ಡೈಲಿ ವಾರ್ತೆ: 10/OCT/2023

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಹನೀಫ್ ಹಾಜಿ ಗೋಳ್ತಮಜಲು ಕರೆ.

ಬಂಟ್ವಾಳ : ರಾಜ್ಯ ವಿಧಾನ ಪರಿಷತ್ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ 2024 ಜೂನ್ ತಿಂಗಳಲ್ಲಿ ನಡೆಯುವ ಚುನಾವಣೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಪ್ರತೀ ಜಮಾಅತ್ ನಲ್ಲಿ ಕರೆ ನೀಡುವಂತೆ ಬಂಟ್ವಾಳ ತಾಲೂಕು ಸಂಯುಕ್ತ ಜಮಾತ್ ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ವಿನಂತಿಸಿದ್ದಾರೆ.

ಅವರು ಮೆಲ್ಕಾರ್ ಬಿರ್ವ ಸೆಂಟರ್ ನಲ್ಲಿ ಸೋಮವಾರ ನಡೆದ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಸಭೆಯಲ್ಲಿ ಮಾತನಾಡಿದ ಅವರು ಈ ಬಗ್ಗೆ ತಾಲೂಕಿನ ಎಲ್ಲಾ ಮಸೀದಿಗಳ ಅದ್ಯಕ್ಷರು ಹಾಗೂ ಖತೀಬರುಗಳು ತಮ್ಮ ಮೊಹಲ್ಲಾಗಳಲ್ಲಿ ಜನಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಕಮಿಟಿ ಪ್ರಧಾನ ಕಾರ್ಯದರ್ಶಿ ನೋಟರಿ ಅಬೂಬಕ್ಕರ್ ವಿಟ್ಲ ಮಾತನಾಡಿ ಮಿಲಾದ್ ಪ್ರಯುಕ್ತ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದ್ದು ಈಗಾಗಲೇ ಹಲವು ಮಂದಿ ಪ್ರಬಂಧ ಕಳುಹಿಸಿಕೊಟ್ಟಿದ್ದಾರೆ, ಅಕ್ಟೋಬರ್ 12 ಕೊನೆಯ ದಿನಾಂಕವಾಗಿದ್ದು ಅದರೊಳಗೆ ಕಳುಹಿಸಿಕೊಡಲು ಸೂಚಿಸಿದರು.

ದ.ಕ.ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮಂಗಳೂರಿನ ನ್ಯಾಯವಾದಿಗಳಾದ ಸುಲೈಮಾನ್ ಎಸ್, ಮುಖ್ತಾರ್ ಸಭೆಯಲ್ಲಿ ಭಾಗವಹಿಸಿ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೋಶಾಧಿಕಾರಿ ಹಾಜಿ ಪಿ.ಎಸ್.ಅಬ್ದುಲ್ ಹಮೀದ್ ನೆಹರುನಗರ, ಪದಾಧಿಕಾರಿಗಳಾದ ಬಿ.ಎ.ಮುಹಮ್ಮದ್ ಬಂಟ್ವಾಳ, ತೌಫೀಕ್ ರಫೀಕ್ ಆಲಡ್ಕ, ಶಾಲಿಮಾರ್ ರಫೀಕ್ ಸುರಿಬೈಲು, ಕೆ.ಎಸ್.ಮುಹಮ್ಮದ್ ಕಡೇಶ್ವಾಲ್ಯ, ಶೇಖ್ ರಹ್ಮತುಲ್ಲಾ ಕಾವಳಕಟ್ಟೆ, ಆನಿಯಾ ದರ್ಬಾರ್ ಹಂಝ ಬಸ್ತಿಕೋಡಿ ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು.

ಲತೀಫ್ ನೇರಳಕಟ್ಟೆ ಸ್ವಾಗತಿಸಿ, ವಂದಿಸಿದರು