ಡೈಲಿ ವಾರ್ತೆ:04 ಆಗಸ್ಟ್ 2023

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು.

ಬಂಟ್ವಾಳ : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಯುವಕನೋರ್ವನ‌ ವಿರುದ್ಧ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಗುರುವಾರ ರಾತ್ರಿ ಪ್ರಕರಣ ದಾಖಲಾಗಿದೆ.

ನರಿಕೊಂಬು ನಿವಾಸಿ ರಿಕ್ಷಾ ಚಾಲಕ ಅಬುಬಕ್ಕರ್ ಸಿದ್ದೀಕ್ ಎಂಬಾತ ಕಿರುಕುಳ ನೀಡಿರುವುದಾಗ ಬಾಲಕಿಯ ತಂದೆ ದೂರು ನೀಡಿದ್ದಾರೆ.

ಪಾಣೆಮಂಗಳೂರು ಸಮೀಪದ ಕಾಲೇಜೊಂದರ ಬಳಿ ರಸ್ತೆ ಬದಿಯಲ್ಲಿ ‌ಬಸ್ ಗಾಗಿ ಕಾಯುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಯುವಕ ಬಾಲಕಿಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಬಾಲಕಿ ಯುವಕನ ಕಿರುಕುಳದಿಂದ ಹೆದರಿ ಮೂರ್ಚೆ ಹೋಗಿ ರಸ್ತೆ ಬದಿ ಬಿದ್ದಿದ್ದು ಈಕೆಯನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ .

ಮಾದಕ ಚಾಕಲೇಟ್ ತಿಂದು ಯುವತಿ ಅಸ್ವಸ್ಥ, ಗಾಳಿ ಸುದ್ದಿ:
ರಿಕ್ಷಾ ಚಾಕನೋರ್ವ ಬಾಲಕಿಗೆ ಮಾದಕ ಚಾಕಲೇಟ್ ನೀಡಿದ್ದು, ಚಾಕಲೇಟ್ ತಿಂದ ಬಾಲಕಿ ಮೂರ್ಚೆ ಹೋಗಿ ಬಿದ್ದಿದ್ದಾಳೆ, ಅವಳನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ, ಹೀಗೊಂದು ಗಾಳಿ ಸುದ್ದಿ ಹರಡಿದಾಡಿದ್ದು ಆಸ್ಪತ್ರೆಯಲ್ಲಿ ಜನ ಸೇರಿದ್ದರು.

ಸುದ್ದಿ ಹರಡಿದಾಡುತ್ತಿರುವ ಮಾಹಿತಿ ಪಡೆದ ತಕ್ಷಣ ಕಾರ್ಯಪ್ರವೃತ್ತರಾದ ಬಂಟ್ವಾಳ ನಗರ ಪೊಲೀಸರು ಚಾಕಲೇಟನ್ನು ವಶಕ್ಕೆ ಪಡದು ಪರೀಕ್ಷೆ ನಡೆಸಿದ್ದು , ಅದು ಮಾದಕ ಚಾಕಲೇಟ್ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಯಾವುದೇ ಸಂದೇಹ ಬೇಡ, ಆರೋಪಿಯನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.