ಡೈಲಿ ವಾರ್ತೆ: 7 ಜುಲೈ 2023

ಅನುಷ್ಠಾನಕ್ಕೆ ಸಾಧ್ಯವಾಗದ ಬಜೆಟ್ : ಪ್ರಭಾಕರ ಪ್ರಭು

ಬಂಟ್ವಾಳ : ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಜಾತ್ಯತೀತ ನಿಲುವು , ಬಜೆಟ್ ನಲ್ಲಿ ಮಾತ್ರ ಜಾತಿ,ಧರ್ಮದ ಪರ ನಿಲುವಾಗಿದೆ, ಶಾಸಕರ ವಿಶೇಷ ಅನುದಾನ ಕಡಿತದಿಂದ ಸ್ಥಳೀಯ ಅಭಿವೃದ್ಧಿ ಕುಂಠಿತ, ಹೊಸ ಶಿಕ್ಷಣ ನೀತಿ ರದ್ಧತಿ, ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ವಾಪಸ್, ಕೃಷಿ ಸಮ್ಮಾನ್ ರಾಜ್ಯದ ಪಾಲು ಕಡಿತ ಸೇರಿದಂತೆ ರಾಷ್ಟೀಯ ಚಿಂತನೆಯುಳ್ಳ ಯೋಜನೆ ಕಡಿತ ಮಾಡಿರುವುದು ದ್ವೇಷದಿಂದ ಕೂಡಿದ್ದು ಖಂಡನೀಯವಾಗಿದ್ದು ಒಟ್ಟಾರೆ ಇದೊಂದು ಸಂಪೂರ್ಣ ಅನುಷ್ಠಾನಕ್ಕೆ ಸಾಧ್ಯವಾಗದ ಬಜೆಟ್ ಇದಾಗಿದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.