ಡೈಲಿ ವಾರ್ತೆ: 14 ಜೂನ್ 2023

ಬೆಳಗಾವಿಯಲ್ಲಿ ಪುಟ್ಟರಾಜ ಸೇವಾ ಸಮಿತಿಯ 6ನೇಯ ಭಕ್ತಿ ಸಾಹಿತ್ಯ ಸಮ್ಮೇಳನ

ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು ಪ್ರತಿವರ್ಷವೂ ಹಮ್ಮಿಕೊಳ್ಳುತ್ತಾ ಬಂದಿರುವ ರಾಜ್ಯಮಟ್ಟದ ೬ನೆಯ ಭಕ್ತಿ ಸಾಹಿತ್ಯ ಸಮ್ಮೇಳನ (ಪಂ.ಪುಟ್ಟರಾಜ ಸಾಹಿತ್ಯೋತ್ಸವ) ವನ್ನು ೧ ಆಕ್ಟೊಬರ್ ೨೦೨೩ ರಂದು ಬೆಳಗಾವಿ ನಗರದ ಸರಸ್ವತಿ ವಾಚನಾಲಯ ಸಭಾ ಗೃಹದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಈ ಕುರಿತು ದಿನಾಂಕ ೧೨ ಜೂನ್ ೨೦೨೩ ರಂದು ದಾವಣಗೆರೆಯಲ್ಲಿ ನಡೆದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಈ ತೀರ್ಮಾನವನ್ನು ತಗೆದುಕೊಳ್ಳಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಯವರು ಮಾತನಾಡಿ, ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು ಪೂಜ್ಯ ಗುರು ಪುಟ್ಟರಾಜರು ತ್ರಿಭಾಷಾ ಕವಿಗಳಾಗಿ ಅನೇಕ ಕೃತಿಗಳನ್ನು ರಚಿಸಿ ಕನ್ನಡ, ಹಿಂದಿ ಮತ್ತು ಸಂಸ್ಕೃತ ಭಾಷಗೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಪೂಜ್ಯರ ಭಕ್ತಿ ಸಾಹಿತ್ಯ ಸೇವೆಯ ಸ್ಮರಣೆಗಾಗಿ ಮತ್ತು ಭಕ್ತಿ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಯುವ ಕವಿ, ಸಾಹಿತಿಗಳಿಗೆ ವೇದಿಕೆ ನೀಡುವ ಮತ್ತು ಅವರ ಸಾಧನೆಯನ್ನು ಸ್ಮರಿಸುವ ಕಾರ್ಯ ಪ್ರತಿ ವರ್ಷವೂ ರಾಜ್ಯದ ಬೇರೆ ಬೇರೆ ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಳ್ಳುತ್ತಾ ಬಂದಿರುತ್ತದೆ. ೫ನೆಯ ಭಕ್ತಿ ಸಾಹಿತ್ಯ ಸಮ್ಮೇಳನವನ್ನು ಇದೇ ದಾವಣಗೆರೆ ಮಹಾ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಂದಿನ ಸಮಾರೋಪ ಸಮಾರಂಭದಲ್ಲಿಯೇ ಮುಂದಿನ ಸಮ್ಮೇಳನ ಸ್ಥಳ ಮತ್ತು ದಿನಾಂಕ ಘೋಷಣೆ ಮಾಡಬೇಕಾಗಿತ್ತು ಆದರೇ, ಹಾವೇರಿ ಶಿವಮೊಗ್ಗೆ ಮತ್ತು ಬೆಳಗಾವಿ ಈ ಮೂರು ನಗದಲ್ಲಿ ಒಂದು ನಗರದ ಆಯ್ಕೆ ಮಾಡುವಲ್ಲಿ ಅಂತಿಮ ತೀರ್ಮಾನಕ್ಕೆ ಬಾರದೆ ಘೋಷಣೆಯನ್ನು ಮುಂದೂಡಿ ಮತ್ತೊಮ್ಮೆ ರಾಜ್ಯಕಾರ್ಯ ಕಾರಿಣಿ ಮಂಡಳಿ ಸಭೆ ಸೇರಿ ತೀರ್ಮಾನಿಸಿತ್ತು. ಅದರಂತೆ ಹಿಂದಿನ ಸಮ್ಮೇಳನ ನಡೆದ ನಗರದಿಂದಲೇ ಅಧಿಕೃತ ಘೋಷಣೆ ಮಾಡಬೇಕು ಎಂಬ ಸಂಕಲ್ಪದಂತೆ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ದಾವಣಗೆರೆ ಜಿಲ್ಲಾ ಘಟಕ ಮತ್ತು ಮಹಿಳಾ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಯಿತು ಎಂದು ಚನ್ನವೀರ ಸ್ವಾಮಿ ಹೇಳಿದರು. ಅವರು ಮುಂದುವರೆದು ಮಾತನಾಡುತ್ತಾ ಈ ಸಲದ ಸಮ್ಮೇಳನ ಇನ್ನಷ್ಟು ಅರ್ಥಪೂರ್ಣವಾಗಿ ಹಮ್ಮಿಕೊಳ್ಳುವುದು ಭಕ್ತಿ ಸಾಹಿತ್ಯಕ್ಕೆ ಸಂಬಂಧಿಸಿದ ಗೋಷ್ಠಿ, ವಚನ ಗೋಷ್ಠಿ, ವಚನ ಗಾಯನ ವಚನ ನೃತ್ಯ ಕಾರ್ಯಕ್ರಮಗಳೊಂದಿಗೆ ಪುಟ್ಟರಾಜ ಸಾಹಿತ್ಯ ಪುರಸ್ಕಾರ ವಾರ್ಷಿಕ ಪ್ರಶಸ್ತಿ ಪ್ರದಾನ ಮೊದಲಾದ ಕಾರ್ಯಕ್ರಮ ಆಯೋಜಿಸುವ ಉದ್ದೇಶವಿದೆ ಮತ್ತು ಸಮಾರೋಪ ಸಮಾರಂಭದಲ್ಲಿ ನಾಡಿನ ಹರಗುರು ಚರಮೂರ್ತಿಗಳಿಂದ ನಾಡಿಗೆ ಶಾಂತಿ ಸಂದೇಶ ದೊರಕಿಸಿಕೊಡುವ ಕಾರ್ಯ ಸಮ್ಮೇಳನ ಮಾಡಲಿದೆ. ದಾವಣಗೆರೆ ಜಿಲ್ಲಾ ಘಟಕದ ಗುರು ವಚನ ಪ್ರಭಾ ಮಹಿಳಾ ವಚನ ಗಾಯನ ತಂಡದ ನೂರು ಜನ ಮಹಿಳಾ ಸದಸ್ಯರಿಂದ ಪೂಜ್ಯ ಗುರು ಪುಟ್ಟರಾಜರ ವಚನಗಳ ಸಮೂಹ ವಚನ ಗಾಯನ ಆಯೋಜನೆ ಮಾಡಲು ಯೋಚಿಸಲಾಗಿದೆ ಎಂದು ಹೇಳಿದರು. ವಿನಾಯಕ ಪಿ.ಬಿ. ಜಿಲ್ಲಾ ಅಧ್ಯಕ್ಷರು ಸರ್ವರಿಗೂ ಸ್ವಾಗತಿಸಿದರು ಎಂ. ಕೆ. ರೇವಣಸಿದ್ಧಪ್ಪ, ವಿಕ್ರಮ ವಿ. ಜೋಷಿ. ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಸತೀಶ್ ಧಾರವಾಡ, ಉಪಾಧ್ಯಕ್ಷೆ ಸಮಾಜ ಸೇವಾ ಕರ್ತೆ ವನಜ ಮಹಾಲಿಂಗಯ್ಯ, ಮಮತಾ ನಾಗರಾಜ ಹಾಲೇಶ, ಮಂಜುಳಾ ಕೆ.ಇ. ದಾಕ್ಷಾಯಣಿ ಹೆಚ್.ಎ. ಅಭಿಷೇಕ್ ಎಸ್. ಆರ್. ಪುಷ್ಪ ವೀರೇಶ ಆಂಜನೇಯ ಡಿ. ಹೆಚ್. ಮಧುಮತಿ ಗಿರೀಶ್ ದೇವಿಗೆರೆ ರಾಜಶ್ರೀ ಆರ.ಎಸ್. ಸಿ.ಜೆ.ಶಾಂತ ಶಿವಶಂಕರ್. ತನುಜ ಶ್ರೀನಾಥ ಬೆಳ್ಳುಳ್ಳಿ, ಲತಾ ಮಂಜುನಾಥ ಕಪ್ಪಾಳಿ, ಶಶಿಕಲಾ ಎಚ್.ಎಸ್. ಶಾನ್ವಿ ಆರ್ ಮೊದಲಾದವರು ಉಪಸ್ಥಿತರಿದ್ದರು ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಬಸಯ್ಯ ಚರಂತಿಮಠ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಮಾನ್ಯರೇ, ಈ ಪ್ರಕಟಣೆಯನ್ನು ತಮ್ಮ ದಿನ ಪತ್ರಿಕೆಯಲ್ಲಿ ಪ್ರಕಟಿಸಲು ಕೊರುತಿದ್ದೇನೆ
-ಶಿವಬಸಯ್ಯ ಚರಂತಿಮಠ ದಾವಣಗೆರೆ
ರಾಜ್ಯ ಸಂಘಟನಾ ಕಾರ್ಯದರ್ಶಿ