ಲೇಪಿಸುವುದರಿಂದ ಮೊಡವೆಗಳು ಕಡಿಮೆಯಾಗುತ್ತದೆ. ಆದರೆ ಎಚ್ಚರವಿರಲಿ ಹೊರಗಿನ ಅಂಗಡಿಗಳಲ್ಲಿ ಸಿಗುವ ಪ್ಯಾಕೇಟ್ ಅರಿಶಿನ ಪುಡಿಗಿಂತ, ಮನೆಯಲ್ಲೇ ಬೆಳೆಯುವ ಅರಿಶಿನದ ಕೊಂಬುಗಳು ಉತ್ತಮ.
4) ಹಿಟ್ಟು :
ಫೇಸ್‌ವಾಶ್‌ಗಳನ್ನು ಮೊಡವೆಗಳ ಮೇಲೆ ಉಜ್ಜುವ ಬದಲು ಮುಖ ತೊಳೆಯಲು ಕಡ್ಲೆ ಹಿಟ್ಟನ್ನು ಬಳಸಿ. ಕಡ್ಲೆ ಹಿಟ್ಟಿನಿಂದ ನಯವಾಗಿ ಉಜ್ಜಿ ಉಗುರು ಬೆಚ್ಚಗಿನ ನೀರಿನಿಂದ ತೊಳೆಯವ ಅಭ್ಯಾಸವನ್ನು ರೂಢಿಸಿಕೊಳ್ಳಿ, ಈ ಅಭ್ಯಾಸದಿಂದ ದಿನ ಕಳೆದಂತೆ ಮೊಡವೆಗಳು ಕಡಿಮೆಯಾಗುತ್ತದೆ.
5) ಲಿಂಬೆ ಹಣ್ಣು :
ಮೊಡವೆ ಮೇಲೆ ಲಿಂಬೆ ಹಣ್ಣು ಹಚ್ಚುವುದರಿಂದ ಉರಿಯುತ್ತದೆ. ಆದರೆ ಕಾಲಕ್ರಮೇಣ ಮೊಡವೆಗಳು ಕಡಿಮೆಯಾಗುತ್ತದೆ. ಇನ್ನು ಸೂಕ್ಷ್ಮವಾದ ಚರ್ಮ ಉಳ್ಳವರು ಲಿಂಬೆ ಹಣ್ಣು ಮೊಡವೆ ಮೇಲೆ ಹಚ್ಚಬೇಕೆಂದಿಲ್ಲ. ಇನ್ನು ಮೊಡವೆ ನಿವಾರಣೆಗೆ ಜಾಸ್ತಿ ನೀರು ಕುಡಿಯಲು ಅಭ್ಯಾಸ ಮಾಡಿಕೊಳ್ಳಲು ಬಯಸುವವರು ನೀರಿನ ಬದಲು ಲೆಮನ್ ಜ್ಯೂಸ್ ಕೂಡ ಕುಡಿಯಬಹುದು. ಇದರಿಂದ ದೇಹದ ಉಷ್ಣಾಂಶ ಸಮತೋಲನದಲ್ಲಿರುತ್ತದೆ ಎನ್ನಬಹುದು.