ಡೈಲಿ ವಾರ್ತೆ: 30/ಅ./2025

ಕುಕ್ಕಾಜೆ ಸರ್ಕಾರಿ ಶಾಲೆಗೆ ಎಸ್ಐಓ ಪಾಣೆಮಂಗಳೂರು ಘಟಕದ ವತಿಯಿಂದ ನೂತನ ಶೌಚಾಲಯ ಕೊಡುಗೆ

ಬಂಟ್ವಾಳ : ಮಂಚಿ ಕುಕ್ಕಾಜೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಯರಿಗಾಗಿ ಎಸ್ಐಓ ಪಾಣೆ ಮಂಗಳೂರು ಘಟಕದ ವತಿಯಿಂದ ನಿರ್ಮಿಸಲಾದ ನೂತನ ಶೌಚಾಲಯದ ಉದ್ಘಾಟನೆ ಕಾರ್ಯಕ್ರಮ ಗುರುವಾರ ನಡೆಯಿತು.

ಸಮಾರಂಭದಲ್ಲಿ ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಎಂ.ಇಬ್ರಾಹಿಂ, ಶಾಲಾ ಹಳೆ ವಿದ್ಯಾರ್ಥಿ ಸಂಘ ಉಪಾಧ್ಯಕ್ಷ

ಪ್ರಸಾದ್.ಕೆ, ಶಾಲಾ ಮುಖ್ಯ ಶಿಕ್ಷಕಿ ಶೋಭಾ, ಎಸ್ಐಒ ಕಾರ್ಯದರ್ಶಿ ಆಸಿಫ್ ಡಿ.ಕೆ, ಜಮಾಅತೇ ಇಸ್ಲಾಮಿ ಹಿಂದ್ ಪಾಣೆಮಂಗಳೂರು ಸ್ಥಾನೀಯ ಅಧ್ಯಕ್ಷ ಮುಖ್ತಾರ್ ಅಹ್ಮದ್, ಎಚ್.ಆರ್.ಎಸ್.ಕ್ಯಾಪ್ಟನ್ ಅಬ್ದುಲ್ ಸತ್ತಾರ್ ಗೂಡಿನಬಳಿ, ಶಂಶೀರ್ ಮೆಲ್ಕಾರ್, ಶುಕೂರ್ ಎಂ.ಎಚ್, ಶರೀಫ್ ಮೆಲ್ಕಾರ್ ಮೊದಲಾದವರು ಭಾಗವಹಿಸಿದ್ದರು.