



MBBS ನಿಂದ MD ಯತ್ತ ಸಾಧನೆಯ ಚಿತ್ತಾರ ರಚಿಸಿದ ಹಳ್ಳಿಗಾಡಿನ ಯುವತಿ ಕುಂದಾಪುರ ಕೋಡಿಯ ಡಾ. ನಝ್ಮೀನ್

ಕುಂದಾಪುರ: ಒಂದು ಕಾಲದಲ್ಲಿ ಎಸ್ಸೇಲ್ಸಿ ಓದು ಮುಗಿಸಿದರೆ ಸಾಕಿತ್ತು, ಓದಿ ಏನಾಗಬೇಕಿದೆ ಮದುವೆ ಯಾದ್ರೆ ಮುಗಿತು. ಹೆಣ್ಣು ಮಕ್ಕಳ ಬಗ್ಗೆ ಅಂತಾ ಭಾವನೆಯೊಂದು ಮುಸ್ಲಿಂ ಸಮಾಜದಲ್ಲಿ ಸರ್ವೇ ಸಾಮಾನ್ಯ ವಾಗಿತ್ತು. ಆದರೆ ಕಾಲದ ಜತೆ ಮುಸ್ಲಿಂ ಯುವತಿಯರ ವಿದ್ಯಾಭ್ಯಾಸವೂ ಭಾರಿ ಮಹತ್ವ ಪಡೆದು ಕೊಂಡು ಇಂದು ಸಮಾಜದ ಯುವತಿಯರು ಪದವೀಧರರಾಗಿ ದೇಶ ವಿದೇಶಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಗುರುತಿಸಲ್ಪಡುತ್ತಿದ್ದಾರೆ. ಅಂತಹ ಸಾಲಿನಲ್ಲಿ ಕುಂದಾಪುರ ಕೋಡಿ -ಗುಲ್ವಾಡಿ ಮೂಲದ ಪ್ರಸ್ತುತ ಕೋಟ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯೆ ಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ನಝ್ಮೀನ್ ಹುಟ್ಟೂರಿನ ಮುಸ್ಲಿಂ ಸಮುದಾಯದ ಪ್ರಥಮ ವೈದ್ಯೆ ಎನ್ನುವ ಸಾಧನೆ, ಕೀರ್ತಿಗೆ ಪಾತ್ರಳಾಗಿದ್ದಾಳೆ.

ಕುಂದಾಪುರ ತಾಲೂಕು ಕೋಟೆ ಕೋಡಿಯ ಹಾಗೂ ಗುಲ್ವಾಡಿ ಯ ಮುಬಾರಕ್ ಅಬ್ದುಲ್ಲ ದಂಪತಿಗಳ ಪುತ್ರಿಯಾಗಿರುವ ನಝ್ಮೀನ್ ತನ್ನ ಪ್ರಾಥಮಿಕ, ಪ್ರೌಢ ಶಿಕ್ಷಣ ವನ್ನು ಗಲ್ಫ್ ರಾಷ್ಟ್ರ ಗಳಲ್ಲಿ ಪೂರೈಸಿ, ಬೆಂಗಳೂರಿನಲ್ಲಿ ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದು ಬಿಜಾಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನಲ್ಲಿ ಸರಕಾರಿ ಕೋಟಾದಡಿಯಲ್ಲಿ ಪ್ರವೇಶ ದೊರೆತು ಅಲ್ಲಿ MBBS ಪದವಿಯನ್ನು ಪಡೆದಿದ್ದಾಳೆ. ಇದೀಗ MD ವ್ಯಾಸಂಗಕ್ಕೆ MD ತಯಾರಿ ನಡೆಸುತ್ತಿರುವ ನಝ್ಮೀನ್ ಸರಕಾರಿ ಸುತ್ತೋಲೆಯಂತೆ ಒಂದು ವರ್ಷ ವೈದ್ಯರಾಗಿ ಸೇವೆ ಸಲ್ಲಿಸಲು ನೆರೆಯ ಕೋಟದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ 25.08.2025 ರಿಂದ ನೇಮಕಗೊಂಡಿರುತ್ತಾರೆ.
ವೈದ್ಯಕೀಯ ರಂಗ ಕೋಡಿ-ಗುಲ್ವಾಡಿ ಮೂಲದ ಪ್ರಥಮ ವೈದ್ಯೆ ಎಂದು ಮುಸ್ಲಿಂ ಸಮುದಾಯದ ಶ್ಲಾಘನೆಗೆ ಪಾತ್ರಳಾಗಿರುವ ಡಾ. ನಝ್ಮೀನ್ ತನ್ನ ವೈದ್ಯಕೀಯ ಸೇವಾ ರಂಗದಲ್ಲಿ ನೂತನ ಭಾಷ್ಯ ಬರೆಯಲಿ,
ದೇವರು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಮತ್ತು ದೀನರ, ಬಡಜನರ ಸೇವೆಯನ್ನು ಸದಾ ಮಾಡಲು ಅಲ್ಲಾಹು ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ದಿ. ಹಾಜಿ ಜಿ ಇಬ್ರಾಹಿಂ ಅವರ ಕುಟುಂಬಸ್ಥರು ಹಾಗೂ ಊರವರು ಈ ಯುವ ವೈದ್ಯೆಗೆ ಶುಭ ಹಾರೈಸಿದ್ದಾರೆ.