



ಡೈಲಿ ವಾರ್ತೆ: 23/OCT/2023


ವರದಿ: ಬಿ. ಮಾರುತಿ ಕೊಟ್ಟೂರು
ಮಹಿಳಾ ದಿಟ್ಟ ಹೋರಾಟಗಾರ್ತಿ ಕಿತ್ತೂರ ರಾಣಿ ಚೆನ್ನಮ್ಮ ನವರ ಜಯಂತಿ ಅಚರಣೆ
ಕೊಟ್ಟೂರು: ಕಿತ್ತೂರ ರಾಣಿ ಚೆನ್ನಮ್ಮ 1778 ರಲ್ಲಿ ಅಕ್ಟೋಬರ್ 23ರಂದು ಬೆಳಗಾವಿ ಜಿಲ್ಲೆಯಲ್ಲಿ ಜನಿಸಿದರು.
1829 ಪೆಬ್ರವರಿ 21ರಂದು ಬೈಲಹೊಂಗಲದಲ್ಲಿ ನಿಧನರಾದರು.

ಪ್ರ ಪ್ರಥಮ ಸ್ವಾತಂತ್ರ್ಯ ಮಹಿಳಾ ಹೋರಾಟಗಾತಿ೯. ಇಂತಹ ಮಹಾನ್ ಹೋರಾಟಗಾತಿ೯ 245ನೇ ಜಯಂತಿಯನ್ನು ಅ. 23 ರಂದು
ಕೊಟ್ಟೂರು ತಾಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮಾಜಿಯ 245ನೇ ಜಯಂತಿ ಕಾರ್ಯಕ್ರಮನ್ನು ಅವರ ಭಾವಚಿತ್ರಕ್ಕೆ ಪುಷ್ಪಿಚ೯ನೆ ಹಾಗೂ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಣೆ ಸಮಾಜದ ಮಾಡಲಾಯಿತ್ತು.

ನಂತರ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಚಾಪಿ ಚಂದ್ರಪ್ಪ ಇವರು ಮಾತನಾಡಿ 1778 ಅಕ್ಟೋಬರ್ 23 ರಂದು ಬೆಳಗಾವಿ ಜಿಲ್ಲೆಯ ಕಾಕತಿಯಲ್ಲಿ ಜನಿಸಿದ ಚನ್ನಮ್ಮಾಜಿಯು ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆಯಾಗಿದ್ದಾರೆ. 1824 ಅಕ್ಟೋಬರ್21 ರಂದು ಕಿತ್ತೂರು ಸಂಸ್ಥಾನದ ಮೇಲೆ ಯುದ್ದಕ್ಕೆ ಬಂದ ಥ್ಯಾಕರೆಯು ಚನ್ನಮ್ಮನ ಅಂಗರಕ್ಷಕ ಅಮಟೂರು ಬಾಳಪ್ಪನ ಗುಂಡಿಗೆ ಬಲಿಯಾದರು. ಈ ದಿನವನ್ನು ‘ಕಿತ್ತೂರು ಉತ್ಸವ’ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಈಶ್ವರಪ್ಪ ತುರಕಾಣಿ ನಿವೃತ್ತ ಮುಖ್ಯ, ಖಾನಾವಳಿ ಶಿವಕುಮಾರ, ಪಟ್ಟಣ ಪಂಚಾಯಿತಿ ಸದಸ್ಯರಾದ ವೀಣಾ ವಿವೇಕಾನಂದಗೌಡ, ಪಂಪಾಪತಿ, ಪ್ರೌಢಶಾಲಾ ಶಿಕ್ಷಕರಾದ ಸೋಮಣ್ಣ, ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಲೀಲಾ ಎಸ್. ಗ್ರೇಡ್-2 ತಹಶೀಲ್ದಾರರು ವಹಿಸಿಕೊಂಡು ನೆರವೇರಿಸಿದರು. ಡಿ ಬಸವನಗೌಡ್ರು ರೈತ ಮುಖಂಡರು, ಪಂಚಮಸಾಲಿ ಸಮಾಜಕ ಕಾರ್ಯದರ್ಶಿ ಅಶೋಕ, ಖಜಾಂಚಿ ಕಲ್ಲೇಶಪ್ಪ, ಅಂಗಡಿ ಪಂಪಾಪತಿ, ಅಶೋಕ ಇಂಜಿನಿಯರ್, ವೀರವನಿತೆ ಕಿತ್ತೂರುರಾಣಿ ಚನ್ನಮ್ಮ ಮಹಿಳಾ ಸಂಘದವರು , ಕಂದಾಯ ನಿರೀಕ್ಷಕ ಹಾಲಸ್ವಾಮಿ, ಸಿಬ್ಬಂದಿ ವಿಜಯಕುಮಾರ್ ಪುಟಾಣಿ, ಸಿರಾಜ್ ವುದ್ದೀನ್, ಗ್ರಾಮ ಲೆಕ್ಕಿಗರು ಹಾಜರಿದ್ದರು, ಸಿ.ಮ.ಗುರುಬಸವರಾಜ ಕಾರ್ಯಕ್ರಮ ನಿರೂಪಿಸಿದರು. ವೀರಭದ್ರಪ್ಪ ಪ್ರೌಢಶಾಲಾ ಶಿಕ್ಷಕರು ಸ್ವಾಗತಿಸಿದರೆ, ಶಿವಕುಮಾರ್ ಶಿಕ್ಷಕರು ವಂದಿಸಿದರು.