ಡೈಲಿ ವಾರ್ತೆ: 26 ಜುಲೈ 2023

ರೋಟರಿ ಕ್ಲಬ್ ಬಿ.ಸಿ ರೋಡ್ ಸಿಟಿ ಹಾಗೂ ರೋಟರಿ ಕ್ಲಬ್ ಮಂಗಳೂರು ಮೆಟ್ರೋ ಸಹಭಾಗಿತ್ವದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಅವಶ್ಯಕ ಸಾಮಾಗ್ರಿ ವಿತರಣೆ.

ಬಂಟ್ವಾಳ : ರೋಟರಿ ಕ್ಲಬ್ ಬಿ.ಸಿ ರೋಡ್ ಸಿಟಿ ಹಾಗೂ ರೋಟರಿ ಕ್ಲಬ್ ಮಂಗಳೂರು ಮೆಟ್ರೋ ಸಹಭಾಗಿತ್ವದಲ್ಲಿ ಕ್ಲಬ್ ಅಧ್ಯಕ್ಷರಾದ ಪಿ.ಎಚ್.ಎಫ್ ಗಣೇಶ್ ಶೆಟ್ಟಿ ಹಾಗೂ ಮೇಜರ್ ಡೋನರ್ ರಜನಿ ರಂಗನಾಥ್ ಭಟ್ ಇವರ ನೇತೃತ್ವದಲ್ಲಿ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮೊಗರ್ನಾಡ್, ನಿನ್ನಿ ಪಡುಪು ಹಾಗೂ ನಾಟಿ ಅಂಗನವಾಡಿ ಕೇಂದ್ರಗಳಿಗೆ ಅವಶ್ಯಕ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಮೂರು ಅಂಗನವಾಡಿಯ ಪುಟಾಣಿ ಮಕ್ಕಳಿಗೆ, ಮೇಲ್ವಿಚಾರಕರಿಗೆ ಹಾಗೂ ಸಹಾಯಕಿಯರಿಗೆ ಅವಶ್ಯಕ ಸಾಮಾಗ್ರಿಗಳಾದ ಸಮವಸ್ತ್ರ, ಛತ್ರಿಗಳನ್ನು ಪೀಡಿಜಿ ರಂಗನಾಥ್ ಭಟ್, ಜಿಎಸ್ಆರ್ ಪದ್ಮನಾಭ ರೈ, ಐಪಿಪೀ ಪಲ್ಲವಿ ಕಾರಂತ್, ಸ್ಥಾಪಕ ಅಧ್ಯಕ್ಷರಾದ ಸತೀಶ್ ಕುಮಾರ್ ಇವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.

ಈ ಸಂದರ್ಭ ಪಿಡಿಜಿ ರಂಗನಾಥ್ ಭಟ್ ಮಾತನಾಡಿ ಈ ವರ್ಷದ ರೋಟರಿ ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಹಾಗೂ ಅವಶ್ಯಕತೆ ಮೂಲಭೂತ ಸೌಕರ್ಯಗಳ ನೀಡುವಿಕೆಯಿಂದ ಪುಟಾಣಿ ಮಕ್ಕಳಿಗೆ ಪ್ರಥಮ ಹಂತದಲ್ಲಿ ವಿದ್ಯೆ ಕಲಿಯಲು ಸಂಪೂರ್ಣ ಸಹಕಾರಿಯಾಗುವುದು ಎಂದರು.

ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸೌಕರ್ಯಗಳ ಬಗ್ಗೆ ಪರಿಶೀಲಿಸಿ ರೋಟರಿ ಕ್ಲಬ್ಬಿನಿಂದ ಅವಶ್ಯಕ ವಸ್ತುಗಳ ನೀಡುವಿಕೆ ಬಗ್ಗೆ ಕ್ಲಬ್ ಅಧ್ಯಕ್ಷರು ಭರವಸೆ ನೀಡಿದರು.

ಇದರೊಂದಿಗೆ ಮೂರು ಅಂಗನವಾಡಿ ಕೇಂದ್ರಗಳಲ್ಲಿ ಸದಸ್ಯರ ಸಹಕಾರದೊಂದಿಗೆ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿ ಮೇಲ್ವಿಚಾರಕರಿಗೆ ಹಾಗೂ ಮಕ್ಕಳ ಹೆತ್ತವರಿಗೆ ಔಷಧೀಯ ಗುಣವಿರುವ ಸಸ್ಯಗಳನ್ನು ವಿತರಿಸಲಾಯಿತು.

ಕಾರ್ಯದರ್ಶಿ ಮಧುಸೂದನ್, ಸುರೇಖಾ ಕಿಣಿ, ಕಮ್ಯುನಿಟಿ ಚೇರ್ಮನ್ ಸುಧೀರ್ ಶೆಟ್ಟಿ, ಡಾ ವಿದ್ಯಾ ಅರವಿಂದ್, ಆಶಾ ಮಣಿ ಡಿ. ರೈ, ಜ್ಯೋತಿಂದ್ರ ಶೆಟ್ಟಿ, ಪ್ರಶಾಂತ್ ಕಾರಂತ್, ಉಮೇಶ್ ನೆಲ್ಲಿಗುಡ್ಡೆ, ಆಲ್ಬರ್ಟ್ ಮೆನೇಜಸ್, ಸುಂದರ್ ಬಂಗೇರ, ದಯಾನಂದ ಮೋಗರ್ನಾಡ್, ದಯಾನಂದ ರೈ, ಮನೀಶ್, ಲತಾ ರಾಜೇಶ್, ಸುರೇಖಾ ಕಾಮತ್, ಅಶ್ವಿನಿ ಕಾಮತ್, ಛಾಯಾ ಕಾಮತ್, ಸ್ವಾತಿ ಪ್ರಸಾದ್, ಪೂಜಾ ಶಣೈ, ಸುರೇಶ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.