ಡೈಲಿ ವಾರ್ತೆ: 02/NOV/2023
ವರದಿ: ವಿದ್ಯಾಧರ ಮೊರಬಾ
ಮನುಷ್ಯನ ಪ್ರವೃತ್ತಿಗಳಲ್ಲಿ ಪ್ರಧಾನ ಪಾತ್ರ ವಹಿಸುವ ಕ್ರೀಡೆಗಳು, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯ : ಎನ್.ಜಿ.ನಾಯಕ
ಅಂಕೋಲಾ : ಮನುಷ್ಯನ ಪ್ರವೃತ್ತಿಗಳಲ್ಲಿ ಪ್ರಧಾನ ಪಾತ್ರ ವಹಿಸುವ ಕ್ರೀಡೆಗಳು, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯ. ಆಧುನಿಕತೆ ಹೆಚ್ಚಾದಂತೆ ಮನುಷ್ಯ ಹಲವು ರೀತಿಯ ರೋಗಳಿಗೆ ತುತ್ತಾಗುತ್ತಿದ್ದಾನೆ. ಈ ನಿಟ್ಟಿನಲ್ಲಿ ಮನುಷ್ಯ ಆರೋಗ್ಯವಾಗಿರಲು ಉತ್ತಮ ಆಹಾರದೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸುವುದು ಅನಿವಾರ್ಯ ಎಂದು ಕುಮಟಾ ಡಯೆಟ್ ಕಾಲೇಜಿನ ಪ್ರಾಚಾರ್ಯ ಎನ್.ಜಿ.ನಾಯಕ ಹೇಳಿದರು.
ಅರಣ್ಯ ಇಲಾಖೆ ಕಾರವಾರ ಉಪ ವಿಭಾಗದವರು ತಾಲೂಕ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ ವಿಭಾಗ ಮಟ್ಟದ ಕ್ರೀಡಾಕೂಟದ ಧ್ವಜಾರೋಹಣಾ ನೆರವೇರಿಸಿ, ಸಿಂಗಾರ ಗೋನೆಯನ್ನು ತೆರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ಮಾತನಾಡಿ, ತಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿರಬೇಕು. ಸಿಬ್ಬಂದಿಗಳನ್ನು ಕ್ರೀಡೆಯನ್ನು ಪ್ರೋತ್ಸಾಹಿಸುವ ಸಲುವಾಗಿ ವೃತ್ತ ಮಟ್ಟದಲ್ಲಿಯೂ ಕ್ರೀಡಾ ಕೂಟ ಆಯೋಜಿಸಲಾಗಿದೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕೆ.ಸಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಪ್ರತಿ ಯೊಬ್ಬರು ವ್ಯವಸಾಯದಲ್ಲಿ ತೊಡಗಿಕೊಂಡು ಉತ್ತಮ ಆಹಾರ ಪದಾರ್ಥಗಳನ್ನು ಸೇವಿಸಿ ನೂರಾರು ವರ್ಷಗಳ ಕಾಲ ಜೀವನ ನಡೆಸುತ್ತಿದ್ದರು. ಆಧುನಿಕತೆ ಹೆಚ್ಚಾದಂತೆ ಮನುಷ್ಯ ಹಲವು ರೀತಿಯ ರೋಗಳಿಗೆ ಒಳಪಡುತ್ತಿದ್ದಾನೆ. ಈ ನಿಟ್ಟಿನಲ್ಲಿ ಮನುಷ್ಯ ಆರೋಗ್ಯವಾಗಿ ಜೀವನ ನಡೆಸಲು ಕ್ರೀಡೆಗಳಲ್ಲಿ ಭಾಗವಹಿಸು ವುದು ಉತ್ತಮ ಬೆಳವಣ ಗೆಯಾಗಿದೆ. ಪ್ರತಿಯೊಬ್ಬರು ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಬೇಕು ಎಂದರು.
ಇದೇವೇಳೆ ಅರಣ್ಯ ಇಲಾಖೆ ವತಿಯಿಂದ ಕ್ರೀಡೆಯಲ್ಲಿ ರಾಷ್ಟ್ರಮಟ್ಟ ಮತ್ತು ರಾಜ್ಯಮಟ್ಟದಲ್ಲಿ ಗುರುತಿಸಿ ಕೊಂಡ ಅನನ್ಯಾ ಪೂಜಾರಿ ಶಿರಸಿ, ಈಶ್ವರ ಎನ್.ಗೌಡ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರವಾರ ಉಪ ವಿಭಾಗದ ಬೀರಾ ಗೌಡ ನೇತೃತ್ವದಲ್ಲಿ ಧನಂಜಯ, ಸಿಕಂದರ್, ನಯನಾ, ವೀಣಾ ದೇವಾಡಿಗ ಇವರು ಕ್ರೀಡಾ ಜ್ಯೋತಿಯನ್ನು ಅತಿಥಿಗಳಿಗೆ ಹಸ್ತಾಂತರಿಸಿದರು. ದೈಹಿಕ ಶಿಕ್ಷಕರು ಪ್ರತಿಜ್ಞಾ ವಿಧಿ ಭೋಧಿಸಿದರು. ಪಥಸಂಚನದಲ್ಲಿ ಅಂಕೋಲಾ ಉಪ ವಿಭಾಗ ಪ್ರಥಮ ಸ್ಥಾನ ಪಡೆದಿದೆ ಎಂದು ದೈಹಿಕ ಶಿಕ್ಷಕ ಶ್ರೀಧರ ನಾಯ್ಕ ಘೋಷಣೆ ಮಾಡಿದರು.
ಐಎಫ್‍ಎಸ್ ಅಧಿಕಾರಿ ಅಭಿಷೇಕ ವಲಯ ಅರಣ್ಯಾಧಿಕಾರಿಗಳಾದ ಜಿ.ವಿ.ನಾಯಕ ಅಂಕೋಲಾ, ವಿ.ಪಿ. ನಾಯ್ಕ ಮಾಸ್ತಿಕಟ್ಟಾ, ರಾಘವೇಂದ್ರ ನಾಯ್ಕ ಕಾರವಾರ, ಭವ್ಯಾ ನಾಯಕ, ರಾಘವೇಂದ್ರ ಮಳ್ಳಪ್ಪನವರ ರಾಮನಗುಳಿ, ಸುರೇಶ ನಾಯ್ಕ ಹೊಸಕಂಬಿ, ಪ್ರಮೋದ ನಾಯಕ, ಲೋಕೇಶ ಪಾಠಣಕರ, ದೈಹಿಕ ಪರಿವೀಕ್ಷಕ ಮಂಜುನಾಥ ನಾಯಕ, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಎಸಿಎಫ್ ಕೃಷ್ಣ ಅಣ್ಣಯ್ಯ ಗೌಡ ಸ್ವಾಗತಿಸಿದರು. ಹಟ್ಟಿಕೇರಿ ಮರಮಟ್ಟು ವಿಭಾಗದ ಸಿಬ್ಬಂದಿ ಜಿ.ಪಿ. ಅರ್ಪಿತಾ, ಕಾರವಾರ ಎಸಿಎಫ್ ಜಯೇಶ ನಿರ್ವಹಿಸಿದರು.