ಡೈಲಿ ವಾರ್ತೆ: 04/NOV/2023

ಕೋಲಾರ:17 ವರ್ಷದ ಬಾಲಕನ ಭೀಕರ ಕೊಲೆ

ಕೋಲಾರ: ಶ್ರೀನಿವಾಸಪುರದ ಕಾಂಗ್ರೆಸ್ ಮುಖಂಡ ಶ್ರೀನಿವಾಸ್‌ ಹತ್ಯೆ ಪ್ರಕರಣದ ಬೆನ್ನಲ್ಲೇ ಜಿಲ್ಲೆಯಲ್ಲಿ ಮತ್ತೊಮ್ಮೆ ನೆತ್ತರು ಹರಿದಿದೆ. ನಗರದ ಪೇಟೆಚಾಮನಹಳ್ಳಿ ಬಡಾವಣೆಯ ಸರ್ಕಾರಿ ಶಾಲೆಯ ಆವರಣದಲ್ಲೇ 17 ವರ್ಷದ ಬಾಲಕನ ಬರ್ಬರ ಹತ್ಯೆ ಮಾಡಿರುವುದು ಕಂಡುಬಂದಿದೆ.

ಕಾರ್ತಿಕ್ ಸಿಂಗ್ (17) ಕೊಲೆಯಾದ ಬಾಲಕ.
ಪ್ರಥಮ‌ ಪಿಯುಸಿ ಓದುತ್ತಿದ್ದ ಬಾಲಕನನ್ನು ಯುವಕರ ಗುಂಪು ಕೊಲೆ‌‌ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತ ಬಾಲಕನ ಮೈಮೇಲೆ ಲಾಂಗು ಮಚ್ಚುಗಳಿಂದ ಹಲ್ಲೆ ನಡೆಸಿರುವುದು ಕಂಡುಬಂದಿದೆ. ಕೋಲಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.