ಡೈಲಿ ವಾರ್ತೆ: 23/OCT/2023

ವರದಿ: ಬಿ. ಮಾರುತಿ ಕೊಟ್ಟೂರು

ಪ್ರಪ್ರಥಮ ಸ್ವತಂತ್ರ ಹೋರಾಟ ಗಾರ್ತಿ ‘ಚಿನ್ನಮ್ಮಜಿ’ ಯ ಜಯಂತಿಯಲ್ಲಿ ಸರ್ಕಾರಿ ನೌಕರಿರಿಗೆ ಸನ್ಮಾನ



ಕೆಲವು ಮಹಾನಾಯಕರ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ವೀರರ ಜಯಂತಿಯನ್ನು, ಅವರ ಸವಿ ನೆನಪಿಗಾಗಿ ಕೆಲವು ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಸಮಾಜ ಸೇವೆ ಮಾಡುವ ಮೂಲಕ ಅಥಾವ ಗಣ್ಯರಿಗೆ ಸನ್ಮಾನ ಮಾಡುವ ಮೂಲಕ ಜಯಂತಿ ಆಚರಣೆಯನ್ನು ಮಾಡಲಾಗುತ್ತದೆ.ಹೀಗೆ ಸಮಾಜ ಸೇವೆ ಮಾಡುವ ಎಲ್ಲಾ ಕಮಿಟಿಯರಿಗೆ, ಆ ದೇವರು ಅವರಿಗೆ ಆರೋಗ್ಯ ಆಯುಷ್ ಕಲ್ಪಿಸಲಿ ಎಂದು ಆ ದೇವರನ್ನು ಪ್ರಾಥಿ೯ಸುತ್ತಾ, ನಮ್ಮ ; ಸುವರ್ಣವಾಹಿನಿ ದಿನ ಪತ್ರಿಕೆ ಮಾಧ್ಯಮದಿಂದ ಒಂದು ‘ಸಲಾಂ’ ಹೇಳಿ ಬಿಡೋಣ! ಏನಂತೀರ?

ಕೊಟ್ಟೂರು ತಾಲುಕಿನಲ್ಲಿ ವೀರ ವನತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಕೊಟ್ಟೂರಿನ ಪಂಚಮಸಾಲಿ ಸಂಘಟನೆಯವರು ಚೆನ್ನಮ್ಮಾಜಿಗೆ ಪುಷ್ಪ ನಮನವನ್ನು ತಾಲುಕು ಕಛೇರಿಯಲ್ಲಿ ಜಯಂತಿ ಆಚರಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ‘ಚೆನ್ನಮ್ಮಾಜಿ’ಯ ಶೌಯ೯ದ ಬಗ್ಗೆ ತಮ್ಮ ಭಾಷಣದಲ್ಲಿ ‘ನೆನೆಯುತ್ತಾ ‘ ಹೊಗಳಿದರು. ಮಹಾನ್ ಹೋರಾಟಗಾತಿ೯ ಜಯಂತಿ ಆಚರಣೆ ಮಾಡುವುದು ನಮ್ಮೆಲ್ಲರ ಭಾಗ್ಯ ಎಂದರು. ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಸರಕಾರಿ ನೌಕರರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಪಂಚಮಸಾಲಿ ಕೊಟ್ಟೂರು ತಾಲುಕು ಘಟಕದ ಅಧ್ಯಕ್ಷ ಚಾಪೆ ಚಂದ್ರಪ್ಪ , ಕಾಯ೯ದಶಿ೯ ದಾವಣಗೆರೆ ಬಟ್ಟೆ ಅಂಗಡಿ ಅಶೋಕ್, ಅಶೋಕ್ ಇಂಜಿನೀಯರ್ , ಪಂಚಮಸಾಲಿ ಘಟಕದ ಇನ್ನು ಇತರ ಪದಾಧಿಕಾರಿಗಳು ಹಾಗೂ ತಾಲುಕು ಸಿಬ್ಬಂದಿ ಮತ್ತು ವಗ೯ದವರು ಇದ್ದರು.