ಡೈಲಿ ವಾರ್ತೆ: 04/OCT/2023
– ಕೆ ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ.
ಮೊಳಹಳ್ಳಿ ಕಾಜಾಡಿಮನೆ ಹಿರಿಯ ಮುಸದ್ದಿ – ಲಚ್ಚಮ್ಮ ಶೆಟ್ಟಿ ವಿಧಿವಶ!
ಸುದ್ದಿ: ಮೊಳಹಳ್ಳಿ
ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜಾಡಿ ಮನೆ ಉಪ ಗ್ರಾಮದ ಹಿರಿಯ ಮುಸದ್ದಿ ಶ್ರೀಮತಿ ಲಚ್ಚಮ್ಮ ಶೆಟ್ಟಿ ಇಂದು ಬೆಳಿಗ್ಗೆ 04/10/2023 ಬುಧವಾರ 5:30 ರ ಸುಮಾರಿಗೆ ವಿಧಿವಶರಾದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದವರು. ಶ್ರೀಮತಿ ಲಚ್ಚಮ್ಮ ಶೆಟ್ಟಿಯವರು ಕೃಷಿ ಮನೆತನದಲ್ಲಿ ಹುಟ್ಟಿ ಬೆಳೆದು, ಹೈನುಗಾರಿಕೆ ಮೈಗೂಡಿಸಿಕೊಂಡು, ಸಾಂಸ್ಕೃತಿಕ ಆಚಾರ ವಿಚಾರಗಳನ್ನು ತನ್ನ ಕುಟುಂಬದವರಿಗೂ ದಾರಿಯರೆದು, 82 ವರ್ಷಗಳ ಪರಿ ಜೀವನವನ್ನ ಕುಟುಂಬಕ್ಕಾಗಿ ಸವಿಸಿದಂತಹ ಹಿರಿಯ ವ್ಯಕ್ತಿತ್ವ. ಹಲವಾರು ವರುಷಗಳ ಹಿಂದೆ ದಿವಂಗತ ರಾಮಣ್ಣ ಶೆಟ್ಟಿಯವರು ಅನಾರೋಗ್ಯದ ಕಾರಣ ಅತ್ತಂಗತರಾಗಿದ್ದರು.
ಶಿವಮೊಗ್ಗ ಜಿಲ್ಲೆಯ ಮಲೆನಾಡಿನಲ್ಲಿ ಬದುಕನ್ನು ಕಟ್ಟಿಕೊಳ್ಳುವುದರ ಮೂಲಕ ಪತಿ ರಾಮಣ್ಣ ಶೆಟಿ ಯವರ ಜೊತೆಗೂಡಿ ಸಾಂಸಾರಿಕ ಜೀವನವನ್ನು ಘಟ್ಟದ ತಪ್ಪಲಿನಲ್ಲಿ ಕಳೆದರು. ಇವರ ದಾಂಪತ್ಯದ ಪ್ರತೀಕವಾಗಿ ಮೂರು ಜನ ಹೆಣ್ಣು ಮಕ್ಕಳು ಹಾಗೂ ನಾಲ್ಕು ಜನ ಪುತ್ರರಿದ್ದರು.
ಮಲೆನಾಡಿನ ಘಟ್ಟ ಪ್ರದೇಶದಲ್ಲಿ ಶೇರಿಗಾರಿಕೆ ಮಾಡಿಕೊಂಡಂತಹ ರಾಮಣ್ಣ ಶೆಟ್ಟಿಯವರು ಬಹಳ ಕಷ್ಟಪಟ್ಟು ತಮ್ಮ ಜೀವನವನ್ನು ನಡೆಸುವುದರೊಂದಿಗೆ ಮುಂದಾಳತ್ವ ವಹಿಸಿ, ಮಕ್ಕಳಿಗೆ ಉತ್ತಮವಾದ ಸಂಸ್ಕಾರ ಆಚಾರ ಗಳನ್ನು ಮೈಗೂಡಿಸಿಕೊಂಡಿದ್ದರು. ಮಕ್ಕಳಿಗೆ ಒಳ್ಳೆಯ ವಿಚಾರಗಳನ್ನ ನೀಡುವುದರೊಂದಿಗೆ, ಮಕ್ಕಳಲ್ಲಿನ ಆತ್ಮಸ್ಥೈರ್ಯವನ್ನು ಕುಗ್ಗದ ಹಾಗೆ ನೋಡಿಕೊಂಡಂತಹ ಹಿರಿಯ ವ್ಯಕ್ತಿತ್ವ. ತದನಂತರದಲ್ಲಿ ಘಟ್ಟದಿಂದ ಮಲೆನಾಡಿನಿಂದ ಕರಾವಳಿ ಭಾಗಕ್ಕೆ ಆಗಮಿಸಿ, ಮೊಳಹಳ್ಳಿ ಗ್ರಾಮದ ಕಾಜಾಡಿ ಮನೆಯಲ್ಲಿ ನೆಲೆ ನಿಂತು ತಮ್ಮ ಬದುಕನ್ನ ವಿಸ್ತರಿಸಿಕೊಂಡರು. ಮೃತರು ಕೃಷಿ ಕಾರ್ಯದಲ್ಲಿಯೂ ಕೂಡ ತನ್ನನ್ನು ತೊಡಗಿಸಿಕೊಂಡು, ಜೊತೆಗೆ ಹೈನುಗಾರಿಕೆ ಮತ್ತು ತುಂಬು ಸಂಸಾರದ ಕುಟುಂಬ ಇವರದಾಗಿತ್ತು .ಮೃತರು ಮೂವರು ಪುತ್ರಿಯರನ್ನ, ಹಾಗೂ ನಾಲ್ವರು ಪುತ್ರರನ್ನ, ಅಳಿಯಂದಿರನ್ನು ಸೊಸೆಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಗಲಿದ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನ ಕೋರಲಿ ಎಂದು ಕುಟುಂಬಸ್ಥರು ಆಶಿಸಿದ್ದಾರೆ.