ಡೈಲಿ ವಾರ್ತೆ:26 ಜುಲೈ 2023

ಜುಲೈ 28 ರಂದು ‘ಆರ’ ತೆರೆಗೆ
ದೈವ ಹಾಗೂ ದುಷ್ಟ ಶಕ್ತಿ ನಡುವಿನ ಸಂಘರ್ಷದ ಕಥೆಯೇ ‘ಆರ’

ದೈವ ಹಾಗೂ ದುಷ್ಟ ಶಕ್ತಿಯ ಕಥೆ ಹೇಳಲು ಹೊರಟ ‘ಆರ’ ಚಿತ್ರ ಸ್ಪಿರಿಚ್ಯುಯಲ್ ಡ್ರಾಮಾ ಹಾಗೂ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡಿದೆ. ದೈವ ಹಾಗೂ ದುಷ್ಟ ಶಕ್ತಿ ನಡುವಿನ ಸಂಘರ್ಷದ ಕಥೆ ಚಿತ್ರದಲ್ಲಿದೆ. ‘ಅರ’ ಎಂಬ ಹುಡುಗನ ಜರ್ನಿ ಈ ಚಿತ್ರ ಒಳಗೊಂಡಿದೆ. ದುಷ್ಟ ಶಕ್ತಿಗಳು ಹೆಣ್ಣು, ಹೊನ್ನು, ಮಣ್ಣು ರೂಪದಲ್ಲಿ ನೀಡುವ ಸವಾಲುಗಳನ್ನು ಎದುರಿಸಿ ಆತ ತನ್ನ ತಾತನಿಂದ ಬಳುವಳಿಯಾಗಿ ಬಂದ ಕಾಡನ್ನು ಉಳಿಸಿಕೊಳ್ಳುವಲ್ಲಿ ಜಯಶಾಲಿಯಾಗುತ್ತಾನಾ..? ಈ ಜರ್ನಿಯಲ್ಲಿ ಆತ ಕಂಡು ಕೊಂಡ ಉತ್ತರವೇನು ಎನ್ನೋದು ಈ ಚಿತ್ರದ ಎಳೆ.

ಅಶ್ವಿನ್ ವಿಜಯಮೂರ್ತಿ ನಿರ್ದೇಶನದ ಚೊಚ್ಚಲ ಚಿತ್ರ ’ಆರ’ ಜುಲೈ 28 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಉಡುಪಿ ಪರಿಸರದಲ್ಲಿ ಚಿತ್ರೀಕರಿಸಲಾದ ಆರ ಸಿನಿಮಾವು ಸಸ್ಪೆನ್ಸ್, ಪ್ರಣಯ, ಥ್ರಿಲ್ಲರ್ ಮತ್ತು ಕಮರ್ಷಿಯಲ್ ಅಂಶಗಳ ಮಿಶ್ರಣವಾಗಿದೆ.

ಉಡುಪಿ ಜಿಲ್ಲೆಯ ಕೋಟೇಶ್ವರ ಮೂಲದ ಹಿರಿಯ ಪತ್ರಕರ್ತ ನಾಗೇಶ್ ಚಡಗರ ಪುತ್ರ ಎ.ಆರ್. ರೋಹಿತ್ ನಾಯಕನಾಗಿ ನಟಿಸಿದ್ದು, ನರಸಿಂಹ ಮತ್ತು ಆಂಜನೇಯನಂತಹ ದೈವಿಕ ಅಂಶಗಳನ್ನು ಒಳಗೊಂಡ ಆರು ವಿಭಿನ್ನ ಛಾಯೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದೀಪಿಕಾ ಆರಾಧ್ಯ ನಾಯಕಿಯಾಗಿ ನಟಿಸಿದ್ದು. ಚಿತ್ರದ ಪಾತ್ರವರ್ಗದಲ್ಲಿ ಸತ್ಯರಾಜ್ ಮತ್ತು ಆನಂದ್ ನೀನಾಸಂ ಸೇರಿದಂತೆ ಪ್ರಮುಖ ಇತರರು ನಟಿಸಿದ್ದಾರೆ. ಆರವನ್ನು ಚಂದ್ರಶೇಖರ ಸಿ ಜಂಬಿಗಿ ಅವರು ಸುಜಾತಾ ಚಡಗ ಅವರ ಸಹಯೋಗದೊಂದಿಗೆ ನಿರ್ಮಿಸಿದ್ದಾರೆ. ಎ.ಆರ್. ರೋಹಿತ್ ಚಿತ್ರದ ಬರಹಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಶ್ರೀ ಹರಿ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ.
ಚಿತ್ರದ ಸಂಗೀತವನ್ನು ಗಿರೀಶ್ ಹೊಸೂರು ಸಂಯೋಜಿಸಿದ್ದಾರೆ.