ಡೈಲಿ ವಾರ್ತೆ: 21/OCT/2023
ಲೋಕಾಯುಕ್ತ ಬಲೆಗೆ ಬಿದ್ದ ರಾಜಾಜಿನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಹಾಗೂ ಹೆಡ್ ಕಾನ್ಸ್ಟೇಬಲ್!
ಬೆಂಗಳೂರು;ಬೆಂಗಳೂರಿನ ರಾಜಧಾನಿಯಲ್ಲಿ ಲಂಚ ಸ್ವೀಕರಿಸುವಾಗ ರಾಜಾಜಿನಗರ ಪೊಲೀಸರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹೆಡ್ ಕಾನ್ಸ್ಟೇಬಲ್ ಆಂಜನೇಯ ಪಿಎಸ್ ಐ ಮಾರುತಿ, ಇನ್ಸ್ಪೆಕ್ಟರ್ , ಲಕ್ಷಣ್ ಗೌಡ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್(FIR) ದಾಖಲಾಗಿದ್ದು ದಾಳಿ ವೇಳೆ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಐದು ಸಾವಿರ ಲಂಚದ ಹಣ ಪಡೆಯುವಾಗ ಪ್ರಕರಣದA1 ಆರೋಪಿ ಹೆಚ್ ಸಿ ಆಂಜನೇಯ ಲೋಕಾ ಬಲೆಗೆ ಬಿದ್ದಿದ್ದಾರೆ. ಪ್ರಕರಣದಲ್ಲಿ ಪಿಎಸ್‌ಐ ಮಾರುತಿ, A2 ಪಿಐ ಲಕ್ಷ್ಮಣ್ ಗೌಡ A3 ಆರೋಪಿಯಾಗಿದ್ದು ಲೋಕಾಯುಕ್ತ ಪೋಲೀಸರ ದಾಳಿ ವೇಳೆ ಎಸ್ಕೇಪ್ ಆಗಿದ್ದಾರೆ.
ಪ್ರಕರಣವೊಂದರಲ್ಲಿ ಬಿ ರಿಪೋರ್ಟ್ ಹಾಕಲು 50 ಸಾವಿರ ಹಣಕ್ಕೆ ಪಿಸಿ ಆಂಜನೇಯ ಡಿಮಾಂಡ್ ಮಾಡಿದ್ರಂತೆ. ಈ ಪ್ರಕರಣದಲ್ಲಿ ಹೆಡ್ ಕಾನ್ಸ್ ಟೇಬಲ್ ಆಂಜನೇಯ 5000 ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ರಾಜಾಜಿನಗರ ಠಾಣೆಯ ಇನ್ಸ್ ಪೆಕ್ಟರ್ ಲಕ್ಷ್ಮಣಗೌಡ, ಪಿಎಸ್ಐ ಮಾರುತಿ ಅವರಿಗಾಗಿ ಹುಡುಕಾಟ ನಡೆಸಲಾಗಿದೆ ಎನ್ನಲಾಗಿದೆ.