ಡೈಲಿ ವಾರ್ತೆ: 13 ಜೂನ್ 2023

ಕೋಟತಟ್ಟು ಗ್ರಾ. ಪಂ.ನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೋಂದಾಯಿತ ಕೂಲಿಕಾರರ ಆರೋಗ್ಯ ತಪಾಸಣೆ ಹಾಗೂ ಮಾಹಿತಿ ” ಕಾರ್ಯಕ್ರಮ

ಕೋಟತಟ್ಟು ಗ್ರಾಮ ಪಂಚಾಯತ್ ನಲ್ಲಿ ಜೂ. 13 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಪಂಚಾಯತ್ ಸಭಾ ಭವನದಲ್ಲಿ “ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನ” ಯೋಜನೆಯಡಿ “ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೋಂದಾಯಿತ ಕೂಲಿಕಾರರ ಆರೋಗ್ಯ ತಪಾಸಣೆ ಹಾಗೂ ಮಾಹಿತಿ ” ಕಾರ್ಯಕ್ರಮವು ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿಶ್ವನಾಥ್, ಕೆ. ಎಚ್. ಪಿ. ಟಿ. ಯ ತಾಲೂಕು ಸಂಯೋಜಕರು ಅರ್ಪಿತಾ ಬ್ರಹ್ಮಾವರ, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಮಲ್ಲಿಕಾ, ನರೇಗಾ ಕೂಲಿಕಾರರು, ಸಂಜೀವಿನಿ ಯ ಅಧ್ಯಕ್ಷರು, MBK, LCRP ಯವರು, ಒಕ್ಕೂಟದ ಸದಸ್ಯರು ಹಾಗೂ ಕೋಟತಟ್ಟು ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಸುಮತಿ ಅಂಚನ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ದಲ್ಲಿ ಜೋಬ್ ಕಾರ್ಡ್ ನ್ನು ಕೂಡ ವಿತರಿಸಲಾಯಿತು.