ಡೈಲಿ ವಾರ್ತೆ: 14/ಅ./2025

ಮಲ್ಪೆ| ಕೌಟುಂಬಿಕ ಕಲಹ – ಮನನೊಂದ ಮಹಿಳೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನ – ಬೀಚ್ ಗಸ್ತು ಸಿಬ್ಬಂದಿಗಳಿಂದ ರಕ್ಷಣೆ

ಮಲ್ಪೆ: ಜೀವನದಲ್ಲಿ ಜಿಗುಪ್ಸೆಗೊಂಡು ಮನನೊಂದು ಆತ್ಮಹತ್ಯೆಗೆ ಮಲ್ಪೆ ಬೀಚ್ ಗೆ ಬಂದಿದ್ದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ.

ಮಹಿಳೆ ಮಣಿಪಾಲದವರು ಎಂದು ತಿಳಿದುಬಂದಿದೆ.
ಮನೆಯಲ್ಲಿ ಕೌಟುಂಬಿಕ ಸಮಸ್ಯೆಯಿಂದಾಗಿ ಮನನೊಂದು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ತಕ್ಷಣ ಗಸ್ತು ಸಿಬ್ಬಂದಿಯವರು ಸಮುದ್ರದಿಂದ ಮೇಲೆತ್ತಿ ಆರೈಕೆ ಮಾಡಿದರು.

ಮಹಿಳೆಯನ್ನು ವಿಚಾರಿಸಿದಾಗ ತಾನು ಆತ್ಮಹತ್ಯೆ ಮಾಡಲು ಬಂದಿರುವುದಾಗಿ ಹೇಳಿಕೊಂಡಿದ್ದಾರೆ.
ಹೆಚ್ಚಿನ ವಿಚಾರಣೆಗಾಗಿ ಮಲ್ಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ತಕ್ಷಣ ಠಾಣೆ ಸಿಬ್ಬಂದಿ ಆಗಮಿಸಿ ಮಹಿಳೆಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಈ ಕಾರ್ಯಾಚರಣೆಯಲ್ಲಿ ಕರ್ನಾಟಕ ರಾಜ್ಯ ಟೂರಿಸ್ಟ್ ಪೊಲೀಸರಾದ ಸುಬ್ರಮಣ್ಯ ಹಾಗೂ ಸುರೇಶ್‌ ಅಂಚನ್‌ ಪಡುಬಿದ್ರಿ,ಗೃಹರಕ್ಷಕ ದಳ ದ ಸಿಬ್ಬಂದಿ ವಿಕಾಸ್ ಹಾಗೂ ಜೀವ ರಕ್ಷಕ ದಳದ ಸಿಬ್ಬಂದಿ ಅಶೋಕ್ ಮತ್ತು ದೂದ ಭಾಗಿಯಾದರು.