ಡೈಲಿ ವಾರ್ತೆ:14 ಜೂನ್ 2023
ಕೊರಗ ಸಮುದಾಯದವರಿಂದ ವಾಸಿಸುವ ಭೂಮಿಯ ಹಕ್ಕಿಗಾಗಿ ನಾಡ ಗ್ರಾ. ಪಂ. ಎದುರಿನಲ್ಲೇ ತೊಟ್ಟಿಲು ತೂಗಿ ಧರಣಿ: ಜಿಲ್ಲಾಧಿಕಾರಿ ಪ್ರತಿಭಟನಾ ಸ್ಥಳಕ್ಕಾಗಮಿಸಲು ಪಟ್ಟು!
ಬೈಂದೂರು : ಡಾ. ಮಹಮ್ಮದ್ ಪೀರ್ ವರದಿ ಪ್ರಕಾರ ಪ್ರತಿ ಕೊರಗ ಸಮುದಾಯದ ಕುಟುಂಬಗಳಿಗೆ ಸರಕಾರಿ ಭೂಮಿಯನ್ನು ನೀಡಬೇಕು ಎಂಬ ಆಯೋಗದ ವರದಿ ಇದ್ದರೂ ಕೂಡ ಭೂಮಿಯನ್ನು ಹಂಚಿ ಮಾಡದೆ ಈ ಬಾಗದ ಕೊರಗ ಸಮುದಾಯದ ಮಂದಿಗೆ ಅನ್ಯಾಯ ಎಸಗಿದ್ದಾರೆ ಎಂದು ನಾಡ ಗ್ರಾಮ ಪಂಚಾಯತ್ ಆವರಣದ ಒಳಗಡೆ ಬುಧವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಉಡುಪಿ ಜಿಲ್ಲೆಯ ನಾಡ ಗ್ರಾಮದ ಪಡುಕೋಣೆ ಎಂಬಲ್ಲಿ ಕೊರಗ ಸಮುದಾಯದವರಿಗೆ ಭೂಮಿ ನೀಡದೆ ಸತಾಯಿಸುತ್ತಿದ್ದು ಕೊರಗ ಸಮುದಾಯಕ್ಕೆ ಬಹಳ ದೊಡ್ಡ ಅನ್ಯಾಯ ಎಸೆಯಲಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸಿಕೊಡುಬೇಕು ಎಂದು ಕೊರಗ ಸಮುದಾಯದ ಮುಖಂಡರು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಬಗೆಹರಿಯುವ ವರೆಗೆ
ನಾಡ ಗ್ರಾಮ ಪಂಚಾಯತ್ ಆವರಣದ ಒಳಗಡೆ ಧರಣಿ ಸತ್ಯಾಗ್ರಹ ಮುಂದುವರೆಯುವುದಾಗಿ ಕೊರಗ ಸಮುದಾಯ ಮುಖಂಡರು ಪಟ್ಟು ಹಿಡಿದಿದ್ದಾರೆ.
ಪ್ರತಿಭಟನೆಯ ಸ್ಥಳಕ್ಕೆ ಬೈಂದೂರು ತಹಸಿಲ್ದಾರ್ ಶ್ರೀಕಾಂತ್ ಹೆಗಡೆ ಆಗಮಿಸಿ ಕೊರಗ ಸಮಾಜದ ಮುಖಂಡರನ್ನು ಮನವೊಲಿಸಿದರು ಕೂಡ ಮಾತಿಗೆ ಮಣಿಯದ ಮುಖಂಡರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಬೇಕು ಹಾಗೂ ನಮ್ಮ ಸಮಸ್ಯೆಗಳನ್ನು ಬಗೆಹರಿಸುವವರೆಗೆ ಈ ಜಾಗವನ್ನು ಬಿಟ್ಟು ಅಲ್ಲಾಡುವುದಿಲ್ಲ ಎಂದು ಬೀಗಿ ಪಟ್ಟು ಹಿಡಿದ್ದಾರೆ.
ಜಿಲ್ಲಾಧಿಕಾರಿಗಳು ಪ್ರತಿಭಟನೆ ಸ್ಥಳಕ್ಕೆ ಆಗಮಿಸದೆ ಹೋದಲ್ಲಿ ನಾವು ಕುಟುಂಬದ ಸಮೇತರಾಗಿ ನಾಡ ಗ್ರಾಮ ಪಂಚಾಯತ್ ಒಳಗಡೆ ವಾಸ್ತವ ಹೂಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗ್ರಾಮಪಂಚಾಯತ್ ಮುಂಭಾಗದಲ್ಲಿ ತೊಟ್ಟಿಲು ತೂಗಿಸಿ ಪ್ರತಿಭಟನೆ!
ಪ್ರತಿಭಟನೆ ಯಲ್ಲಿ ಭಾಗವಹಿಸುವ ವೇಳೆ ತಾಯಿಯೊಬ್ಬಳು ತನ್ನ ಪುಟ್ಟ ಕಂದಮ್ಮನನ್ನು ಜೊತೆಗೆ ಕರೆದುಕೊಂಡು ಬಂದಿದ್ದು ಇದೇ ಸಂದರ್ಭದಲ್ಲಿ ಆ ಪುಟ್ಟ ಕಂದಮ್ಮನಿಗಾಗಿ ಅದೇ ಗ್ರಾಮ ಪಂಚಾಯತ್ ಛಾವಣಿಗೆ ತನ್ನ ಸೀರೆ ಮೂಲಕ ತೊಟ್ಟಿಲು ನಿರ್ಮಿಸಿ ತಾನು ಅದೇ ಜಾಗದಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿರುವುದು ವಿಶೇಷವಾಗಿತ್ತು.
ದಿನ ಕೂಲಿ ಕಾರ್ಮಿಕರ ಸಂಘ ಹಾಗೂ ಇತರ ಸಂಘಗಳು ಪ್ರತಿಭಟನೆಗೆ ಸಾತ್ ನೀಡಿದರು, ಸ್ಥಳದಲ್ಲಿ ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ ಹಾಗೂ ಸಿಬ್ಬಂದಿಗಳು ಮತ್ತು ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.