ಡೈಲಿ ವಾರ್ತೆ:10 ಸೆಪ್ಟೆಂಬರ್ 2023

ಸಾಲದ ಕಾಟಕ್ಕೆ ಬೇಸತ್ತು, ಪತ್ನಿಯನ್ನ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಬಳ್ಳಾರಿ: ಸಾಲದ ಕಾಟಕ್ಕೆ ಬೇಸತ್ತು, ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬಳ್ಳಾರಿಯ ಬಂಡಿಹಟ್ಟಿಯಲ್ಲಿ ನಡೆದಿದೆ.

ನಗರದ ಆಂಜನೇಯ ದೇವಸ್ಥಾನ ಬಳಿ ನಿವಾಸಿಗಳಾದ ಈರಣ್ಣ (28) ತನ್ನ ಪತ್ನಿ ದುರ್ಗಮ್ಮಳನ್ನ (25) ನೇಣು ಹಾಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈರಣ್ಣನ ಈ ಕೆಟ್ಟ ನಿರ್ಧಾರದಿಂದ ರಾಕೇಶ್ ಎಂಬ 16 ತಿಂಗಳ ಮಗು ಅನಾಥವಾಗಿದೆ.

ಮೃತ ಈರಣ್ಣನಿಗೆ ಕುಡಿಯುವ ಚಟ ಇತ್ತು. ಅದಕ್ಕಾಗಿ ಪತ್ನಿ ಬಳಿ ಪದೇ ಪದೇ ಹಣ ಕೇಳುತ್ತಿದ್ದ. ಪತ್ನಿ ಅಲಲ್ಲಿ ಸಾಲ ಮಾಡಿ ಪತಿಗೆ ಹಣ ನೀಡಿದ್ದಳು. ಆದ್ರೆ ಹೆಂಡತಿ ಬಳಿ ಹಣ ಪಡೆದ ಪತಿ, ಈರಣ್ಣಾ ಕುಡಿದು ಹಾಳು ಮಾಡಿದ್ದಾನೆ. ಕೊನೆಗೆ ಸಾಲಗಾರರು ಮನೆಗೆ ಬಂದು ಹಣ ಕೇಳುತ್ತಾರೆ, ಎಲ್ಲಿಂದ ಹಣ ತಂದು ಕೊಡುತ್ತೀಯಾ ಎಂದು ಪತ್ನಿ ದುರ್ಗಮ್ಮ, ಪತಿಯ ಜೊತೆ ಜಗಳ ಮಾಡಿದ್ದಾಳೆ.‌ ಇದರಿಂದ ಭಯಪಟ್ಟು ಸಾಲಗಾರರ ಕಾಟ ತಪ್ಪಿಸಿಕೊಳ್ಳಲು ಪತ್ನಿಯನ್ನ ನೇಣು ಹಾಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಭಂದ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.