ಡೈಲಿ ವಾರ್ತೆ:15 ಆಗಸ್ಟ್ 2023
ಬಾರ್ಕೂರು ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 77ನೇ ಸ್ವಾತಂತ್ರೋತ್ಸವ ಆಚರಣೆ: ಪ್ರಜ್ಞಾ ವಂತ ಸಮಾಜ ದಲ್ಲಿ ಉತ್ತಮ ನಾಗರೀಕರಾಗಿ ಬಾಳಿ – ರಾಜಾರಾಮ್ ಶೆಟ್ಟಿ ಬ್ರಹ್ಮಾವರ
ಬ್ರಹ್ಮಾವರ: ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ – ಬಾರ್ಕೂರು ಇದರ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಲಿಖಿತಾ ಕೊಠಾರಿ ರವರು ವಹಿಸಿದ್ದರು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ರಾಜಾರಾಮ್ ಶೆಟ್ಟಿ , ಮಾಲಕರು, ಆಶ್ರಯ ಹೋಟೆಲ್, ಬ್ರಹ್ಮಾವರ, ಮತ್ತು ರಾಮಚಂದ್ರ ಕಾಮತ್, ಸಂಚಾಲಕರು, ಐ. ಟಿ. ಐ ಹೇರಾಡಿ, ರವರು ಆಗಮಿಸಿದ್ದರು.
ಮುಖ್ಯ ಅತಿಥಿ ಯಾಗಿ ಆಗಮಿಸಿದ ಶ್ರೀ ರಾಜ ರಾಮ್ ಶೆಟ್ಟಿ ರವರು ಧ್ವಜಾರೋಹಣ ಮಾಡಿ , ವಿದ್ಯಾರ್ಥಿ ಗಳನ್ನು ಉದ್ದೇಶಿಸಿ “ಪ್ರಜ್ಞಾ ವಂತ ಸಮಾಜ ದಲ್ಲಿ ಉತ್ತಮ ನಾಗರೀಕ ರಾಗಿ ಬಾಳಿ “ಎಂದು ತಮ್ಮ ಮಾತು ಗಳನ್ನಾಡಿದರು.
“ಜೀವನದಲ್ಲಿ ಕನಸ್ಸನ್ನು ಕಾಣಬೇಕು, ಧ್ಯೆಯ ಉತ್ತಮ ವಾಗಿರುದನ್ನು ಬೆಳೆಸಿಕೊಳ್ಳ ಬೇಕು,” ಎಂದು ಶ್ರೀ ರಾಮಚಂದ್ರ ಕಾಮತ್, ಸಂಚಾಲಕರು, ಐ. ಟಿ. ಐ ಹೇರಾಡಿ ರವರು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಸ್ವಾತಂತ್ರ್ಯೋತ್ಸವ ದ ಪ್ರಯುಕ್ತ ಹಲವು ವಿದ್ಯಾರ್ಥಿ ಗಳು ಸ್ವತಂತ್ರ ಹೋರಾಟ ಗಾರರ ವೇಷ ಭೂಷಣ ದಲ್ಲಿ ಶಾಲೆಗೆ ಆಗಮಿಸಿದ್ದರು. ಎಲ್. ಕೆ. ಜಿ ಮತ್ತು ಯು. ಕೆ. ಜಿ,1ನೇ -4 ನೇ ತರಗತಿ,5ನೇ -7ನೇ ತರಗತಿ,8ನೇ -10ನೇ ತರಗತಿ ವಿಭಾಗ ದಲ್ಲಿ ದೇಶ ಭಕ್ತಿ ಗೀತೆ ಗಳನ್ನು ಹಾಡಿದರು. ವಿದ್ಯಾರ್ಥಿ ಗಳು ಸ್ವತಂತ್ರ ದಿನಾಚರಣೆಯ ಕುರಿತು ತಮ್ಮ ಮಾತಾಗಳನ್ನಾಡಿದರು, ಶ್ರೀ ರಾಜಾರಾಮ್ ಶೆಟ್ಟಿ, ನವನೀತ್ ಶೆಟ್ಟಿ ಜನನಿ ಫರ್ನಿಚರ್ ಬ್ರಹ್ಮಾವರ ಇವರು ವಿದ್ಯಾರ್ಥಿ ಗಳಿಗೆ ಸಿಹಿ ತಿಂಡಿಯ ಕೊಡುಗೆ ನೀಡಿದರು. ಅಮೃತ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಶ್ರೀಮತಿ ಜ್ಯೋತಿ ಶೆಟ್ಟಿ ರವರು ವಂದಿಸಿದರು. ಸಹ ಶಿಕ್ಷಕರಾದ ಶ್ರೀ ಸುರೇಶ ಶೆಟ್ಟಿ, ಶ್ರೀಮತಿ ಜ್ಯೋತಿ ಶೆಟ್ಟಿ, ಶ್ರೀಮತಿ ಜ್ಯೋತಿ, ಶ್ರೀಮತಿ ನಾಗರತ್ನ ಹೆಬ್ಬಾರ್, ರವರು ಕಾರ್ಯಕ್ರಮ ಸಂಯೋಜನೆ ಮಾಡಿದರು, ಸಹ ಶಿಕ್ಷಕರು ಮತ್ತು ಶಿಕ್ಷಕೇತರರು ಸಹಕರಿಸಿದರು, ಶಾಲಾ ವಿದ್ಯಾರ್ಥಿ ಗಳ ಪೋಷಕರು ಉಪಸ್ಥಿತರಿದ್ದರು.