ಡೈಲಿ ವಾರ್ತೆ: 19/OCT/2023

ಸಾಸ್ತಾನ- ಭಜನೆ ಮೂಲಕ ಧಾರ್ಮಿಕ ಪ್ರಜ್ಞೆ- ದಯಾನಂದ ಪೂಜಾರಿ – ಪಾಂಡೇಶ್ವರ ಕಳಿಬೈಲ್ ತುಳಸಿ ಅಮ್ಮ ದೈವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ

ಕೋಟ: ಭಜನೆ ಮೂಲಕ ಯುವ ಸಮೂಹವಕ್ಕೆ ಧಾರ್ಮಿಕ ಪ್ರಜ್ಞೆ ಬೆಳೆಸಲು ಸಾಧ್ಯವಿದೆ ಎಂದು ವಿದ್ಯುತ್ ಗುತ್ತಿಗೆದಾರ ದಯಾನಂದ್ ಪೂಜಾರಿ ಹೇಳಿದರು.
ಶ್ರೀ ಕ್ಷೇತ್ರ ಶ್ರೀ ತುಳಸಿ ಅಮ್ಮ, ಶಿರಸಿ ಮಾರಿಕಾಂಬೆ, ಪಂಜುರ್ಲಿ ಸ್ವಾಮಿ ಕೊರಗಜ್ಜ ಸಪರಿವಾರ ದೈವಸ್ಥಾನ ಕೆಳಬೆಟ್ಟು ಸಾಸ್ತಾನ ಇಲ್ಲಿ ಶ್ರೀ ಕ್ಷೇತ್ರ ಕಳಿಬೈಲ್ ಇಲ್ಲಿ ಶರನ್ನವರಾತ್ರಿ ಮಹೋತ್ಸವದ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿಯೊಂದು ಮನೆಯ ಮಕ್ಕಳಿಗೆ ಭಜನೆ ಸಂಸ್ಕಾರ ನೀಡಿದರೆ ಆ ಮನೆ ಸಂಸ್ಕಾರಭರಿತವಾಗಿಸಲು ಸಾಧ್ಯವಿದೆ. ಭಜನೆಯ ಮೂಲಕ ಶ್ರೀ ದೇವರನ್ನು ಸನಿಹದಲ್ಲಿ ಕಾಣಲು ಸಾಧ್ಯವಿದೆ ,ಭಜನೆ ಮನೆ ಮನದಲ್ಲಿ ಪ್ರಚಲಿತಗೊಳ್ಳಲು ಇಂಥಹ ಕ್ಷೇತ್ರಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ದೈವಸ್ಥಾನ ಮುಕ್ತೇಸರ ಎಂ.ಸಿ ಚಂದ್ರಶೇಖರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ರಾಘವೇಂದ್ರ ಭಜನಾ ಮಂಡಳಿ ಪಾಂಡೇಶ್ವರ ಇದರ ಅಧ್ಯಕ್ಷ ದಿನಕರ್, ಕೋಟದ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ,ಪತ್ರಕರ್ತ ರವೀಂದ್ರ ಕೋಟ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ದೈವಸ್ಥಾನದ ಪ್ರದಾನ ಅರ್ಚಕ ಅಭಿಜಿತ್ ಪಾಂಡೇಶ್ವರ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶ್ರೀಶ ಪಾಂಡೇಶ್ವರ ನಿರೂಪಿಸಿ ವಂದಿಸಿದರು.
ನಂತರ ಶ್ರೀ ರಾಘವೇಂದ್ರ ಭಜನಾ ತಂಡ ಪಾಂಡೇಶ್ವರ
ಇವರಿಂದ ಭಜನಾಮೃತ ಕಾರ್ಯಕ್ರಮ ನಡೆಯಿತು.