ಡೈಲಿ ವಾರ್ತೆ: ಫೆ./07/2026

ಮಣಿಪಾಲದಲ್ಲಿ ವಸೂಲಾತಿ ಹೆಸರಿನ ದೌರ್ಜನ್ಯ: SC/ST ಕಾಯ್ದೆಯಡಿ ಪ್ರಕರಣ ದಾಖಲು

ಮಣಿಪಾಲ,ಜ.07 : ಬ್ಯಾಂಕ್ ವಸೂಲಾತಿ ಅಧಿಕಾರಿಗಳೆಂದು ಹೇಳಿಕೊಂಡು ಮನೆಗೆ ನುಗ್ಗಿ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪಕ್ಕೆ ಸಂಬಂಧಿಸಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಳ್ಳಿ ಗ್ರಾಮ, ಕುಂಜಿಬೆಟ್ಟು ಉಡುಪಿ ನಿವಾಸಿ ಈಶ್ವರ (32) ಅವರು ನೀಡಿದ ದೂರಿನಂತೆ, ದಿನಾಂಕ 08/01/2026 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಸುಲೋಚನಾ, ಕೃಷ್ಣ ಹಾಗೂ ಹರಿಣಾಕ್ಷಿ ಎಂಬವರು ಎಸ್.ಡಿ.ಸಿ.ಸಿ ಬ್ಯಾಂಕ್ ವಸೂಲಾತಿ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಪಿರ್ಯಾದಿದಾರರ ಮನೆಗೆ ಬಂದಿದ್ದರು ಎನ್ನಲಾಗಿದೆ.

ಆರೋಪಿಗಳು ಪಿರ್ಯಾದಿದಾರರ ತಾಯಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದ್ದು, ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2026 ಅಡಿಯಲ್ಲಿ BNS ಕಲಂಗಳು 329(3), 352, 351(2), 3(5) ಹಾಗೂ SC/ST (ಅತ್ಯಾಚಾರ ನಿಷೇಧ) ಕಾಯ್ದೆಯ ಕಲಂಗಳು 3(1)(r)(s), 3(2)(v-a) ರಂತೆ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.