ಡೈಲಿ ವಾರ್ತೆ:12 ಜುಲೈ 2023
ಮಹಿಳಾ ಬಾಡಿಗೆದಾರರ ಕೊಠಡಿಯೊಳಗೆ ಹಿಡನ್ ಕ್ಯಾಮೆರಾ ಅಳವಡಿಕೆ: ಕಟ್ಟಡದ ಮಾಲೀಕನ ಬಂಧನ!
ಹೈದರಾಬಾದ್: ಮಹಿಳಾ ಬಾಡಿಗೆದಾರರ ಕೋಣೆಯಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿದ ಆರೋಪದ ಮೇಲೆ ಮನೆ ಮಾಲೀಕನನ್ನು ಮಂಗಳವಾರ ಬಂಧಿಸಲಾಗಿದೆ.
ಜುಬಿಲಿ ಹಿಲ್ಸ್ ಪ್ರದೇಶದ ಇಬ್ಬರು, ಆರೋಪಿಗಳ ವಿರುದ್ಧ ದೂರು ನೀಡಿದ ನಂತರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಸೈಯದ್ ಸಲೀಂ ಬಂಧಿತ ಮನೆ ಮಾಲೀಕ.
45 ವರ್ಷದ ಈತ ಜುಬಿಲಿ ಹಿಲ್ಸ್ ಬಳಿಯ ಹೈಲಂ ಕಾಲೋನಿಯಲ್ಲಿ ಐದು ಅಂತಸ್ತಿನ ಕಟ್ಟಡವನ್ನು ಹೊಂದಿದ್ದಾನೆ. ಸೈಯದ್ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದಾನೆ. ಉಳಿದ ಫ್ಲ್ಯಾಟ್‌ಗಳನ್ನು ಬಾಡಿಗೆಗೆ ನೀಡಿದ್ದನು.
ಹಿಡನ್ ಕ್ಯಾಮೆರಾಗಳು ಕಂಡುಬಂದಿವೆ :
ಕೆಲವು ತಿಂಗಳ ಹಿಂದೆ ಇಬ್ಬರು ಮಹಿಳೆಯರು ಬಾಡಿಗೆಗೆ ಬಂದಿದ್ದಾರೆ. ಪದೇ ಪದೇ ವಿದ್ಯುತ್ ಕಡಿತದಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಬಾಡಿಗೆದಾರರು ತಮ್ಮ ಕೊಠಡಿಯೊಳಗಿನ ವಿದ್ಯುತ್ ಮೀಟರ್ ಬಾಕ್ಸ್ ಅನ್ನು ಪರಿಶೀಲಿಸಲು ಎಲೆಕ್ಟ್ರಿಷಿಯನ್‌ಗೆ ಕರೆ ಮಾಡಿದರು. ಮೀಟರ್ ಬಾಕ್ಸ್ ತೆರೆದು ನೋಡಿದಾಗ ಅದರೊಳಗೆ ಬಚ್ಚಿಟ್ಟಿದ್ದ ಸಿಸಿಟಿವಿ ಕ್ಯಾಮೆರಾ ಪತ್ತೆಯಾಗಿದೆ.
ಮಹಿಳೆಯರು ಬಟ್ಟೆ ಬದಲಾಯಿಸುವುದನ್ನು ರೆಕಾರ್ಡ್ ಮಾಡಲು ಮನೆಯ ಮಾಲೀಕ ಸಿಸಿಟಿವಿ ಕ್ಯಾಮೆರಾವನ್ನು ಕೊಠಡಿಯೊಳಗೆ ಹಾಕಿದ್ದನು. ಸೈಯದ್ ನಿವಾಸದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಕಂಪ್ಯೂಟರ್‌ಗೆ ಸಂಪರ್ಕ ಕಲ್ಪಿಸಿರುವುದು ಕೂಡ ಪತ್ತೆಯಾಗಿದೆ. ನಂತರ ಮಹಿಳೆಯರು ಜುಬಿಲಿ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಹಾರ್ಡ್ ಡ್ರೈವ್‌ನೊಂದಿಗೆ ಹಿಡನ್ ಕ್ಯಾಮೆರಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.