ಡೈಲಿ ವಾರ್ತೆ: 30/ಅ./2025

ಕೋಟೇಶ್ವರ ತಂಙಳ್ ರವರ ನೇತೃತ್ವದಲ್ಲಿ ಡಿ. 27 ರಂದು ಹುಬ್ಬು ರಸೂಲ್ ಗ್ರ್ಯಾಂಡ್ ಬುರ್ದಾ ಮಜ್ಲಿಸ ಕಾರ್ಯಕ್ರಮ

ಕುಂದಾಪುರ: ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ಕೋಟೇಶ್ವರ ತಂಙಳ್ ರವರ ನೇತೃತ್ವದಲ್ಲಿ ನಡೆಯುವ 15ನೇ ವರ್ಷದ ಹುಬ್ಬು ರಸೂಲ್ ಬುರ್ದಾ ಮಜ್ಲಿಸ ಹಾಗೂ
ವಾರ್ಷಿಕ ಮಹಾಸಮ್ಮೇಳನದ ಘೋಷಣಾ ಸಮಾವೇಶ ಕಾರ್ಯಕ್ರಮವು ಅ.29 ರಂದು ಬುಧವಾರ ಐಬಿಟಿ ಗಾರ್ಡನ್ ಮೂಡುಗೋಪಾಡಿಯಲ್ಲಿ ಸಯ್ಯಿದ್ ಜುನೈದ್ ಅರ್ರಿಫಾಯೀ ತಂಙಳ್‌ ರಂಗಿನಕೆರೆ ರವರ ದುಆ ದೊಂದಿಗೆ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲೆಯ SJU ಅಧ್ಯಕ್ಷರಾದ B A ಇಸ್ಮಾಯಿಲ್ ಮದನಿ ಮಾವಿನಕಟ್ಟೆ ಅವರು ” ಸ್ಥಳೀಯ ಮುಸ್ಲಿಮ್ ಸಹೋದರರಿಗೆ ಅಪರಿಚಿತರಾಗಿದ್ದ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ಕೋಟೇಶ್ವರ ತಂಙಳ್ ರವರು 2008ರಲ್ಲಿ ಕೇರಳದಿಂದ ಕುಂದಾಪುರಕ್ಕೆ ಬಂದು ನೆಲೆಸಿದ್ದರು.
ಕುಂದಾಪುರ ಪರಿಸರ ದಲ್ಲಿ ಒಂದು ದೀನಿ ಸಂಸ್ಥೆ ಸ್ಥಾಪನೆ ಮಾಡಿ ಆ ಮೂಲಕ ಧಾರ್ಮಿಕ ಸೇವೆ ಗೈಯುವ ದಿವ್ಯ ಚಿಂತನೆ ಅವರದ್ದಾಗಿತ್ತು. ಆ ನಿಟ್ಟಿನಲ್ಲಿ ಈ ಭಾಗದ ಸುನ್ನಿ ಮುಸ್ಲಿಮ್ ರಿಗಾಗಿ 14 ವರ್ಷದಿಂದ ನಿರಂತರ ಬುರ್ದಾ ಮಜ್ಲಿಸ ಆಯೋಜಿಸುವ ಮೂಲಕ ಸರ್ವ ಸಹೋದರರಿಗೂ ಚಿರಪರಿಚಿತರಾದರು. ಮೂಡುಗೋಪಾಡಿಯಲ್ಲಿ ಐಬಿಟಿ ಗಾರ್ಡನ್ ಹೆಸರಿನ ಒಂದು ದೀನಿ ಸಂಸ್ಥೆಯನ್ನು ಹುಟ್ಟು ಹಾಕುವುದರ ಮೂಲಕ ಉಡುಪಿ ಜಿಲ್ಲೆಯ ಸಕಲ ಸುನ್ನಿ ಮುಸ್ಲಿಮರ ಪ್ರೀತ್ಯಾದರಗಳಿಗೆ ಪಾತ್ರ ರಾಗಿದ್ದಾರೆ. ಇದು ಅವರ ದಿವ್ಯ ಚಿಂತನೆಯ ಗುಣಗಳು, ನಾಯಕತ್ವ ಮತ್ತು ಸಕಾರಾತ್ಮಕ ಪ್ರಭಾವದ ಫಲಿತಾಂಶವಾಗಿದೆ ಎಂದು ಇಸ್ಮಾಯಿಲ್ ಮದನಿ ಹೇಳಿದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಐಬಿಟಿ ಗಾರ್ಡನ್ ಚೇರ್ಮನ್ ರಾದ ಸಯ್ಯಿದ್ ಜಾಫರ್ ಅಸ್ಸಖಾಫ್
ಕೋಟೇಶ್ವರ ತಂಙಳ್‌ ರವರು ವಹಿಸಿದ್ದರು.
ಅವರು 2008 ರಿಂದ ಇಲ್ಲಿತನಕ ಕುಂದಾಪುರ ತಾಲೂಕಿನಲ್ಲಿ ಕ್ರಮಿಸಿದ ಹಾದಿಯ ಬಗ್ಗೆ ಸವಿಸ್ತಾರವಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಡಿ. 27 ರಂದು ನಡೆಯುವ 15ನೇ ಹುಬ್ಬುರ್ರಸೂಲ್ ಗ್ರ್ಯಾಂಡ್ ಬುರ್ದಾ ಕಾನ್ಫರೆನ್ಸ್ ಪೋಸ್ಟರ್ ಗೆ ಚಾಲನೆ ನೀಡಿದ ಅವರು ಹುಬ್ಬುರ್ರಸೂಲ್ ಅವಾರ್ಡ್ ಶೈಖುನ ರಈಸುಲ್ ಉಲಮಾ ಸುಲೈಮಾನ್ ಉಸ್ತಾದರಿಗೆ ಪ್ರೆಸಿಡೆಂಟ್ ಸಮಸ್ತ ಮುಶಾವರ ನೀಡಿ ಗೌರವಿಸಲಾಗುದು ಎಂದು ಹೇಳಿದರು.

ಐಬಿಟಿ ಗಾರ್ಡನ್ ಪ್ರಧಾನ ಕಾರ್ಯದರ್ಶಿ ಬಿ ಎಂ ಅಬ್ದುಲ್ ನಾಸಿರ್ ಮೂಡುಗೋಪಾಡಿ ಸ್ವಾಗತಿಸಿದರು.

ಉಡುಪಿ ಜಿಲ್ಲೆ ಸುನ್ನೀ ಕೋ- ಓರ್ಡಿನೇಷನ್ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಉಡುಪಿ ಜಿಲ್ಲಾ ಎಸ್.ವೈ.ಎಸ್. ಅಧ್ಯಕ್ಷ ರಾದ ಅಬ್ದುಲ್ ಲತೀಫ್ ಫಾಳಿಲಿ,
ಉಡುಪಿ ಜಿಲ್ಲಾ SJM ಅಧ್ಯಕ್ಷ ಅಬ್ದುರ್ರಝಾಕ್ ಖಾಸಿಮಿ ಕಾಪು, ಮೂಡು ಗೋಪಾಡಿ RJM ಖತೀಬರಾದ ಖುಬೈಬ್ ಸಖಾಫಿ, MJM ಕೋಡಿ ಮುದರ್ರಿಸ್ ರಾಶಿದ್ ಸಖಾಫಿ ಕೋಡಿ ಇವರುಗಳು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಐಬಿಟಿ ಗಾರ್ಡನ್ ಪ್ರಾಂಶುಪಾಲರಾದ
ಸಯ್ಯಿದ್ ಅಲೀ ಯಾಸಿರ್ ಅಸ್ಸಖಾಫ್ ಅಹ್ಸನಿ, ಕುಂದಾಪುರ ತಾಲೂಕು SJU ಪ್ರಧಾನ ಕಾರ್ಯದರ್ಶಿ
ಅಬ್ದುರ್ರಹ್ಮಾನ್ ಸಖಾಫಿ M ಕೋಡಿ, ಹಂಗಳೂರು MJM ಮುದರ್ರಿಸ್ ಸಿದ್ದೀಕ್ ಸಖಾಫಿ, ಗುಲ್ವಾಡಿ MJM ಖತೀಬರಾದ ಸಫ್ವಾನ್ ಸಅದಿ, ಉಡುಪಿ ಜಿಲ್ಲೆ KMJ ಅಧ್ಯಕ್ಷರಾದ B S F ರಫೀಕ್ ಹಾಜಿ, ಐಬಿಟಿ ಗಾರ್ಡನ್ ಬಿಲ್ಡಿಂಗ್ ಸಮಿತಿ ಅಧ್ಯಕ್ಷ ಶಾಬಾನ್ ಹಂಗ್ಲೂರ್,
ಚೆರಿಯಬ್ಬ ಹಾಜಿ ಮಾವಿನಕಟ್ಟೆ, ಅಂದುಮೈ ಹಾಜಿ ನಾವುಂದ, ಅಬೂ ಮುಹಮ್ಮದ್ ಕುಂದಾಪುರ, ಅಷ್ಪಾಕ್ ಕೌನ್ಸಿಲರ್ ಕುಂದಾಪುರ, ಕರ್ನಾಟಕ ರಾಜ್ಯ SMA ಕೋಶಾದಿಕಾರಿ ಮನ್ಸೂರ್ ಕೋಡಿ, ಹನೀಫ್ ಹಾಜಿ ಅಂಬಾಗಿಲು, B.A. ಮೊಹಮ್ಮದ್ ಹಾಜಿ ಮೂಡುಗೋಪಾಡಿ, ವಸೀಂ ಬಾಷಾ ಕುಂದಾಪುರ,
ಕುಂಞಿ ಮೋನಾಕ M ಕೋಡಿ, ಉಡುಪಿ ಜಿಲ್ಲಾ SMA ಜಿಲ್ಲಾಧ್ಯಕ್ಷ ಹುಸೇನ್ ಮೋನಾಕ ಕೋಟ ಪಡುಕರೆ, ಜಿ.ಮೊಹಮ್ಮದ್ ಗೌರವದ್ದಕ್ಷರು ಆರ್ ಜೆ ಎಂ ಮೂಡುಗೋಪಾಡಿ ಮೊದಲದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಐಬಿಟಿ ಗಾರ್ಡನ್ ಜನರಲ್ ಮ್ಯಾನೇಜರ್ ಅಮೀರ್ ಖಾನ್ ಅಹ್ಸನಿ ನಿರೂಪಿಸಿ ವಂದಿಸಿದರು.