



ಡೈಲಿ ವಾರ್ತೆ: 11/NOV/2025

ಬೆಂಗಳೂರು (ಶ್ರೀನಗರ ): ಕಮಲಶಿಲೆ ಮೇಳದ ಯಕ್ಷಗಾನ ಪ್ರದರ್ಶನ ಯಶಸ್ವಿ – ಸಮಸ್ತ ಕಲಾಭಿಮಾನಿಗಳ ಯಶಸ್ವಿನ ಪ್ರತೀಕವೇ ಯಕ್ಷಗಾನ ಕಲೆ ವಿಜ್ರಂಬಿಸಲು ಸಾಧ್ಯ: ಪ್ರಧಾನ ಭಾಗವತ ಸದಾಶಿವ್ ಆಮೀನ್ ಹಿತ ನುಡಿ

✍🏻ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ, ಕುಂದಾಪುರ.
“ಯಕ್ಷಗಾನ ಕಲೆ ಉಳಿಸಿ, ಬೆಳೆಸಲು ಕಲಾವಿದರ ಪ್ರೋತ್ಸಾಹ ಮುಖ್ಯ, ಕಲಾಭಿಮಾನಿಗಳ ಶ್ರೀರಕ್ಷೆಯಿಂದ ಮಹಾನಗರದಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನವು ಯಶಸ್ವಿಯಾಗಲು ಸಾಧ್ಯ,ಅದೇ ರೀತಿ, ಕೆಲಸದ ಒತ್ತಡದ ನಡುವೇ ಕಲೆಗೆ ಇನ್ನಷ್ಟು ಜೀವ ತುಂಬುವ ಕೆಲಸ ಪಟ್ಟಣಗಳಲ್ಲಿ ಆಗುತ್ತಿರುವುದು ವಿಶೇಷ…. ಎಂದು ಕಮಲಶಿಲೆ ಮೇಳದ ಪ್ರಧಾನ ಭಾಗವತರಾದ ಸದಾಶಿವ್ ಅಮೀನ್ ಹೇಳಿದರು.

ಅವರು ಇತ್ತೀಚಿಗೆ ಬೆಂಗಳೂರಿನ ಮಹಾನಗರದಲ್ಲಿ ನಡೆದ ಕಮಲಶಿಲೆ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಕಲಾವಿದರನ್ನು ಗುರುತಿಸಿ ಮಾತನಾಡಿದರು.
ಮಹಾನಗರ ಬೆಂಗಳೂರಿನಲ್ಲಿ ಇತ್ತೀಚಿಗೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳ, ಕಮಲಶಿಲೆ ಇವರಿಂದ ಅದ್ದೂರಿ ತೆರೆದ ಮೈದಾನದಲ್ಲಿ ಯಕ್ಷಗಾನ ಬಯಲಾಟ ಇತ್ತೀಚಿಗೆ ಬೆಂಗಳೂರು ಸಮೀಪ ದ ಶ್ರೀನಗರ ಸಮೀಪದ ಮದ್ದೂರಮ್ಮ ಆಟದ ಮೈದಾನದಲ್ಲಿ ಜರುಗಿತು. ಸಂಜೆ 4:30 ರಿಂದ ರಾತ್ರಿ 11:30ವರೆಗೆ ನಡೆದ ಪ್ರದರ್ಶನದಲ್ಲಿ ಎರಡನೇ ವರ್ಷದ ಸಂಭ್ರಮದಲ್ಲಿ ಚಂದ್ರಾವಳಿ ವಿಲಾಸ , ಚಕ್ರವ್ಯೂಹ ಎನ್ನುವ ಕಥಾ ಪ್ರಸಂಗದಲ್ಲಿ ಊರಿನ ರಂಗಸ್ಥಳಕ್ಕೆ ಹೊಂದಿರುವ ದ್ವಂದಿ ಬೆಳಕಿನ ಮೆರಗೂ ಇನ್ನಷ್ಟು ಹೆಚ್ಚಿಸಿತು. ಈ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ರಾಘವೇಂದ್ರ ಹಾರ್ಮಣ್ ನವರು ಸಂಯೋಜನೆ ಮಾಡಿದ್ದಾರೆ. ಈ ಯಕ್ಷಗಾನದ ಕಾರ್ಯಕ್ರಮದಲ್ಲಿ ಕಮಲಶಿಲೆ ಮೇಳದ ಪ್ರಬಂಧಕರಾದ ಶ್ರೀ ಸೌಡ ಗೋಪಾಲ್ ಮೊಗವೀರ, “ಕಾಂತಾರ” ಖ್ಯಾತಿಯ “ಚಿಂಕ್ರ” ಪಾತ್ರದಲ್ಲಿ ಗುರುತಿಸಿಕೊಂಡ ರಕ್ಷಿತ್ ರಾಮಚಂದ್ರ ಶೆಟ್ಟಿ ಅವರನ್ನ ಗೌರವವಾಗಿ ಗುರುತಿಸಲಾಯಿತು.

ಯಕ್ಷಗಾನದಲ್ಲಿ ಕರಾವಳಿ ಮತ್ತು ಬೆಂಗಳೂರು ಭಾಗದ ಸಹಸ್ರ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಸಂಪೂರ್ಣ ಕಾರ್ಯಕ್ರಮವನ್ನು ಪತ್ರಕರ್ತರು ಹಾಗೂ ಪತ್ರಿಕಾ ವರದಿಗಾರರಾದ ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕಾರ್ಯಕ್ರಮವನ್ನು ನಿರೂಪಿಸಿದರು. ಈ ಯಕ್ಷಗಾನವನ್ನು ರಾಘವೇಂದ್ರ ಹಾರ್ಮಣ್ ರವರು ಸಂಘಟಿಸಿದರು.