ಡೈಲಿ ವಾರ್ತೆ:14 ಜುಲೈ 2023
ವಿಧಾನಸೌಧದಲ್ಲಿ ನಕಲಿ ಪಾಸ್ ಹಾವಳಿ : 4 ದಿನದಲ್ಲಿ 300ಕ್ಕೂ ಹೆಚ್ಚು ನಕಲಿ ಪಾಸ್ ಪತ್ತೆ !
ಬೆಂಗಳೂರು: ರಾಜಧಾನಿಯ ವಿಧಾನಸೌಧದಲ್ಲಿ ಪ್ರವೇಶ ಪಡೆಯುವುದಕ್ಕೆ ನಕಲಿ ಪಾಸ್‌ಗಳ ಬಳಕೆಯಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಕಲಿ ಪಾಸ್‌ಗಳನ್ನು ಬಳಸಿ ವಿಧಾನಸೌಧದಲ್ಲೇ ವ್ಯವಹಾರ ನಡೆಸಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ 300 ಕ್ಕೂ ನಕಲಿ ಪಾಸ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ತಿಪ್ಪೇರುದ್ರಪ್ಪ ಕೇಸ್ ಬಳಿಕ ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ.
ಸಿಸಿಬಿ ಮುಖ್ಯಸ್ಥರಾಗಿದ್ದ ಡಾ.ಶರಣಪ್ಪ ವಿಧಾನಸೌಧ ಭದ್ರತೆ ನೇತೃತ್ವ ವಹಿಸಿದ್ದಾರೆ.
ವಿಧಾನಸೌಧಕ್ಕೆ ಬರುವ ಪ್ರತಿಯೊಬ್ಬರನ್ನು ತಪಾಸಣೆ ನಡೆಸಲಾಗುತ್ತಿದೆ. ಅಧಿಕೃತ ಪಾಸ್‌ಗಳ ಕಲರ್ ಜೆರಾಕ್ಸ್, ಹಳೇ ಪಾಸ್‌ಗಳು, ಅವಧಿ ಮುಗಿದಿರೋ ಪಾಸ್‌ಗಳನ್ನು ಬಳಸಲಾಗುತ್ತಿತ್ತು. ಅಲ್ಲದೇ ಕೆಲ ವಾಹನಗಳ ನಕಲಿ ಪಾಸ್ ಪತ್ತೆಯಾಗಿವೆ.
ಎಂಎಲ್‌ಎ, ಎಂಎಲ್‌ಸಿಗಳಿಗೆ ನೀಡಿರುವ ಪಾಸ್‌ಗಳನ್ನು ಕಲರ್ ಜೆರಾಕ್ಸ್ ಮಾಡಿ ಹಲವರು ವಿಧಾನಸೌಧ ಬರುತ್ತಿದ್ದರು. ನಕಲಿ ಪಾಸ್‌ಗಳನ್ನ ಬಳಸಿ ಒಳ ಪ್ರವೇಶಿಸುವವರ ನಿಯಂತ್ರಣಕ್ಕೆ ವಿಧಾನಸೌಧಕ್ಕೆ ಪ್ರವೇಶ ನೀಡುವ ಎಲ್ಲಾ ಗೇಟ್‌ಗಳಲ್ಲಿ ಪ್ರತಿಯೊಬ್ಬರ ಪರಿಶೀಲನೆ ನಡೆಸಲಾಗುತ್ತಿದ್ದು, ಅವಧಿ ಮುಗಿದಿರುವ ಪಾಸ್, ಕಲರ್ ಜೆರಾಕ್ಸ್ ಪಾಸ್‌ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಹಲವು ರಾಜಕಾರಣಿಗಳ ಬೆಂಬಲಿಗರಿಂದ ನಕಲಿ ಪಾಸ್‌ಗಳ ಬಳಕೆಯಾಗುತ್ತಿದೆ ಎನ್ನಲಾಗಿದೆ. ಸದ್ಯ ನಕಲಿ ಪಾಸ್ ಬಳಸುತ್ತಿದ್ದ ಎಲ್ಲರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಪರಿಶೀಲನೆ ನಂತರ ಮಾಜಿ ಎಂಎಲ್ಎ, ಎಂಎಲ್‌ಸಿ ಪಾಸ್‌ಗಳೇ ನಕಲಿಯಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ವಿಧಾನಸೌಧ ಸಿಬ್ಬಂದಿ ಎಂದೇ ನಕಲಿ ಪಾಸ್ ಬಳಕೆ ಮಾಡಿರುವುದು ಕಂಡುಬಂದಿದೆ. ಈ ನಕಲಿ ಪಾಸ್‌ಗಳ ಹಿಂದಿನ ಉದ್ದೇಶ ಏನು ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.