ಡೈಲಿ ವಾರ್ತೆ: 7 ಜುಲೈ 2023

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಿದ್ದರಾಮಯ್ಯರವರ ಬಜೆಟ್ನಲ್ಲಿ ಬಂಪರ್ ಗಿಫ್ಟ್

ಬೆಂಗಳೂರು: ಚುನಾವಣೆಯಲ್ಲಿ ಬೆನ್ನಿಗೆ ನಿಂತ ಅಲ್ಪಸಂಖ್ಯಾತ ಸಮುದಾಯಕ್ಕೆ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಬಂಪರ್ ಗಿಫ್ಟ್ ನೀಡಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಇದೀಗ ಯೋಜನೆ ಮುಂದುವರಿಸಲು ಸುಮಾರು 60 ಕೋಟಿ ಮೀಸಲಿಡಲಾಗಿದೆ.

*ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಿದ ಕೊಡುಗೆ:*
➤10 ಹೊಸ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಶಾಲೆಗಳ ಆರಂಭ
➤ಈಗಿನ 62 ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಶಾಲೆಗಳ ಉನ್ನತಿಕರಣ
➤ಮೌಲಾನಾ ಆಜಾದ್ ಶಾಲೆಗಳ ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮ
➤ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಇಂಜಿನಿಯರಿಂಗ್, ವೈದ್ಯಕೀಯ ಕೊರ್ಸ್ಗೆ ಸಾಲ. ವ್ಯಾಸಂಗ ಮಾಡಲು 2% ಬಡಿ ದರದಲ್ಲಿ ಸಾಲ
➤ಅಲ್ಪಸಂಖ್ಯಾತ ಯುವಕರಿಗೆ ಕೌಶಲ ತರಬೇತಿ
➤ರಾಮನಗರ,ಬೆಳಗಾವಿ, ದಾವಣಗೆರೆ, ಕಲಬುರಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೌಶಲ್ಯಭಿವೃದ್ದಿ ತರಬೇತಿಗೆ ನಾಲ್ಕು ಕೋಟಿ ಮೀಸಲು
➤ಬೆಂಗಳೂರಿನ ಹಜ್ ಭವನದಲ್ಲಿ IAS/KAS ತರಬೇತಿ ಪ್ರಾರಂಭ
➤ವಸತಿ ಸಹಿತ ತರಬೇತಿ ನೀಡಲು ನಿರ್ಧಾರ
➤ಅಲ್ಪಸಂಖ್ಯಾತ 250ರ ವಿವಿ ರಾಂಕಿಂಗ್ ಪಡೆದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡಲು‌ ಶೂನ್ಯ ಬಡ್ಡಿಯಲ್ಲಿ ಸಾಲ.