ಡೈಲಿ ವಾರ್ತೆ: 02/NOV/2023
ಕೋಟದಲ್ಲಿ ಕನ್ನಡ ರಾಜ್ಯೋತ್ಸವ: ಹವ್ಯಾಸಿ ಯಕ್ಷಗಾನ ಕಲಾವಿದ ಸುಜಯೀಂದ್ರ ಹಂದೆ ಅವರಿಗೆ ವರುಣತೀರ್ಥ ರಾಜ್ಯೋತ್ಸವ
ಪ್ರಶಸ್ತಿ ಪ್ರದಾನ
ಕೋಟ: ರಾಜ್ಯೋತ್ಸವ ಪ್ರಶಸ್ತಿಯನ್ನು ಸರಕಾರವೇ ಗುರುತಿಸಿ ಕೊಡುವಂತ ವ್ಯವಸ್ಥೆಯಾಗಬೇಕು ಹೊರತು ಜನ ಪ್ರಯತ್ನ ಪಟ್ಟು ಪಡೆಯುವಂತದ್ದು ಆಗಬಾರದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹೇಳಿದರು. ಅವರು ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ.1ರಂದು ಬುಧವಾರ ಕೋಟ ವರುಣತೀರ್ಥ ವೇದಿಕೆ ಇವರ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮದ “ನಿರಂತರ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಷ್ಟೋ ಜನ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹತೆ ಇಲ್ಲದವರು ಪ್ರಯತ್ನ ಮಾಡಿ ಪ್ರಶಸ್ತಿ ಪಡೆಯುತ್ತಾರೆ, ಆದರೆ ನಿಜವಾಗಿ ಅರ್ಹತೆ ಇದ್ದವರಿಗೆ ಕೆಲವರ ಒತ್ತಡದಿಂದ ಪ್ರಶಸ್ತಿ ತಪ್ಪಿ ಹೋಗುತ್ತದೆ ಇದು ಬೇಸರದ ಸಂಗತಿ ಎಂದರು.
ಅರ್ಹತೆ ಇದ್ದು ಪ್ರಶಸ್ತಿ ತಪ್ಪಿದರೆ ಬೇಸರ ಇಲ್ಲ ಆದರೆ ಅರ್ಹತೆ ಇಲ್ಲದೆ ಪ್ರಶಸ್ತಿಯನ್ನು ಪಡೆಯುವುದೇ ತಪ್ಪು ಎಂದು ಹೇಳಿದರು.
ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು, ಉದ್ಯೋಗಕ್ಕಾಗಿ ಹೊರರಾಜ್ಯ, ವಿದೇಶಗಳಿಗೆ ಹೋದಾಗಲೂ ಮಾತೃಭಾಷೆ ಕನ್ನಡವನ್ನು ಮರೆಯದೇ ಇರುವ ಸಂಪ್ರದಾಯವನ್ನು ನಾವು ರೂಢಿಸಿಕೊಳ್ಳಬೇಕಿದೆ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.
ಕನ್ನಡ ರಾಜ್ಯೋತ್ಸವ ಕಾರ್‍ಯಕ್ರಮದಲ್ಲಿ ವರುಣತೀರ್ಥ ರಾಜ್ಯೋತ್ಸವ ಪ್ರಶಸ್ತಿಯನ್ನು ಉಪನ್ಯಾಸಕ, ಹವ್ಯಾಸಿ
ಯಕ್ಷಗಾನ ಕಲಾವಿದ ಸುಜಯೀಂದ್ರ ಹಂದೆ ಅವರಿಗೆ ಪ್ರದಾನ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕೋಟ ಗೀತಾನಂದ ಪ್ರವರ್ತಕ ಆನಂದ ಸಿ.ಕುಂದರ್ ವಹಿಸಿದ್ದರು.
ಕೋಟೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ನಾಯಕ್ ದಿಕ್ಕೂಚಿ ಭಾಷಣ ಮಾಡಿದರು.
ಹವ್ಯಾಸಿ ಯಕ್ಷಗಾನ ಕಲಾವಿದ ಸುಜಯೀಂದ್ರ ಹಂದೆ
ವರುಣತೀರ್ಥ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದರು.
ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಶೆಟ್ಟಿ, ಚಲನಚಿತ್ರ ನಟ ರಾಘವೇಂದ್ರ ಡಿ.ಜಿ. ಹೆಬ್ರಿ
ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಈಜುಪಟು ಮಾಸ್ಟರ್ ದಿಗಂತ್ ಆರ್.ಪೂಜಾರಿ, ಕನ್ನಡ ಅಭಿಮಾನಿ
ಕನ್ನಡ ರಾಮಣ್ಣ ಪಾರಂಪಳ್ಳಿ, ಧಾರ್ಮಿಕ ಕ್ಷೇತ್ರ ಆನಂದ ದೇವಾಡಿಗ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯರಾಮ ಶೆಟ್ಟಿ ಪಡುಕರೆ, ಕೃಷ್ಣಮೂರ್ತಿ ಉರಾಳ
ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಕೋಟ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ
ಸಮಿತಿಯ ಸದಸ್ಯ ಸತೀಶ್ ಹೆಗ್ಡೆ, ವರುಣತೀರ್ಥ ವೇದಿಕೆಯ ಅಧ್ಯಕ್ಷ ಉದಯ ದೇವಾಡಿಗ, ಕಾರ್ಯಾಧ್ಯಕ್ಷ ಉಮೇಶ್ ಪ್ರಭು, ಹೋಟೆಲ್ ಉದ್ಯಮಿ ವೆಂಕಟೇಶ್ ಪ್ರಭು ಮೊದಲಾದವರು
ಉಪಸ್ಥಿತರಿದ್ದರು.
ವರುಣತೀರ್ಥ ವೇದಿಕೆಯ ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಶೇಖರ್ ಆಚಾರ್ಯ ಸ್ವಾಗತಿಸಿದರು. ಗೌರವಾಧ್ಯಕ್ಷ ಡಾ.ಅಶೋಕ್ ಆಚಾರ್ ಪ್ರಾಸ್ತಾವಿಕವಾಗಿ
ಮಾತನಾಡಿದರು.
ಜೀವನ್ ಕದ್ರಿಕಟ್ಟು, ಅವಿನಾಶ್, ರಂಜಿತ್ ಕುಮಾರ್ ಬಾರಿಕೆರೆ, ಪ್ರಸಾದ್ ಬಿಲ್ಲವ, ದರ್ಶನ್ ಗೌಡ ಸನ್ಮಾನಪತ್ರ ವಾಚಿಸಿದರು.
ಕಾರ್ಯಕ್ರಮದ ರೂವಾರಿ ಗಣೇಶ ಭಂಡಾರಿ ಹಾಗೂ “ನಿರಂತರ” ಶೀರ್ಷಿಕೆಯನ್ನು ನೀಡಿದ ಗಿರೀಶ್ ದೇವಾಡಿಗ ಇವರನ್ನು ಗೌರವಿಸಲಾಯಿತು.
ಮಂಜುನಾಧ ಆಚಾರ್ಯ ಕಾರ್ಯಕ್ರಮ
ನಿರೂಪಿಸಿದರು. ವಿಶ್ವನಾಥ್ ಗಾಣಿಗ ವಂದಿಸಿದರು.