ಡೈಲಿ ವಾರ್ತೆ: 6 ಜುಲೈ 2023

ಕೋಟ- ಜಲಾವೃತ ಸ್ಥಳಕ್ಕೆ ತಹಶಿಲ್ದಾರ್ ರಾಜಶೇಖರಮೂರ್ತಿ ಭೇಟಿ

ಕೋಟ: ಕಳೆದೆರಡು ದಿನಗಳಿಂದ. ಎಡೆಬಿಡದೆ ಸುರಿಯುತ್ತಿ ಬಾರಿ ಮಳೆಗೆ ಕೋಟ ಹೋಬಳಿ ಪ್ರದೇಶದ ಸಾಕಷ್ಟು ಭಾಗ ಜಲಾವೃತಗೊಂಡಿದೆ. ಅದರಲ್ಲಿ ಹೆಚ್ಚಿನ ಭೂ ಭಾಗ ಕೃಷಿ ಭೂಮಿಯಾಗಿದ್ದು ಇನ್ನುಳಿದ ಕೆಲ ಭಾಗಗಳು ಜನಸಮುದಾಯ ವಾಸಿಸುವ ಪ್ರದೇಶವಾಗಿದೆ.ಕೋಟ ಗ್ರಾಮಪಂಚಾಯತ್ ಮಣೂರು, ಮೂಡುಗಿಳಿಯಾರು ನೀರೋಣ ಮನೆ ಸಮೀಪ,ಮಣೂರು ಮಳಲುತಾಯಿ ದೇವಸ್ಥಾನ ಸಮೀಪ ,ಹರ್ತಟ್ಟು ಗಿಳಿಯಾರು, ಸಾಲಿಗ್ರಾಮ ಪ.ಪಂ ವ್ಯಾಪ್ತಿಯ ಚಿತ್ರಪಾಡಿ ಕೆಲ ಪ್ರದೇಶಗಳು ಮಳೆ ನೀರಿನಿಂದ ಆಮೃತವಾಗಿದೆ.

ಇದರಲ್ಲಿ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಗಿಳಿಯಾರಿನ ಕೆಲ ಪ್ರದೇಶಗಳು ಲ್ಯಾಂಡ್ ಮಾಫಿಯಾದಿಂದ ಕೃತಕ ನೆರೆ ಪೀಡಿತ ಪ್ರದೇಶವಾಗಿ ಮಾರ್ಪಾಡುಗೊಂಡಿದೆ. ಸಾಕಷ್ಟು ಕೃಷಿ ಭೂಮಿಯನ್ನು ಸ್ಪಾರ್ಟ ಸಿಟಿಯಾಗಿಸುವ ಕಾರ್ಯದಲ್ಲಿ ಮಣ್ಣು ತುಂಬಿಸಿ ನೆರೆಹಾವಳಿಗೆ ತುತ್ತಾಗುತ್ತಿದೆ. ಇದರಿಂದ ಕೃಷಿ ಕಾಯಕ ನಡೆಸುವ ರೈತ ಸಮುದಾಯಕ್ಕೆ ತಲೆನೋವಾಗಿ ಪರಿಣಮಿಸಿದೆ. ಸ್ಥಳೀಯಾಡಳಿತದ ಮನವಿಯ ಮೇರೆಗೆ ಬ್ರಹ್ಮಾವರ ತಹಶೀಲ್ದಾರ್ ಎಚ್ ರಾಜಶೇಖರಮೂರ್ತಿ ಭೇಟಿ ನೀಡಿ ಪರಿಶೀಲಿಸಿದ್ದರು.

ಈ ವೇಳೆ ಮಾತನಾಡಿ ಕೃತಕ ನೆರೆ ಹಾವಳಿ ಸಮಸ್ಯೆ ಮುಕ್ತಿಗಾಣಸಬೇಕಾದರೆ ಇಲ್ಲಿನ ಸ್ಥಳೀಯ ಹೊಳೆಸಾಲು, ತೋಡುಗಳನ್ನು ಹೂಳೆತ್ತಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕಾಗಿದೆ ಈ ಬಗ್ಗೆ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸುದರು.

ಈ ವೇಳೆ ಸ್ಥಳೀಯಾಡಳಿತ ಜನಪ್ರತಿನಿಧಿಗಳು,ಅಧಿಕಾರಿ ವರ್ಗ, ಕೃಷಿಕರು ಉಪಸ್ಥಿತರಿದ್ದರು.