ಡೈಲಿ ವಾರ್ತೆ: 01/NOV/2023
ಕನ್ನಡ ನೆಲ – ಜಲ – ಭಾಷೆಯ ಸಂಭ್ರಮದ ನಿತ್ಯೋತ್ಸವದ ದಿನ ಪಾರಂಪರಿಕಗತ ಸಾಂಸ್ಕೃತಿಕ ನೆಲದ ಆಚರಣೆಯ ಸೊಬಗು : ಕನ್ನಡ ರಾಜ್ಯೋತ್ಸವದ ವೈಭವ ಬಾರಿಸು ಕನ್ನಡ ಡಿಂಡಿಮವ “ನಿತ್ಯೋತ್ಸವ ತಾಯಿ ನಿನಗೆ ನಿತ್ಯೋತ್ಸವ”
ನವಂಬರ್ 01 ಎಂದು ತಕ್ಷಣ ಕನ್ನಡ ರಾಜ್ಯೋತ್ಸವದ ನೆನಪು ಮತ್ತೆ ಮತ್ತೆ ನಮ್ಮನ್ನ ನೆನಪಿಸುತ್ತದೆ. ಕನ್ನಡದ ಪ್ರತಿಯೊಬ್ಬ ವ್ಯಕ್ತಿಯೂ ಕನ್ನಡತನವನ್ನ ಎದುರು ನೋಡುವ ಸಂತಸದ ಸಂಭ್ರಮದ ಗಳಿಗೆ ಮತ್ತೆ ನೆನಪಿಸುತ್ತಿದೆ. ನವಂಬರ್ ಬಂದಾಗಲೆಲ್ಲ ಕನ್ನಡದ ಕಂಪನ ಪಸರಿಸುವ ಶ್ರೇಷ್ಠತೆಯ ವ್ಯಕ್ತಿಯನ್ನ ಅಭಿನಂದಿಸುವ ಕೆಲಸಗಳು ಆಗುತ್ತಿರುವುದು ಪ್ರಸ್ತುತವೇ ಕರ್ನಾಟಕದಲ್ಲಿ ಕನ್ನಡಿಗನೇ ಸರ್ವಭೌಮ ಎನ್ನುವಂತದ್ದು ನಮ್ಮ ನಾಡಿನ ಹೆಮ್ಮೆಯ ಶಕ್ತಿ. ಕನ್ನಡ ನೆಲ ಜಲ ಭಾಷೆ ಮಣ್ಣಿಗಾಗಿ ಅನೇಕ ಸಾಹಿತಿಗಳು ಕನ್ನಡಪರ ಸಂಘಟನೆಗಳು ನಿರಂತರವಾಗಿ ಕನ್ನಡದ ಬಗ್ಗೆ ಕೆಲಸವನ್ನ ಮಾಡುತ್ತಿದೆ. ಕನ್ನಡ ಹಾಗೂ ಕನ್ನಡ ಈ ತರ ಸಂಸ್ಥೆಗಳು ಕನ್ನಡಕ್ಕಾಗಿ ನೀಡಿರುವಂತಹ ಶಕ್ತಿದಾಯಕ ಅಂಶಗಳನ್ನು ನಾವು ಗಮನಿಸಲೇಬೇಕು. ಕನ್ನಡ ಎನ್ನುವ ಈ ಶಕ್ತಿ ಪ್ರತಿಯೊಬ್ಬ ಕನ್ನಡ ಹೃದಯದಲ್ಲಿ ಅಚ್ಚಳಿಯದಂತೆ ಉಳಿದಿದೆ. ಕನ್ನಡ ಎಂದಾಗ ನಮಗೆ ನೆನಪಿಗೆ ಬರುವುದು ಕನ್ನಡ ಮಾತೆಯ ಅವಿಸ್ಮರಣೆಯ ಕ್ಷಣ. ಹಚ್ಚೇವು ಕನ್ನಡದ ದೀಪ ಎನ್ನುವ ಆ ಕನ್ನಡ ತಾಯಿಯ ಘೋಷ ವಾಕ್ಯ ನಮ್ಮನ್ನ ಮತ್ತೆ ಮತ್ತೆ ನೆನಪಿಸುವ ಆಹ್ವಾನಿಸುತ್ತದೆ
ಚಳವಳಿಯೊಂದಿಗೆ 1905 ರಲ್ಲಿಯೇ ರಾಜ್ಯವನ್ನು ಏಕೀಕರಿಸುವ ಕನಸು ಕಂಡ ಮೊದಲ ವ್ಯಕ್ತಿ ಆಲೂರು ವೆಂಕಟರಾವ್ . 1950 ರಲ್ಲಿ ಭಾರತವು ಗಣರಾಜ್ಯವಾಯಿತು ಮತ್ತು ನಿರ್ದಿಷ್ಟ ಪ್ರದೇಶದಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ದೇಶದಲ್ಲಿ ವಿವಿಧ ಪ್ರಾಂತ್ಯಗಳನ್ನು ರಚಿಸಲಾಯಿತು ಮತ್ತು ಇದು ದಕ್ಷಿಣ ಭಾರತದ ವಿವಿಧ ಸ್ಥಳಗಳನ್ನು ಒಳಗೊಂಡಂತೆ ಮೈಸೂರು ರಾಜ್ಯಕ್ಕೆ ಜನ್ಮ ನೀಡಿತು, ಇದನ್ನು ಮೊದಲು ರಾಜರು ಆಳಿದರು. 1 ನವೆಂಬರ್ 1956 ರಂದು, ಮೈಸೂರು ರಾಜ್ಯವು , ಹಿಂದಿನ ಮೈಸೂರು ಸಂಸ್ಥಾನದ ಬಹುಪಾಲು ಪ್ರದೇಶವನ್ನು ಒಳಗೊಂಡಿದೆ , ಬಾಂಬೆ ಮತ್ತು ಮದ್ರಾಸ್ ಪ್ರೆಸಿಡೆನ್ಸಿಗಳ ಕನ್ನಡ ಮಾತನಾಡುವ ಪ್ರದೇಶಗಳೊಂದಿಗೆ ವಿಲೀನಗೊಂಡಿತು, ಜೊತೆಗೆ ಹೈದರಾಬಾದ್ ಸಂಸ್ಥಾನವನ್ನು ರಚಿಸಲಾಯಿತು. ಏಕೀಕೃತ ಕನ್ನಡ ಮಾತನಾಡುವ ಉಪ-ರಾಷ್ಟ್ರೀಯ ಘಟಕ. ಉತ್ತರ ಕರ್ನಾಟಕ , ಮಲೆನಾಡು ( ಕೆನರಾ ) ಮತ್ತು ಹಳೆಯ ಮೈಸೂರು ಹೀಗೆ ಹೊಸದಾಗಿ ರೂಪುಗೊಂಡ ಮೈಸೂರು ರಾಜ್ಯದ ಮೂರು ಪ್ರದೇಶಗಳಾಗಿವೆ.
ಹೊಸದಾಗಿ ಏಕೀಕೃತ ರಾಜ್ಯವು ಆರಂಭದಲ್ಲಿ “ಮೈಸೂರು” ಎಂಬ ಹೆಸರನ್ನು ಉಳಿಸಿಕೊಂಡಿತು, ಇದು ಹೊಸ ಘಟಕದ ತಿರುಳನ್ನು ರೂಪಿಸಿದ ಹಿಂದಿನ ರಾಜಪ್ರಭುತ್ವದ ರಾಜ್ಯವಾಗಿತ್ತು. ಆದರೆ ಉತ್ತರ ಕರ್ನಾಟಕದ ಜನರು ಮೈಸೂರು ಎಂಬ ಹೆಸರನ್ನು ಉಳಿಸಿಕೊಳ್ಳಲು ಒಲವು ತೋರಲಿಲ್ಲ, ಏಕೆಂದರೆ ಇದು ಹಿಂದಿನ ಪ್ರಭುತ್ವ ಮತ್ತು ಹೊಸ ರಾಜ್ಯದ ದಕ್ಷಿಣ ಪ್ರದೇಶಗಳೊಂದಿಗೆ ನಿಕಟ ಸಂಬಂಧ ಹೊಂದಿತ್ತು. ಈ ತರ್ಕಕ್ಕೆ ಬದ್ಧವಾಗಿ, ರಾಜ್ಯದ ಹೆಸರನ್ನು 1 ನವೆಂಬರ್ 1973 ರಂದು “ಕರ್ನಾಟಕ” ಎಂದು ಬದಲಾಯಿಸಲಾಯಿತು. ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಾಗ ದೇವರಾಜ್ ಅರಸು ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕದ ಏಕೀಕರಣಕ್ಕೆ ಮನ್ನಣೆ ನೀಡಿದ ಇತರ ವ್ಯಕ್ತಿಗಳೆಂದರೆ ಕೆ. ಶಿವರಾಮ ಕಾರಂತ್ , ಕುವೆಂಪು , ಮಾಸ್ತಿ ವೆಂಕಟೇಶ ಅಯ್ಯಂಗಾರ್ , ಎಎನ್ ಕೃಷ್ಣರಾವ್ ಮತ್ತು ಬಿಎಂ ಶ್ರೀಕಂಠಯ್ಯ ಅವರಂತಹ ಸಾಹಿತಿಗಳು .
ಕನ್ನಡ ರಾಜ್ಯೋತ್ಸವದ ಸವಿಯ ನೆನಪು ಮತ್ತೆ ಮತ್ತೆ ನೆನಪಿಸುವುದು ನವಂಬರ್ ತಿಂಗಳು ಮಾತ್ರವಲ್ಲದೆ, ಬಹುತೇಕವಾಗಿ ಬೆಂಗಳೂರು ಭಾಗದಲ್ಲಿ ನವಂಬರ್ ಡಿಸೆಂಬರ್ ವರೆಗೂ ರಾಜ್ಯೋತ್ಸವವನ್ನು ವಿಜ್ರಮಣೆಯಿಂದ ಆಚರಿಸಿ, ಮಹತ್ವಾಕಾಂಕ್ಷಿಯ ಕಾರ್ಯಕ್ರಮವನ್ನು ನೆರವೇರಿಸುತ್ತಾರೆ. ಕನ್ನಡ ಎನ್ನುವಂತಹ ಕನ್ನಡದ ಕಂಪು ಪ್ರತಿಯೊಬ್ಬರ ಮನದಲ್ಲಿಯೂ ನೆಲೆ ಆಗುವಂತಹ ನಿಟ್ಟಿನಲ್ಲಿ ಕನ್ನಡದ ಬಗೆಗಿನ ಪ್ರಾಚ್ಯತ್ಯದ ಬದುಕನ್ನ ಕನ್ನಡ ಹಾಗೂ ಕರ್ನಾಟಕಕ್ಕೆ ಸಾರಿ ಹೇಳುತ್ತಿದೆ. ಕರ್ನಾಟಕ ಎನ್ನುವುದು ಕನ್ನಡದೊಳಗಿನ ಬಾಂಧವ್ಯದ ಶಕ್ತಿಯನ್ನ ಮತ್ತೆ ಇಮ್ಮಡಿಗೊಳಿಸುತ್ತದೆ. ಕರ್ನಾಟಕದ ಮಣ್ಣಿನ ಸೊಬಗು, ಸಾಂಸ್ಕೃತಿಕ ವೈಭವ ಹಾಗೂ ಕನ್ನಡದ ಈ ಕಂಪಿನ ಜನಪದ ಕಲೆ ಎಂದಿಗೂ ಕನ್ನಡತನವನ್ನ ಗಟ್ಟಿಗೊಳಿಸಿದ ಕನ್ನಡ ಮಾತ್ರವಲ್ಲದೆ ಕನ್ನಡಕ್ಕಿರುವಂತಹ ಧಾರ್ಮಿಕ ದಂತ ಕಥೆಗಳು ಕೂಡ ಕನ್ನಡವನ್ನು ಮತ್ತೊಮ್ಮೆ ಬೆಳೆಸುವಂತಹ ಪ್ರಯತ್ನ ಮಾಡುತ್ತಿರುವುದು ಇಂದಿನ ಜನಮಾನಸದಲ್ಲಿ ಪ್ರಸ್ತುತವಾಗಿ ಉಳಿದಿದೆ.
ಕನ್ನಡದ ಬಗೆ ಕವಿ ಶ್ರೇಷ್ಠರು ಹಾಡಿ ಹೊಗಳಿದ್ದಾರೆ, “ನಿತ್ಯೋತ್ಸವ ತಾಯಿ, ನಿನಗೆ ನಿತ್ಯೋತ್ಸವ”, ಎನ್ನುವಂತಹ ಕನ್ನಡದ ಬಗೆಗಿನ ಗೀತೆ ಇಂದಿಗೂ ಕರ್ನಾಟಕದಲ್ಲಿ ಜನಮನ್ನಣೆಯಲ್ಲಿದೆ. ಅದಲ್ಲದೆ, “ಬಾರಿಸು ಕನ್ನಡ ಡಿಂಡಿಮವ” ಎನ್ನುವ ಗೀತೆಗಳು ಕನ್ನಡದತನವನ್ನು ಮತ್ತೆ ಎತ್ತಿ ಹಿಡಿಯುವಲ್ಲಿ ಪ್ರಯತ್ನಪಟ್ಟಿದೆ. ಕನ್ನಡದ ಸಮಸ್ತ ಕಥೆ, ಕವನ, ಪ್ರಬಂಧ ,ಕಾದಂಬರಿಗಳನ್ನ ಕನ್ನಡದ ಮೂಲಕ ರಚಿಸುವುದರ ಮೂಲಕ ಕನ್ನಡದ ವೈಭವವನ್ನ ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗುತ್ತಿದೆ. ಸಾಂಸ್ಕೃತಿಕ ಚಿಂತನೆಯನ್ನು ಮತ್ತೆ ಮೇಳಯಿಸಲು ಈ ಒಂದು ಕನ್ನಡದ ರಾಜ್ಯೋತ್ಸವ ಮತ್ತೆ ಮತ್ತೆ ನೆನಪಿಸುತ್ತ, ನವಂಬರ್ 01 ಸಮೀಪಿಸುತ್ತಾ ಕನ್ನಡಕ್ಕಾಗಿ ನಾವೆಲ್ಲರೂ ಒಂದುಗೂಡುವ ಪ್ರಯತ್ನ ಆಗುತ್ತಿರುವುದು ಇಂದಿನ ಜನಮಾಸನಗಳಿಗೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಂದು ಕೊಟ್ಟಿದೆ.ಒಟ್ಟಾರೆಯಾಗಿ ನಿತ್ಯೋತ್ಸವ ತಾಯಿ ನಿನಗೆ ನಿತ್ಯೋತ್ಸವ ಎನ್ನುವ ಕನ್ನಡದ ಕಂಪು ಜಗದಗಲ ಪಸರಿಸಲಿ ಎನ್ನುವುದೇ ಪತ್ರಿಕೆಯ ಶುಭ ಹಾರೈಕೆ.