ಡೈಲಿ ವಾರ್ತೆ:16 ಜೂನ್ 2023
– ಕೆ.ಸಂತೋಷ್ ಶೆಟ್ಟಿ,ಮೊಳಹಳ್ಳಿ ,ಕುಂದಾಪುರ,ಉಡುಪಿ ಜಿಲ್ಲೆ (ಪತ್ರಕರ್ತರು &ಮಾಧ್ಯಮ ವಿಶ್ಲೇಷಕರು)
email:[email protected]
” ಹೆತ್ತ ತಾಯಿಗೆ ನ್ಯಾಯ ಸಿಗದೇ, ಸಾವಿನ ಸೂತಕದಲ್ಲಿ ಬೂದಿ ಮುಚ್ಚಿದ ಕೆಂಡದಂತಾದ ಸೌಜನ್ಯ ಕೊಲೆ ಪ್ರಕರಣ…! “2012 ರಲ್ಲಿ ಧರ್ಮಸ್ಥಳದ ಕಾನನದಲ್ಲಿ ನಡೆದಿತ್ತು ಅತ್ಯಾಚಾರ ಮತ್ತು ಕೊಲೆ ಪ್ರಕರಣ…;
ಆರೋಪಿ ಸಂತೋಷ್ ರಾವ್ ಬಿಡುಗಡೆಗೆ ಕೋರ್ಟ್ ಸಮ್ಮತಿ…!” ಕುಟುಂಬಸ್ಥರಿಗೆ ಕೊನೆಗೂ ಸಿಗಲಿಲ್ಲ ನ್ಯಾಯದ ಪರ ತೀರ್ಪು…!” ಹೆತ್ತ ಕರುಳು ಕತ್ತಲಲ್ಲಿ ಇನ್ನು ಮರುಗುತ್ತಿತ್ತು…!” ನ್ಯಾಯ ಎಲ್ಲಿದೆ…?
ಸುದ್ದಿ: ಬೆಳ್ತಂಗಡಿ /ಧರ್ಮಸ್ಥಳ:ಅಂದು ಅಕ್ಟೋಬರ್ 09 /2012, ಅಪರಿಚಿತ ಮೃತದೇಹ ಒಂದು ಮಳೆ ನಡುವೆ ಬಿದ್ದಿತ್ತು . ಒದ್ದೆಯಾಗಿ ಮುದ್ದೆಯಾಗಿ ಬಿದ್ದಿರುವ ಮೃತ ದೇಹ ಇಡೀ ದಕ್ಷಿಣ ಕನ್ನಡ ಸುತ್ತ ಸಂಶಯದ ಅನುಮಾನದ ಹುತ್ತ ಬೆಳೆದಿತ್ತು. ಆದರೆ ಬಾಲಕಿ ಎನ್ನುವುದು ಡಿಸೈಡ್ ಆಗಿತ್ತು. ಅಷ್ಟೊತ್ತಿಗಾಗಲೇ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸೌಜನ್ಯಳ ತಂದೆ ಕಾಣೆಯಾಗಿದ್ದರ ಬಗ್ಗೆ ಪ್ರಕರಣ ದಾಖಲಿಸಿದ್ದರು. ಅಲ್ಲಿಗೆ ದೃಢವಾಗಿತ್ತು ಸೌಜನ್ಯಳ ಕೊಲೆ…, ಧರ್ಮಸ್ಥಳದ ಕಾನನದ ಕತ್ತಲಲ್ಲಿ ಸೌಜನ್ಯ ಎಂಬ ಮುಗ್ಧ ಬಾಲಕಿ ಅರೆ ನಗ್ನ ಸ್ಥಿತಿಯಲ್ಲಿ ಹೆಣವಾಗಿ ಬಿದ್ದಿದ್ದಳು. ಆದರೆ ,ಈ ಕೊಲೆ ಯಾರು ಮಾಡಿದ್ದಾರೆ ಎಂಬ ಕುರುಹು ಇದುವರೆಗೂ ಸಿಕ್ಕಿಲ್ಲ ಎನ್ನುವುದು ಪೊಲೀಸ್ ಇಲಾಖೆಗೆ ಗೊತ್ತು .ಆದರೆ, ಇಂತಹ ಪ್ರಕರಣಗಳು ನಡೆದಾಗ ಸರ್ಕಾರ ಮಧ್ಯಪ್ರವೇಶಿಸಿ ಸಿಬಿಐಗೆ ಒಪ್ಪಿಸಿತು. ಆದರೆ ಪ್ರಕರಣ ಇಂದು ಮಧ್ಯಸ್ಥಿಕೆಯನ್ನ ವಹಿಸಿ ಮಹತ್ತರ ತೀರ್ಪನ್ನ ಪ್ರಕಟಿಸಿ ಆರೋಪಿ ಸಂತೋಷ್ ರಾವ್ ಬಿಡುಗಡೆ ಘೋಷಿಸಿತ್ತು.
ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೆಳೆಸಿದ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ವಿವಿಧ ತರಹದ ತಿರುವುಗಳು ಪಡೆದುಕೊಂಡಿತು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿತ್ತು ಆದರೆ ಸಿಬಿಐಗೆ ಒಪ್ಪಿಸಿದ ನಂತರ ಅತಿ ಸೂಕ್ಷ್ಮ ವ್ಯಕ್ತಿಯನ್ನ ಬಂಧಿಸುವಲ್ಲಿ ಸಿಬಿಐ ಸಫಲವಾಯಿತು ಆದರೆ ಅಕ್ಟೋಬರ್ ಒಂಬತ್ತರಂದು ಕಾಣೆಯಾದ ಸೌಜನ್ಯ ಮರುದಿನ ಅಂದರೆ ಅಕ್ಟೋಬರ್ ಹತ್ತರಂದು ಕಾನನದ ಮಧ್ಯದಲ್ಲಿ ಅರೆನಗ್ನ ಸ್ಥಿತಿಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಇಹಲೋಕವನ್ನ ತ್ಯಜಿಸಿದಳು. ಆದರೆ ಹೆತ್ತ ತಾಯಿ ಹೀಗೆ ಅದೆಷ್ಟು ನೋವು ಮರಕಟ್ಟಿತ್ತು ಗೊತ್ತಿಲ್ಲ. ಆದರೆ ಬದುಕಿನಲ್ಲಿ ವಿದ್ಯಾಭ್ಯಾಸವನ್ನು ಕಲಿತು ಏನಾದರೂ ಸಾಧನೆಯನ್ನು ಮಾಡಬೇಕು ಎನ್ನುವ ನಟ್ಟಿನಲ್ಲಿ ತನ್ನ ಜೀವನವನ್ನು ಮತ್ತು ಜೀವವನ್ನು ಸುರಕ್ಷಿತವಾಗಿ ಪ್ರಪಂಚದ ಕಡೆ ಸಾಗಿಸುವ ಪ್ರಯತ್ನ ಮಾಡಿರುವುದು ಕುಮಾರಸ್ವಾಮಿಯ ಆದರೆ ಕುಮಾರಿ ಸೌಜನ್ಯಳ ಬದುಕು ಈ ರೀತಿ ಅಂತ್ಯವಾಗುತ್ತದೆ ಎಂದು ಗೊತ್ತೇ ಇರಲಿಲ್ಲ. ಆದರೆ ತಂದೆ, ತಾಯಿ ಕುಟುಂಬಸ್ಥರು ಮರುಗಿ ಕಣ್ಣೀರಿನಲ್ಲಿ ಕೈ ತೊಳುವಂತಹ ಪರಿಸ್ಥಿತಿ ನಿರ್ಮಾಣವಾಯಿತು ಆದರೆ ಹೆತ್ತ ತಾಯಿಯ ಕಣ್ಣೀರಿಗೆ ಬೆಲೆಯೇ ಇಲ್ಲವಲ್ಲ ಎನ್ನುವುದು ಇದು ಸಾಬೀತಾಗಿದೆ. ತಾಯಿಯೊಬ್ಬಳು ತನ್ನ ಮಗಳನ್ನು ಸುರಕ್ಷಿತ ಹಾಗೂ ಅತ್ಯಂತ ಬುದ್ಧಿವಂತಿಕೆಯಿಂದ ಸಾಕಿ, ಅವಳಿಗೊಂದು ಉನ್ನತ ಸ್ಥಾನವನ್ನು ನೀಡಬೇಕೆಂದು ಕನಸಾಗಿರುತ್ತದೆ. ಅಂತಹ ಕನಸಿಗೆ ಕೊಡಲಿ ಏಟು ಕೊಟ್ಟಂತಹ ದುರುಳರು ಸಮಾಜದಲ್ಲಿ ಬದುಕುತ್ತಿದ್ದಾರೆ ಎನ್ನುವುದು ನಾಚಿಕೆಗೆ ದಿನ ಸಂಗತಿ. ಆದರೆ ಕೋರ್ಟ್ ಮೆಟ್ಟಿಲೇರಿದರೂ ಕೂಡ ಸಮರ್ಪಕ ನ್ಯಾಯ ಸಿಗಲಿಲ್ಲ ಎನ್ನುವುದೇ ನೋವಿನ ಸಂಗತಿ.
ಸಿಬಿಐ ವಿಶೇಷ ನ್ಯಾಯಾಲಯದ (CBI Special Court) ನ್ಯಾಯಾಧೀಶ ಸಂತೋಷ್.ಸಿ.ಬಿ. ಇಂದು ತೀರ್ಪು ಪ್ರಕಟಿಸಿ, ಸಾಕ್ಷ್ಯಾಧಾರ ಕೊರತೆಯಿಂದ ಆರೋಪಿಯನ್ನು ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ. ಆರೋಪಿ ಪರ ವಕೀಲ ಮೋಹಿತ್ ಕುಮಾರ್ ವಾದ ಮಂಡಿಸಿದ್ದರು.
ಸೌಜನ್ಯ ಅತ್ಯಾಚಾರ ಮತ್ತು ಕೊಲೆ (Sowjanya Rape and Murder) ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್‌ನನ್ನು ಕೋರ್ಟ್ ದೋಷಮುಕ್ತಗೊಳಿಸಿದೆ.
ಆರೋಪಿ ಪರ ವಾದ ಏನಿತ್ತು?
ಆತ್ಯಾಚಾರ ಹಾಗೂ ಕೊಲೆಯಾದ ವೇಳೆ ಆರೋಪಿ ಸ್ಥಳದಲ್ಲಿ ಇರಲಿಲ್ಲ. ರೇಪ್ ಮಾಡಿರುವ ಬಗ್ಗೆ ವೈದ್ಯಕೀಯ ವರದಿ ಇರಲಿಲ್ಲ. ಎರಡು ದಿನ ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು. ಸೌಜನ್ಯ ಮೃತಪಟ್ಟ ದಿನ ಭಾರೀ ಮಳೆ ಇತ್ತು. ಅಂದು 500 ಜನ ಹುಡುಕಾಟ ನಡೆಸಿದ್ದರು. ಆದರೆ ಅಂದು ಶವ ಪತ್ತೆಯಾಗಿರಲಿಲ್ಲ.ನದಿ ದಾಟಿ ಹೋಗಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿದ ಪೊಲೀಸರು ಎರಡು ದಿನದ ಬಳಿಕ ಸಂತೋಷ್ ರಾವ್‌ನನ್ನು ಬಂಧಿಸಿದ್ದರು. ಅಲ್ಲಿದ್ದ ಪ್ರಕೃತಿ ಚಿಕಿತ್ಸಾಲಯದ ಸಿಸಿಟಿವಿ ಸಂಗ್ರಹಿಸಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ರಾತ್ರೋರಾತ್ರಿ ಕೆಟ್ಟ ಬೆಳಕಿನಲ್ಲಿ ಮಾಡಲಾಗಿದೆ. ಸಂತೋಷ್ ರಾವ್ ಕೊಲೆ ಮಾಡಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಹೇಮಂತ್ ವಾದಿಸಿದ್ದರು.
ಏನಿದು ಸೌಜನ್ಯ ಪ್ರಕರಣ?
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ 2012ರ ಅಕ್ಟೋಬರ್ 9ರಂದು ಕಾಣೆಯಾಗಿದ್ದಳು ಎಂದು ತಂದೆ ಚಂದ್ರಪ್ಪ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಅಕ್ಟೋಬರ್ 10ರಂದು ಅರೆನಗ್ನ ಸ್ಥಿತಿಯಲ್ಲಿ ಸೌಜನ್ಯ ಶವ ಪತ್ತೆಯಾಗಿತ್ತು. ಬಳಿಕ ಆಕೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರತಿಭಟನೆ, ಆಕ್ರೋಶಕ್ಕೆ ಕಾರಣವಾಗಿತ್ತು.ಮೊದಲು ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದ್ದರು. ನಂತರ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಆ ಬಳಿಕ ಸರ್ಕಾರ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತ್ತು. 2016ರಲ್ಲಿ ತನಿಖೆ ಪೂರ್ಣಗೊಳಿಸಿದ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು.
ಅಂದು ದಕ್ಷಿಣ ಕನ್ನಡ ಕೊತ ಕೊತ:
2012 ಇಸವಿಯ ಅಕ್ಟೋಬರ್ 09 ರಂದು ಸೌಜನ್ಯ ತರಗತಿ ಮುಗಿಸಿ ಮನೆ ಕಡೆ ತೆರಳುವಾಗ, ದುರುಳರು ಧರ್ಮಸ್ಥಳದ ಕಾಡಿನಲ್ಲಿ ಎಳೆದಾಡಿ ಅತ್ಯಾಚಾರವನ್ನು ಮಾಡಿ ಕೊಲೆ ಮಾಡಿದ್ದಾರೆ. ಅರೆ ನಗ್ನ ಸ್ಥಿತಿಯಲ್ಲಿ ಕಾಡಿನ ಪೊದೆಯಲ್ಲಿ ಬಿದ್ದಂತಹ ಸೌಜನ್ಯ ಮೃತದೇಹ ಪೊಲೀಸರಿಗೆ ದೊರೆದಾದರೂ, ಸಮರ್ಪಕ ವಾದಂತಹ ತೀರ್ಮಾನ ತೆಗೆದುಕೊಳ್ಳಲು ಒಂದು ಮಳೆ ಮೋಸ ಮಾಡಿತು. ಕಾನನದ ಕತ್ತಲಲ್ಲಿ ಒಂದೇ ಸುಮ್ಮನೆ ಸುರಿಯುತ್ತಿರುವಂತಹ ಮಳೆ, ಇನ್ನೊಂದೆಡೆ ಮೃತ ದೇಹ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆವನ್ನು ಕೂಡ ಮಾಡಿದ್ದಾರೆ. ಆದರೆ ಕಿರಾತಕರು ನದಿಯನ್ನ ದಾಟಿ ಪರಾರಿಯಾಗಿದ್ದಾರೆ ಎಂಬ ಮಾಹಿತಿಯನ್ನು ಕೂಡ ದಾಖಲಿಸಿದ್ದಾರೆ. ಆದರೆ ಎಲ್ಲಿಯೂ ಕೂಡ ಆರೋಪಿಯ ಸುಳಿವು ಸಿಕ್ಕಿಲ್ಲ. ಯಾರೆಂಬುದು ಇದುವರೆಗೂ ಗೊತ್ತಾಗಿಲ್ಲ. ಈ ಪ್ರಕರಣ ಸಂಪೂರ್ಣವಾಗಿ ಸುಖಾಂತ್ಯಗೊಂಡಾಗ ಸಂತೋಷ ರಾವ್ ಎಂಬ ವ್ಯಕ್ತಿಯ ಮೇಲೆ ಅನುಮಾನಗೊಂಡು ಬಂಧಿಸಿದ್ದರು. ಆದರೆ ಸಮರ್ಪಕವಾದ ಮಾಹಿತಿ ಇಲ್ಲದ ಕಾರಣ ಕೋರ್ಟ್ ಇಂದು ಸಮಾಜಸಿ ತೀರ್ಮಾನವನ್ನ ನೀಡಿ ಸಂತೋಷ ರಾವ್ ಬಂಧನದಿಂದ ಬಿಡುಗಡೆಗೊಂಡಿತು. ಆದರೆ ಸತ್ತಂತಹ ಸೌಜನ್ಯ ಮತ್ತೆ ಮರಳಿ ಬರಲು ಸಾಧ್ಯವಿಲ್ಲವಾದರೂ, ತಂದೆ ತಾಯಿಗೆ ಅದೆಷ್ಟು ನೋವಾಗಿರಬಹುದು ಎಂದು ಭಗವಂತನಿಗೆ ಗೊತ್ತು ಅಂತಹ ನೋವನ್ನ ಅರಗಿಸುವಂತಹ ಶಕ್ತಿ ಭಗವಂತ ತಂದೆ ತಾಯಿಯವರಿಗೆ ಕುಟುಂಬದವರಿಗೆ ನೀಡಲಿ ಎನ್ನುವುದೇ ಪತ್ರಿಕೆಯ ಸದಾಶಯ.