ಡೈಲಿ ವಾರ್ತೆ:19 ಜೂನ್ 2023
ಹೊನ್ನಾಳ:ಸುನ್ನಿ ಸ್ಟುಡೆಂಟ್ಸ್ ಫೇಡರೇಶನ್ ಹೊನ್ನಾಳ ಶಾಖೆ ವತಿಯಿಂದ ಉಚಿತ ಪುಸ್ತಕ ವಿತರಣೆ – ಸನ್ಮಾನ,ಕ್ಯಾರಿಯರ್ ಗೈಡೆನ್ಸ್
ಬ್ರಹ್ಮಾವರ: ಕರ್ನಾಟಕ ಮುಸ್ಲಿಂ ಜಮಾಅತ್ತ್ ಹೊನ್ನಾಳ ಶಾಖೆ ನೇತೃತ್ವದಲ್ಲಿ ಸುನ್ನಿ ಸ್ಟುಡೆಂಟ್ಸ್ ಫೇಡರೇಶನ್ ಹೊನ್ನಾಳ ಶಾಖೆಯ ವತಿಯಿಂದ ಜೂ. 18 ರಂದು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹೊನ್ನಾಳದ ವಿದ್ಯಾರ್ಥಿಗಳಿಗೆ ಸತತ 15 ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂ ಪ್ರಸ್ತುತ ವರ್ಷ ಇಂಜಿನಿಯರ್ ಗಳಾದ SSF ನ ಐದು ಸದಸ್ಯರ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಕ್ಯಾರಿಯರ್ ಗೈಡೆನ್ಸ್ ಶಾಲಾ ಹಾಲ್ನಲ್ಲಿ ನಡೆಯಿತು.
ಕಾರ್ಯಕ್ರಮದ ಶಾಲಾ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಮುಸ್ಲಿಂ ಜಮಾಅತ್ತ್ ಬ್ರಹ್ಮಾವರ ತಾಲೂಕು ಅಧ್ಯಕ್ಷ ಜೆ. ಮುಷ್ತಾಕ್ ಅಹ್ಮದ್, ಹಾರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಬಾಕರ್ ಶೆಟ್ಟಿ, ಪಂಚಾಯಿತ್ತ ಸದಸ್ಯರಾದ ಗಣೇಶ್ ಶೆಟ್ಟಿ, ಸೈಯದ್ ಅಬೂ ಮುಹಮ್ಮದ್, ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ಟೀಚರ್, ಖತೀಬ್ ಅಕ್ಬರ್ ಮುಂತಾದವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಂಗಳೂರಿನ ಮುಹಮ್ಮದ್ ರಫೀಕ್ ರವರು ತಮ್ಮ ಅಧ್ಭುತ ಮಾತುಗಳ ಮೂಲಕ ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ, ಪೋಷಕರಿಗೆ ವಿಶೇಶ ತರಬೇತಿಯನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ರೂಪಿಸುವ ಬಗ್ಗೆ ಮಾರ್ಗದರ್ಶನ ನೀಡಿದರು.
ಸುಭಾನ್ ಅಹ್ಮದ್ ಹೊನ್ನಾಳ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು.ಸನ್ಮಾನ ಸ್ವೀಕರಿದ ಮುಹಮ್ಮದ್ ರಾಯಿದ್, ಸದೀದ್ ಕೆ, ಮುಹೀಫ್ ಎನ್, ಮುಫೀದ್ ಖಾಜಿ, ಮುಹಮ್ಮದ್ ಖಾಲಿದ್ ರವರು ಭವಿಷ್ಯದಲ್ಲಿ ಶಾಲೆ ಹಾಗೂ ಊರಿನ ಅಭಿವೃದ್ಧಿಗೆ ಸಹಕರಿಸವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಇಮ್ರಾನ್ ಹೆನ್ನಾಬೈಲ್, ಬಿ. ಎಸ್ಸ್ ಸುಬ್ಹಾನ್, ಅರ್ಝಾಕ್ ಹೊನ್ನಾಳ, ಅರಿಫುಲ್ಲಾ, ನಯಾಜ್ ಹನೀಫ್,ಫೈಝಾನ್ ನಸ್ರುಲ್ಲಾ, ರೆಹಾನ್ ರಫೀಕ್, ಮುಹಮ್ಮದ್ ಗೌಸ್ ಕೆ, ಸುಲೈಮಾನ್ ಶಾಲಾ ಅಧ್ಯಾಪಕ ವೃಂದ, ಶಾಲಾ ಮಕ್ಕಳು, ಪೋಷಕರು ಉಪಸ್ಥಿತರಿದ್ದರು.
ಮುಹಮ್ಮದ್ ಸೈಫಾಲಿ ಧನ್ಯವಾದ ಸಲ್ಲಿಸಿದರು.