ಡೈಲಿ ವಾರ್ತೆ:10 ಸೆಪ್ಟೆಂಬರ್ 2023

ಕುಂದಾಪುರದಲ್ಲಿ ನೂತನ ಫೀಸಿಯೋಕೇರ್ ಸೆಂಟರ್ ಲೋಕಾರ್ಪಣೆ

ಕುಂದಾಪುರ: ಉಡುಪಿಯ ಹೆಸರಾಂತ ಗಿರಿಜಾ ಗ್ರೂಪ್ಸ್ ಅವರ ಫಿಸಿಯೋಕೇರ್ – ಫಿಸಿಯೋಥೆರಪಿ ಮತ್ತು ಪುನರ್ವಸತಿ ಕೇಂದ್ರ, ಕುಂದಾಪುರದಲ್ಲಿ ಸೇವೆ ಸಲ್ಲಿಸಲು ನೂತನ ಶಾಖೆ ಕುಂದಾಪುರದ ಅಥರ್ವ ಕಾಂಪ್ಲೆಕ್ಸ್‌ನಲ್ಲಿ ಸೆ. 9 ರಂದು ಶನಿವಾರ ಶುಭಾರಂಭಗೊಂಡಿತು.


ಕುಂದಪ್ರಭ ಸಂಪಾದಕ ಯು. ಎಸ್. ಶೆಣೈ ಅವರು ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಆಧುನಿಕ ಜೀವನ ಪದ್ದತಿಯ ನಡುವೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ್ದು ಅಗತ್ಯವಾಗಿದೆ. ಫಿಸಿಯೋಥೆರಫಿ ಅಗತ್ಯ ಇಂದಿನ ದಿನದಲ್ಲಿ ಹೆಚ್ಚಿದ್ದು, ಈ ಚಿಕಿತ್ಸೆಯ ಮೂಲಕ ಚೇತರಿಸಿಕೊಂಡ ನೂರಾರು ಉದಾಹರಣೆಗಳಿವೆ. ಆದರೆ ಫೀಸಿಯೋಥೆರಪಿಗಳಿಗೆ ತುಂಬಾ ತಾಳ್ಮೆ ಎನ್ನುವುದು ಬೇಕು. ರೋಗಿಯೊಂದಿಗೆ ತಾಳ್ಮೆ ಹಾಗೂ ರೋಗಿಯ ಪರಿಸ್ಥಿತಿ ನೋಡಿ ಚಿಕಿತ್ಸೆ ನೀಡುವುದು ಉತ್ತಮ.
ಅಲ್ಲದೆ ಈ ಸೇವೆಯನ್ನು ಮನೆ ಮನೆಗೆ ಬಂದು ಚಿಕಿತ್ಸೆ ನೀಡುವಾಗೆ ಮಾಡಬೇಕು ಇದರಿಂದಾಗಿ ಹತ್ತಾರು ಮಂದಿ ರೋಗಿಗಳು ಪೂರ್ಣ ಪ್ರಮಾಣದಲ್ಲಿ ಇದರ ಪ್ರಯೋಜನ ಪಡೆದುಕೊಂಡಂತಾಗುವುದು ಎಂದು ಯು. ಎಸ್. ಶೈಣೆ ಹೇಳಿದರು.

ಡಾ. ಎ.ವಿ. ಬಾಳಿಗ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ಅವರು ಮಾತನಾಡಿ, ಗಿರಿಜಾ ಗ್ರೂಪಿನ ರವಿಂದ್ರ ಶೆಟ್ಟಿ ಅವರು ಕೇವಲ ಉದ್ಯಮಿಯಾಗಿ ಅಷ್ಟೇ ಹೆಸರು ಮಾಡದೇ ಆರೋಗ್ಯ ಕ್ಷೇತ್ರದ ಮೂಲಕ ಸಾಮಾಜಿಕ ಕಳಕಳಿ ತೋರುತ್ತಾ ಬಂದಿದ್ದಾರೆ. ಅವರ ಸಾಮಾಜಿಕ ಬದ್ಧತೆ ಶ್ಲಾಘನಾರ್ಹವಾಗಿದ್ದು, ಫಿಸಿಯೋಕೇರ್ ಸೆಂಟರ್ ಮೂಲಕ ಕುಂದಾಪುರದಲ್ಲಿ ಗುಣಮಟ್ಟದ ಸೇವೆ ನೀಡುವಂತಾಗಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಐಎಂಎ ಕುಂದಾಪುರದ ಅಧ್ಯಕ್ಷ ಡಾ. ಮಹೇಶ್ ಗಂಗೊಳ್ಳಿ, ಇಂಡಿಯನ್ ರೆಡ್‌ಕ್ರಾಸ್‌ ಸೊಸೈಟಿ ಕುಂದಾಪುರದ ಜಯಕರ ಶೆಟ್ಟಿ, ಅಮಾಸೆಬೈಲು ಆಯುಷ್ ಆಸ್ಪತ್ರೆಯ ಡಾ. ಹೇಮಲತಾ ಉಪಸ್ಥಿತರಿದ್ದರು.

ಗಿರಿಜಾ ಗ್ರೂಪ್ಸ್‌ನ ಪ್ರವರ್ತಕ ರವೀಂದ್ರ ಶೆಟ್ಟಿ ಸ್ವಾಗತಿಸಿದರು. ಫಿಸಿಯೋಥೆರೆಪಿಸ್ಟ್ ಡಾ. ದೀಪಾ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ವೇಳೆ ಸುರೇಖಾ ರವೀಂದ್ರ ಶೆಟ್ಟಿ ಹಾಗೂ ಹರೀಶ್ ಕುಮಾರ್ ಉಪಸ್ಥಿತರಿದ್ದರು. ಪತ್ರಕರ್ತ ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.