ಡೈಲಿ ವಾರ್ತೆ:18 ಜೂನ್ 2023

ಥೀಮ್ ಪಾರ್ಕ್ ಮೂಲಕ ಕಾರಂತ ನೆನಪು ಶಾಶ್ವತ:ಜಯಲಕ್ಷ್ಮೀ ರಾಯಕೋಡ

ಕೋಟ : ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಡಾ|| ಶಿವರಾಮ ಕಾರಂತರ ಜೀವನವೇ ನಮಗೊಂದು ಪಾಠವಿದ್ದಂತೆ, ಅವರ ಬದುಕು ಬರಹವನ್ನು ಮುಂದಿನ ಜನಾಂಗಕ್ಕೆ ತಲುಪಿಸಲು ಕಾರಂತ ಥೀಮ್ ಸಹಕಾರಿ, ಅಲ್ಲದೇ ಮಕ್ಕಳಿಗಾಗಿ ಇಲ್ಲಿ ನಡೆಸುವ ಚಟುವಟಿಕೆಗಳು ಅನುಕರಣೀಯ ಎಂದು ಕಾರವಾರ ಸಹಾಯಕ ಆಯುಕ್ತರು ಜಯಲಕ್ಷ್ಮೀ ರಾಯಕೋಡ್ ಅವರು ಹೇಳಿದರು.

ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‍ಗೆ ಭೇಟಿ ನೀಡಿ ಕಾರಂತರ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗ್ರಂಥಾಲಯ, ಅಂಗನವಾಡಿ, ಆರ್ಟ್ ಗ್ಯಾಲರಿ, ಕಿರು ಸಭಾಂಗಣ, ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಭಟ್ಕಳ ಸಹಾಯಕ ಆಯುಕ್ತರು ಮಮತಾ ದೇವಿ ಜಿ.ಎಸ್ ಮಾತನಾಡಿ ಸಾಹಿತ್ಯ ಕ್ಷೇತ್ರಕ್ಕೆ ಕಾರಂತರ ಕೊಡುಗೆ ಅಪಾರವಾದುದು, ಅವರ ನುಡಿಮುತ್ತುಗಳು ಪ್ರಸ್ತುತ ಸನ್ನಿವೇಶಕ್ಕೆ ಹತ್ತಿರವಾಗಿದೆ, ಥೀಮ್ ಪಾರ್ಕ್ ಇನ್ನಷ್ಟು ಪ್ರಸಿದ್ಧಿ ಪಡೆಯಲಿ ಎಂದರು.

ಈ ಸಂದರ್ಭದಲ್ಲಿ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಶ್ರೀ ಸುಬ್ರಾಯ ಆಚಾರ್ಯ, ಮಾಜಿ ಕುಂದಾಪುರ ತಾಲ್ಲೂಕು ಪಂಚಾಯತ್ ಸದಸ್ಯ ಶ್ರೀ ಕರಣ್ ಪೂಜಾರಿ, ಕೋಟ ಶ್ರೀನಿವಾಸ ಪೂಜಾರಿ ಅವರ ಆಪ್ತ ಸಹಾಯಕರಾದ ಶ್ರೀ ಹರೀಶ್ ಕುಮಾರ್ ಶೆಟ್ಟಿ, ಶ್ರೀ ವಿವೇಕ್ ಅಮೀನ್, ಕಾಪು ಶಾಸಕರ ಆಪ್ತಸಹಾಯಕ ಶ್ರೀ ಗಿರೀಶ್ ಕುಮಾರ್ ಶೆಟ್ಟಿ, ಥೀಮ್ ಪಾರ್ಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.