ಡೈಲಿ ವಾರ್ತೆ: 13/NOV/2025

ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!

ನವದೆಹಲಿ: ದೇವಸ್ಥಾನದೊಳಗೆ ವೃದ್ಧರೊಬ್ಬರು ಪೂಜೆ ಸಲ್ಲಿಸಲು ಬಂದಿದ್ದರು. ಈ ವೇಳೆ ದೇವರೆದುರು ಕೆಲವು ಸೆಕೆಂಡುಗಳ ಕಾಲ ತಟಸ್ಥವಾಗಿ ನಿಂತಿದ್ದ ವೃದ್ಧರೊಬ್ಬರು ನಂತರ ಅಲ್ಲೇ ಕುಳಿತಿದ್ದಾರೆ. ಅದಾದ ಕೆಲವು ನಿಮಿಷಗಳ ನಂತರ ಹಿಂದಕ್ಕೆ ಗೋಡೆಗೆ ಒರಗಿ ಕುಳಿತಿದ್ದಾರೆ. 10 ನಿಮಿಷ ಹಾಗೆಯೇ ಕುಳಿತಿದ್ದ ಆ ಅಜ್ಜ ಅಲ್ಲೇ ಪ್ರಾಣಬಿಟ್ಟಿದ್ದಾರೆ. ಅಲ್ಲಿದ್ದ ಇತರೆ ಭಕ್ತರು ಅನುಮಾನದಿಂದ ಆ ವೃದ್ಧನ ಹತ್ತಿರ ಹೋಗಿ ನೋಡುವಷ್ಟರಲ್ಲಿ ಅವರ ಪ್ರಾಣ ಹೋಗಿತ್ತು. ಈ ದೃಶ್ಯ ದೇವಾಲಯದ ಸಿಸಿಟಿವಿಯಲ್ಲಿ (CCTV Video) ಸೆರೆಯಾಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆ ವೃದ್ಧ ಬಹಳ ಅದೃಷ್ಟವಂತ, ಅವರು ಮಾಡಿದ ಕರ್ಮವೇ ಅವರಿಗೆ ಇಷ್ಟು ಒಳ್ಳೆಯ ಸಾವನ್ನು ಕರುಣಿಸಿದೆ ಎಂದು ಕಮೆಂಟ್ ಮಾಡಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ, ಯಾವಾಗ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.