

ಡೈಲಿವಾರ್ತೆ:16/ಮಾರ್ಚ್/2026


ಕೋಟ ಪಡುಕರೆ: ಎಸ್‌ಎಸ್‌ಎಫ್ ಹಾಗೂ ಆರ್‌ಡಿಸಿ ವತಿಯಿಂದ ಮಹ್ಲರತುಲ್ ಬದ್ರಿಯಾ ಮಜ್ಲಿಸ್ ಮತ್ತು ಇಫ್ತಾರ್ ಸಮ್ಮಿಲನ

ಕೋಟ: ಕೋಟ ಪಡುಕರೆ ಸುನ್ನಿ ಸ್ಟೂಡೆಂಟ್ ಫೆಡರೇಷನ್ (SSF) ಹಾಗೂ ರಿಫಾಯಿಯ ದಫ್ ಕಮಿಟಿ (RDC) ಇವುಗಳ ಜಂಟಿ ಆಶ್ರಯದಲ್ಲಿ ಮಾಸಿಕ ‘ಮಹ್ಲರತುಲ್ ಬದ್ರಿಯಾ’ ಮಜ್ಲಿಸ್ ಹಾಗೂ ಭವ್ಯ ಇಫ್ತಾರ್ ಸಮ್ಮಿಲನವು ಭಾನುವಾರ ಇಲ್ಲಿನ ಹಿದಾಯತುಲ್ ಇಸ್ಲಾಂ ಅರೇಬಿಕ್ ಮದರಸದ ವಠಾರದಲ್ಲಿ ಬಹಳ ಯಶಸ್ವಿಯಾಗಿ ಜರುಗಿತು.

ಅಸರ್ ನಮಾಜಿನ ಬಳಿಕ ಕಾರ್ಯಕ್ರಮವು ಆರಂಭಗೊಂಡಿತು. ಮಸೀದಿಯ ಖತೀಬರಾದ ಸಿದ್ದಿಕ್ ಸಖಾಫಿ ಅವರು ದುವಾ ನೆರವೇರಿಸುವ ಮೂಲಕ ‘ಮಹ್ಲರತುಲ್ ಬದ್ರಿಯಾ’ ಮಜ್ಲಿಸ್‌ಗೆ ಚಾಲನೆ ನೀಡಿದರು.

ಪವಿತ್ರ ರಂಜಾನ್ ಮಾಸದ ಸಂದೇಶ ಹಾಗೂ ಆಧ್ಯಾತ್ಮಿಕ ಚಿಂತನೆಗಳೊಂದಿಗೆ ನಡೆದ ಈ ಮಜ್ಲಿಸ್‌ನಲ್ಲಿ ಬದ್ರ್ ಯುದ್ಧದ ಸ್ಮರಣೆ ಹಾಗೂ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.

ಸಂಜೆಯ ಇಫ್ತಾರ್ ಕೂಟದಲ್ಲಿ ಜಮಾತಿನ ನೂರಾರು ಸಂಖ್ಯೆಯ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಅತ್ಯಂತ ಶಿಸ್ತುಬದ್ಧವಾಗಿ ಪಾಲ್ಗೊಂಡಿದ್ದರು. ಪರಸ್ಪರ ಸೌಹಾರ್ದತೆ ಮತ್ತು ಭ್ರಾತೃತ್ವವನ್ನು ಸಾರುವ ಈ ಸಮ್ಮಿಲನವು ಹಬ್ಬದ ಕಳೆಯನ್ನು ತಂದಿತ್ತು. ಸ್ಥಳೀಯ ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.