ಡೈಲಿ ವಾರ್ತೆ:07 ಜುಲೈ 2023
ಇಂದು 14ನೇ ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ: ಗ್ಯಾರಂಟಿ ಮಧ್ಯೆ ಹೆಚ್ಚಿದ ನಿರೀಕ್ಷೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 14ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಈ ಬಜೆಟ್‍ನಲ್ಲಿ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ನಡುವೆ ನಿರೀಕ್ಷೆಗಳು ಹೆಚ್ಚಿವೆ.
ಸರ್ಕಾರ ಬಂದರೆ ಭರವಸೆ ಈಡೇರಿಸುತ್ತೇವೆ ಎಂದಿದ್ದ 5 ಪ್ರಮುಖ ಭರವಸೆಗಳಿಗೆ ಬಜೆಟ್ ನಲ್ಲಿ ಮಾನ್ಯತೆ ಸಿಗುತ್ತಾ?. ಐದು ಗ್ಯಾರಂಟಿ ಅನುಷ್ಠಾನದ ಹೊರೆ ಜೊತೆ ಆರ್ಥಿಕ ವ್ಯವಸ್ಥೆ ಸರಿದೂಗಿಸಿಕೊಂಡು ಕೊಟ್ಟಿದ್ದ 5 ಭರವಸೆಯನ್ನು ಸಿಎಂ ಈಡೇರಿಸ್ತಾರಾ ಎಂಬ ಪ್ರಶ್ನೆ ಎದ್ದಿದೆ. ಗ್ಯಾರಂಟಿ ಅನುಷ್ಠಾನದ ಜೊತೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಕೆಲವೊಂದು ಅಂಶಗಳನ್ನು ಅನುಷ್ಠಾನ ಮಾಡುವ ಸವಾಲು ಕೂಡ ಇದೆ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಅಂಶಗಳ ಅನುಷ್ಠಾನಕ್ಕೆ ಸಂಬಂಧಿಸಿ ಬಜೆಟ್ ನಲ್ಲಿ ಮಹತ್ವದ ಘೋಷಣೆಗಳ ನಿರೀಕ್ಷೆ ಇದೆ.
ಅಂಗನವಾಡಿ ಕಾರ್ಯಕರ್ತರ ಗೌರವಧನ 11,500 ರಿಂದ 15 ಸಾವಿರಕ್ಕೆ ಹೆಚ್ಚಳ ಘೋಷಣೆ ಮಡುವ ನಿರೀಕ್ಷೆ ಇದೆ. ಅಂಗನವಾಡಿ ಸಹಾಯಕರ ಗೌರವಧನ 7.500 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಆಶಾ ಕಾರ್ಯಕರ್ತೆಯರ ಗೌರವಧನ 5 ಸಾವಿರ ದಿಂದ 8 ಸಾವಿರಕ್ಕೆ ಹೆಚ್ಚಳ, ಬಿಸಿ ಊಟ ಕಾರ್ಯಕರ್ತೆಯರ ಗೌರವಧನ 3,700 ರಿಂದ 5 ಸಾವಿರಕ್ಕೆ ಹೆಚ್ಚಳ, ಗುತ್ತಿಗೆ ಆಧಾರಿತ ಪೌರ ಕಾರ್ಮಿಕರ ಖಾಯಂ ಘೋಷಣೆ ನಿರೀಕ್ಷೆ ಇದೆ.
ಇನ್ನೂ ಹಲವು ಕಾರ್ಯಕ್ರಮಗಳಿಗೆ ಅವುಗಳೆಲ್ಲವನ್ನ ಅನುಷ್ಠಾನ ಮಾಡುವ ಸವಾಲು ಸಿದ್ದರಾಮಯ್ಯ ಸರ್ಕಾರದ ಮುಂದಿದೆ. ಈ ಎಲ್ಲಾ ಭರವಸೆಗಳನ್ನ ಕಾಂಗ್ರೆಸ್ ನಾಯನಕರು ಚುನಾವಣೆಯಲ್ಲಿ ನೀಡಿದ್ದರು. ಆದ್ದರಿಂದ ಬಜೆಟ್ ನಲ್ಲಿ ಘೋಷಣೆ ಆಗಬಹುದು ಎಂಬ ನಿರೀಕ್ಷೆಯು ಹೆಚ್ಚಿದೆ.