ಡೈಲಿ ವಾರ್ತೆ:04 ಆಗಸ್ಟ್ 2023

– ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ .ಉಡುಪಿ ಜಿಲ್ಲೆ.m:9632581508

“ವರುಷಗಳೇ ಗತಿಸಿ ಹೋದರೂ, ಮರೀಚಿಕೆಯಾಗಿ ಉಳಿದ ಮೊಳಹಳ್ಳಿ ಗ್ರಾಮದ ಮೊಬೈಲ್ ನೆಟ್ವರ್ಕ್ ಸಮಸ್ಯೆ…..!” ಆನ್ಲೈನ್ ಕೆಲಸಗಳಿಗೆ ತೊಡಕು, ಗ್ರಾಮಸ್ಥರ ನಿರಂತರ ಆಕ್ರೋಶ…!” ಕಣ್ಣಿದ್ದು ಕುರುಡರಾದ ಜನಪ್ರತಿನಿಧಿಗಳಿಗೆ ಏನೆನ್ನಬೇಕು….!?”network – not work….!”

ಸುದ್ದಿ:ಕುಂದಾಪುರ
ಅದು ಬಹುದೊಡ್ಡ ಗ್ರಾಮ, ಕೃಷಿ ಆಧರಿತ ಭೂಮಿಯ ಸುಂದರ ತಾಣ, ಆದರೆ ಬಹುದಿನದ ಸಮಸ್ಯೆಗೆ ಇನ್ನೂ ಸಿಕ್ತಿಲ್ಲ ಮುಕ್ತಿಯ ಹಾದಿ…, ಹಲೋ ಎಂದರೆ, ಹಾಲು ಎಂದು ಕೇಳಿಸುವ ಧ್ವನಿ…., ಹೌದು ಸ್ವಾಮಿ, ಇದು ಮೊಳಹಳ್ಳಿ ಗ್ರಾಮದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಸರಿಯಾಗಿ ಈ ರೀತಿ ಕೇಳಿಸುವ ಕರ್ಕಶ ಧ್ವನಿ…,!” ಈ ಸಮಸ್ಯೆಗೆ ಇನ್ನಾದರೂ ಗ್ರಾಮ ದೇವರು ಮೊಳಹಳ್ಳಿ ಶಿವರಾಯನೇ ಕಾಪಾಡಬೇಕು ಏನೋ ಗೊತ್ತಿಲ್ಲ…!?”
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಹುದೊಡ್ಡ ಗ್ರಾಮವೆನಿಸಿರುವ ಮೊಳಹಳ್ಳಿ. ವಿಶಿಷ್ಟ ಪ್ರಾಕೃತಿಕ ಹಾಗೂ ದೈವದತ್ತವಾಗಿ ನೆಲವುರಿರುವ ಪ್ರಾಕೃತಿಕ ಸ್ಥಳವೂ ಹೌದು…!” ನೂರಾರು ಸಮುದಾಯದವರು ಬಾಳಿ ಬದುಕುತ್ತಿರುವಂತಹ ತಾಲೂಕಿನಲ್ಲಿಯೇ ಬಹುದೊಡ್ಡ ಎಂಬ ಗ್ರಾಮಗಳ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಇದುವರೆಗೂ ಕೂಡ ಮೂಲಭೂತ ಸೌಕರ್ಯಗಳಲ್ಲಿ ವಂಚಿತವಾದರೂ, ಇದೀಗ ರಸ್ತೆ ವಿವಿಧ ಕಾಮಗಾರಿಗಳು ಕೂಡ ಬರದಿಂದ ಸಾಗಿದ್ದು ಗ್ರಾಮಗಳ ಉನ್ನತಿಗೆ ಸಾಕ್ಷಿಯಾಗಿದೆ. ಆದರೆ, ಎಲ್ಲವೂ ಇದ್ದು ನೆಟ್ವರ್ಕ್ ಸಮಸ್ಯೆಗಳಿಂದ ಗ್ರಾಮ ಬೇಸತ್ತು ಹೋಗಿದೆ.
ಬಹಳ ವರ್ಷಗಳಿಂದ ಮೊಳಹಳ್ಳಿ ಗ್ರಾಮ ಪಂಚಾಯತ್ ಸಮೀಪದ ಬಿಕ್ಕಲ್ಕಟ್ಟೆ ರಸ್ತೆಯಲ್ಲಿ ಒಂದು ನೆಟ್ವರ್ಕ್ ಅಳವಡಿಸಿದ್ದಾರೆ. ಆದರೆ ನೆಪ ಮಾತ್ರಕ್ಕೆ ನೆಟ್ವರ್ಕ್ ಟವರ್ ಅಳವಡಿಸಿ ಸುಮ್ಮನಾಗಿದ್ದಾರೆ. ಎರಡು ವರ್ಷಗಳ ಅವಧಿಯಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ನೆಟ್ವರ್ಕ್ ಮೊಬೈಲ್ ಸಂಖ್ಯೆಗಳ ಜಾಸ್ತಿ ಆಗುತ್ತಿದ್ದಂತೆ ಅದರ ರೇಂಜನ್ನು ಹೆಚ್ಚು ಪಡಿಸದೇ ಇರುವುದರಿಂದ, ನೆಟ್ವರ್ಕ್ ಸಮಸ್ಯೆ ಗ್ರಾಮವನ್ನ ಆವರಿಸಿದೆ. ಆದರೆ ಇದುವರೆಗೂ ಕೂಡ ನೆಟ್ವರ್ಕ್ ಸಮಸ್ಯೆಗಳಿಂದ ಬಳಲುತ್ತಿರುವಂತಹ ಗ್ರಾಮಗಳ ಮಂದಿ ಇಡೀ ಶಾಪ ಹಾಕುತ್ತಿದ್ದಾರೆ. ಇದರ ಬಗ್ಗೆ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಅಧಿಕಾರಿಗಳು ಮತ್ತು ಎಂಎಲ್ಎ ಹಾಗೂ ಕೇಂದ್ರ ಸಚಿವರು ಕೂಡ ಮೌನಕ್ಕೆ ಶರಣಾಗಿರುವುದು ಬಹುದೊಡ್ಡ ದುರಂತಾಗಿದೆ.
ಕೊರೋನಾ 19, ದಂತಹ ಸಂದರ್ಭದಲ್ಲಿ ಆನ್ಲೈನ್ ಕೆಲಸ ಹಾಗೂ ಆನ್ಲೈನ್ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಬೆಟ್ಟಗುಡ್ಡಗಳು ಹಾಗೂ ಮರಗಳನ್ನ ಹತ್ತಿದಂತಹ ಪ್ರಸಂಗಗಳು ಕೂಡ ನಡೆದಿದೆ. ಹಾಗಾದರೆ ಗ್ರಾಮ ಮಟ್ಟದಲ್ಲಿ ಇಂತಹ ಪರಿಸ್ಥಿತಿ ಎದುರಿಸುತ್ತಿದ್ದರು ಸ್ಥಳೀಯ ಜನಪ್ರತಿನಿಧಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ .ಏಕೆಂದರೆ, ಜನಪ್ರತಿನಿಧಿಗಳು ಪಟ್ಟಣಗಳಲ್ಲಿ ಐಶಾರಾಮಿ ಮನೆಗಳಲ್ಲಿ ಬದುಕುತ್ತಿರುವಂತಹ ವ್ಯಕ್ತಿಗಳಿಗೆ ಹಳ್ಳಿಗರ ಕಷ್ಟ ಹೇಗೆ ಗೊತ್ತಾಗಬೇಕು ಹೇಳಿ…? ದಿನಾಲು ಈ ಕಷ್ಟ ವನ್ನು ಅನುಭವಿಸುತ್ತಿರುವ ಹಳ್ಳಿಗಳ ಪಾಡು ದೇವರೇ ಗತಿ.., ಹಾಗಾದರೆ, ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಹುದೊಡ್ಡ ಗ್ರಾಮಕ್ಕೆ ನೆಟ್ವರ್ಕ್ ಸಮಸ್ಯೆಯನ್ನ ಅಳವಡಿಸಲು ಮೀನಾ ಮೇಷ ಎದುರಿಸುತ್ತಿರುವುದು ಯಾಕೆ…? ಅನ್ನೋದು ಗೊತ್ತಾಗುತ್ತಿಲ್ಲ.
ಬೈಂದೂರು ತಾಲೂಕಿಗೆ ಸರ್ವೆ ಕಾರ್ಯ: ಕುಂದಾಪುರ ತಾಲೂಕಿಗೆ ಮೌನಮುರಿದ ಶಾಸಕರು:

ಬೈಂದೂರು ತಾಲೂಕಿನಾದ್ಯಂತ ಟವರ್ ಗಳ ನಿರ್ಮಾಣ ಹಾಗೂ ಶಂಕುಸ್ಥಾಪನೆ ಕಾರ್ಯ ಬರದಿಂದ ಸಾಗುತ್ತಿದೆ ಇದುವರೆಗೂ ಬಿ. ವೈ ರಾಘವೇಂದ್ರ ಅವರು ಹಾಗೂ ಗುರುರಾಜ್ ಗಂಟಿ ಹೊಳೆ ಸಮ್ಮುಖದಲ್ಲಿ ಮೊಬೈಲ್ ಟವರ್ ಶಂಕುಸ್ಥಾಪನೆ ನೆರವೇರಿಸಿದ ಸಾಕ್ಷಿ ಕೂಡ ಇದೆ. ಆದರೆ ಕುಂದಾಪುರ ತಾಲೂಕಿಗೆ ಸಂಬಂಧಪಟ್ಟಂತೆ ವಿವಿಧ ಹಳ್ಳಿಗಳು ಇಂದಿಗೂ ನೆಟ್ವರ್ಕ್ ಸಮಸ್ಯೆಯಿಂದ ಪರಿ ತಪ್ಪಿಸುತ್ತಿದೆ. ಆದರೆ, ಕುಂದಾಪುರ ತಾಲೂಕಿನಲ್ಲಿ ಬಹುದೊಡ್ಡ ಗ್ರಾಮ ಎನಿಸಿರುವಂತಹ ಮೊಳಹಳ್ಳಿ ಗ್ರಾಮ ಇದೀಗ ನೆಟ್ವರ್ಕ್ ಸಮಸ್ಯೆಗೆ ಬಾಧಿತವಾಗಿ ದಿನಾಲು ಪರಿತಪಿಸುತ್ತಿದೆ. ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಕಂಪನಿಗಳಲ್ಲಿ ಕೆಲಸ ಮಾಡುವಂತಹ ನೌಕರರಿಗೆ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಅದಲ್ಲದೆ ಗ್ರಾಮೀಣ ಮಟ್ಟದಲ್ಲಿ ತುರ್ತು ಸಂದರ್ಭದಲ್ಲಿ ಕರೆ ಮಾಡಲು ನೆಟ್‌ವರ್ಕ್ ಮಸ್ಯೆಯಿಂದ ಇದುವರೆಗೂ ಯಾವುದೇ ಪರಿಹಾರ ದೊರತಿಲ್ಲ ಎನ್ನುವುದೇ ನೋವಿನ ಸಂಗತಿ.

ಮೊಳಹಳ್ಳಿ ಬಹುದೊಡ್ಡ ಗ್ರಾಮಗಳಾಗಿ ಮಾರ್ಪಾಡು ಹೊಂದಿದ್ದು ಕೋಣೆ ಹರ, ಬೆದ್ರಾಡಿ, ಮರತೂರು, ಕೊರಾಳ, ಮಾವಿನಕಟ್ಟೆ ,ಓಣಿಕಡು, ಮಾಸ್ತಿಕಟ್ಟೆ , ಹಣೆಯಾಡಿ ಕುಳಿಬೈಲು, ಗ್ರಾಮ ಪಂಚಾಯತ್… ಹೀಗೆ ವಿವಿಧ ಉಪ ಗ್ರಾಮಗಳಿಗೆ ನೆಟ್ವರ್ಕ್ ಸಮಸ್ಯೆಗಳು ಭಾದಿತರಾಗಿದ್ದು ಪ್ರತಿದಿನವೂ ಫೋನ್ ಕರೆಗಳನ್ನು ಮಾಡಲು ನಾಗರಿಕರು ಸಾಹಸ ಪಡುತ್ತಿದ್ದಾರೆ. ಮನೆಯ ಒಳಗಡೆ ದೂರವಾಣಿ ಮೂಲಕ ಮಾತನಾಡುವ ಸಂದರ್ಭ, ಯಾವುದೇ ರೀತಿಯ ಸ್ವರಗಳು ಕೇಳಿಸದೆ ಇರುವುದು, ಮತ್ತಲ್ಲದೆ ಒಂದು ವಿಭಾಗಿಯ ರೀತಿಯಲ್ಲಿ ಸ್ವರ ಬಾರದೆ ಇರುವುದು, ಹಾಗೂ ಮತ್ತು ಫೋನ್ ಕರೆ ನೀಡಿದರು ಫೋನ್ ನೆಟ್‌ವರ್ಕ್ ಬರೋದಿಲ್ಲ ಎನ್ನುವ ಮಾಹಿತಿ ರವಾನೆ ಆಗುತ್ತಿದೆ.
ಸಮಸ್ಯೆ ಬಗೆಹರಿಸಲು ಗ್ರಾಮದ ಗ್ರಾಮಸ್ಥರು ಆಗ್ರಹ:

ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟಂತಹ ದೂರವಾಣಿ ಇಲಾಖೆಯ ಸಿಬ್ಬಂದಿಗಳು ಮುತುವರ್ಜಿಯನ್ನು ವಹಿಸಿ ನೆಟ್ವರ್ಕ್ ಸಮಸ್ಯೆಯಿಂದ ಬಾದಿತರಾದ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಳಹಳ್ಳಿ ಬಹು ದಿನಗಳಿಂದ ಈ ಸಮಸ್ಯೆಗೆ ತುತ್ತಾಗಿದ್ದು ಇದುವರೆಗೂ ಕೂಡ ಈ ಸಮಸ್ಯೆಯನ್ನ ಬಗೆಹರಿಸುವಲ್ಲಿ ಪ್ರಯತ್ನಪಟ್ಟಿಲ್ಲ ಆದರೆ ಹಲವಾರು ಬಾರಿ ಮನವಿ ನೀಡಿದರು ಎರಡು ಮೂರು ತಿಂಗಳೊಳಗೆ ಸರಿಪಡಿಸುತ್ತೇವೆ ಎಂದು ಹಾರೈಕೆ ಉತ್ತರ ಕೊಟ್ಟ ಕೆಲವು ದೂರವಾಣಿ ಅಧಿಕಾರಿಗಳು ಮಂಪರು ನಿದ್ದೆಗೆ ಜಾರಿದ್ದಾರೆ ಅಂತಹ ಅಧಿಕಾರಿಗಳನ್ನು ಸಂಬಂಧಪಟ್ಟಂತಹ ನೆಟ್ವರ್ಕ್ ಟವರ್ ಸಿಬ್ಬಂದಿಯವರನ್ನು ಕರೆಸಿ ಬುದ್ದಿ ಕಲಿಸಬೇಕಾಗಿದೆ. ಸಮರ್ಪಕ ವಾದಂತಹ ಮೊಬೈಲ್ ಟವರ್ ಜನರೇಟರ್ ಹಾಗೂ ರಕ್ಷಣೆ ಮಾಡುವಂತಹ ಸಿಬ್ಬಂದಿಗಳು ಕೂಡ ಇಲ್ಲಿ ನೇಮಕ ಮಾಡಿದರೆ,ಅದಕ್ಕೊಂದು ಗೌರವ ಸಿಗುತ್ತದೆ. ಅದಲ್ಲದೆ ಹಲವು ವರ್ಷಗಳ ಕಾಲ ಬಾಳಿಕೆಗೆ ಬರಲು ಸಹಾಯವಾಗುತ್ತದೆ. ಅದನ್ನು ಬಿಟ್ಟು ಕಾಟಾಚಾರಕ್ಕೆ ಟವರನ್ನು ನಿರ್ಮಿಸಿ ಕಣ್ಮರೆಯಾದರೆ ಅದರ ಗತಿ ಏನು ಎನ್ನುವುದು ಸಾರ್ವಜನಿಕರ ಆರೋಪದ ಪ್ರಶ್ನೆ…?
ಸಮರ್ಪಕ ಮಾರ್ಗೋಪಾಯಗಳು:
1. ಮೊಳಹಳ್ಳಿ ಗ್ರಾಮದಲ್ಲಿ ಟವರ್ ನಿರ್ಮಾಣ ಆದರೆ ವಿದ್ಯಾರ್ಥಿಗಳಿಗೆ ಹಾಗೂ ಆನ್ಲೈನ್ ಕೆಲಸ ಕಾರ್ಯಗಳಿಗೆ ಬಹುಶ ಸುಲಭ.
2. ಖಾಸಗಿ ಕಂಪನಿಗಳ ಒಡೆತನದಲ್ಲಿ ಟವರ್ ನಿರ್ಮಿಸಿದರೆ ಅದರ ಜವದ್ವಾರಿ ಅವರೇ ಹೊರಬೇಕು.
3. ಸಿಬ್ಬಂದಿಯ ಕೊರತೆಯ ನೆಪ ಹೇಳಿ ಗ್ರಾಮೀಣ ಭಾಗದ ಟವರ್ ನೋಡುವ ಹಾಗೂ ರಿಪೇರಿ ಮಾಡುವಂತಹ ಗೋಜಿಗೆ ಹೋಗದಿರುವುದೇ ದುರಂತ.
4. ಗ್ರಾಮ ಪಂಚಾಯತ್ ಹಾಗೂ ಸಂಬಂಧಪಟ್ಟಂತ ಇಲಾಖೆ ಇದರ ಮೇಲೂಸ್ತುವಾರಿಯನ್ನ ನೋಡಿಕೊಂಡರೆ ಒಳಿತು.
5. ಸರ್ಕಾರಿ ಸಭೆಗಳಲ್ಲಿ ಗ್ರಾಮದಲ್ಲಿನ ನೆಟ್ವರ್ಕ್ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು ಬಾಯಿತರೆಯಬೇಕು.
6. ಪ್ರತಿಯೊಬ್ಬ ಗ್ರಾಮದಲ್ಲಿನ ಸದಸ್ಯರ ಅವಿಭಾಜ್ಯ ಅಂಗದಂತಿರುವ ನೆಟ್ವರ್ಕ್ ದುರಸ್ತಿ ಹಾಗೂ ಅದರ ರೇಂಜನ್ನು ಹೆಚ್ಚಿಸಬೇಕು.
7. ಗ್ರಾಮ ಮಟ್ಟದಲ್ಲಿ ಎತ್ತರದ ಪ್ರದೇಶದಲ್ಲಿ ಟವರ್ ಅನ್ನು ನಿರ್ಮಾಣ ಮಾಡಿ ಪರೀಕ್ಷಾರ್ಥವಾಗಿ ನೆಟ್ವರ್ಕ್ ಪರೀಕ್ಷಿಸಬೇಕು.
8. ಸಾರ್ವಜನಿಕ ಕುಂದು ಕೊರತೆ ನಿರ್ವಹಣೆಗೆ ಅಳವಡಿಸಿದಂತ ಟವರ್ ಗೆ ಸಮಸ್ಯೆಯನ್ನು ಸ್ವೀಕರಿಸಲು ಗ್ರಾಹಕ ಕೇಂದ್ರವನ್ನ ತಾಲೂಕು ಮಟ್ಟದಲ್ಲಿ ಸ್ಥಾಪಿಸಬೇಕು.
9. ಪಟ್ಟಣಗಳಲ್ಲಿ ಸಿಗುವ ಹಾಗೆ ನೆಟ್ವರ್ಕ್ ಸುಲಭ ರೀತಿಯಲ್ಲಿ ಸ್ಟಿಕ್ಕರೆ ಕೆಲಸ ಕಾರ್ಯಗಳು ಬಹುಬೇಗ ಸಾಗುತ್ತದೆ ಎನ್ನುವುದು ಸಾರ್ವಜನಿಕರ ಆಕ್ರೋಶ.
10. ಜಿಲ್ಲಾಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಗ್ರಾಮ ಮಟ್ಟದಲ್ಲಿ ಆಯ್ಕೆಯಾದಂತಹ ಜನಪ್ರತಿನಿಧಿಗಳು ಜಡ್ಡು ನಿದ್ದೆಯಿಂದ ಹೊರಬಂದು ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪ್ರಯತ್ನ ಪಡಿಸಬೇಕು ಹಾಗೂ ಶಾಸಕರ ಗಮನಕ್ಕೆ ತರಬೇಕು.
11. ಮಾನ್ಯ ಶಾಸಕರು ಈ ಸಮಸ್ಯೆಯನ್ನ ಸಚಿವರುಗಳಿಗೆ ಹಾಗೂ ಸರ್ಕಾರದ ಗಮನಕ್ಕೆ ತಂದು ತವರನ್ನು ನಿರ್ಮಿಸುವಲ್ಲಿ ಪ್ರಯತ್ನ ಪಡಬೇಕು.
12. ಗ್ರಾಮೀಣ ಮಟ್ಟದಲ್ಲಿ ಸಮಸ್ಯೆಯಾಗುತ್ತಿರುವಂತಹ ನೆಟ್ವರ್ಕ್ ಪ್ರತ್ಯೇಕವಾಗಿ ಯೋಜನೆ ರೂಪಿಸಬೇಕು.
ಈ ಎಲ್ಲಾ ಸಮಸ್ಯೆಗಳು ಬಗೆಹರಿಯಬೇಕಾದರೆ ಇಷ್ಟು ಕಾರ್ಯಯೋಜನೆಗಳನ್ನ ರೂಪಿಸಿದರೆ ಮಾತ್ರ ಸಾಧ್ಯವೇ ಅನ್ನೋದು ಪತ್ರಿಕೆಯ ಆಶಯ ಇಲ್ಲವಾದರೆ ನೆಟ್ವರ್ಕ್ ಸಮಸ್ಯೆಯಿಂದ ಕೆಲಸ ಕಾರ್ಯಗಳು ಒಂದು ವಾರದಲ್ಲಿ ಆಗಬೇಕಾದ ಕೆಲಸ ಒಂದು ತಿಂಗಳ ಕಾಲಾವಕಾಶ ತಗಲುತ್ತದೆ ಎನ್ನುವುದು ಇಲ್ಲಿನ ನಾಗರಿಕರ ಆಕ್ರೋಶ ಮೊಳಹಳ್ಳಿ ಗ್ರಾಮದ ಬಹುತೇಕ ಜನರು ನೆಟ್ವರ್ಕ್ ಸಮಸ್ಯೆಯಿಂದಲೇ ಹಳ್ಳಿ ಭಾಗದಲ್ಲಿ ಕೆಲಸ ನಿರ್ವಹಿಸುವುದು ಬಿಟ್ಟು ಪಟ್ಟಣದತ್ತ ವಲಸೆ ಹೋಗಿ ತಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ ಆದರೆ ವಯಸ್ಸಾದಂತಹ ತಂದೆ ತಾಯಿಗಳು ಈ ಸಮಸ್ಯೆಯನ್ನು ನುಂಗಲಾರದ ತುತ್ತಾಗಿ ಪರಿತಪಿಸುತ್ತಿದ್ದಾರೆ ಇನ್ನಾದರೂ ಸಂಬಂಧಪಟ್ಟಂತ ಗ್ರಾಮ ಪಂಚಾಯತ್ ಸಂಬಂಧಪಟ್ಟಂತಹ ದೂರವಾಣಿ ಇಲಾಖೆ ಈ ಸಮಸ್ಯೆಯನ್ನ ಬಗೆಹರಿಸುವಲ್ಲಿ ಪ್ರಯತ್ನ ಪಡುತ್ತದೆ ಎನ್ನುವುದು ಕಾದು ನೋಡಬೇಕಿದೆ.