ಡೈಲಿ ವಾರ್ತೆ: 05/NOV/2023

ಕೋಟೇಶ್ವರ: ಕೋಟಿ ತೀರ್ಥ ಸರೋವರಕ್ಕೆ ಧುಮುಕಿ ವೃದ್ಧ ಆತ್ಮಹತ್ಯೆ

ಕುಂದಾಪುರ: ಕೋಟೇಶ್ವರದ ಐತಿಹಾಸಿಕ ಶ್ರೀ ಕೋಟಿಲಿಂಗೇಶ್ವರ ದೇವಾಲಯದ ಕೋಟಿತೀರ್ಥ ಸರೋವರಕ್ಕೆ ಭಾನುವಾರ ಸಂಜೆ ವೃದ್ಧರೋರ್ವರು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರನ್ನು ಸುರೇಂದ್ರ ಮೇರ್ಟ (70) ಎಂದು ಗುರುತಿಸಲಾಗಿದೆ.

ಕೋಟ ಶ್ರೀ ಹಿರೇ ಮಹಾಲಿಂಗೇಶ್ವರ ದೇವಾಲಯ ಸಮೀಪದ ನಿವಾಸಿಯಾಗಿರುವ ಸುರೇಂದ್ರ ಅವರು, ಅನಾರೋಗ್ಯದಿಂದಾಗಿ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಸಂಜೆ ಪತ್ನಿ ಮತ್ತು ಪುತ್ರಿ ಆಸ್ಪತ್ರೆಗೆ ಬಂದು ಇವರ ಯೋಗಕ್ಷೇಮ ವಿಚಾರಿಸಿ ಊಟ ಕೊಟ್ಟು ಹೋಗಿದ್ದರು. ಅವರೆಲ್ಲ ಮನೆಗೆ ಹೋಗುತ್ತಿದ್ದಂತೆಯೇ ಸುರೇಂದ್ರ ಆಸ್ಪತ್ರೆಯಿಂದ ಹೊರಬಂದು ಸೀದಾ ಸರೋವರ ದಡ ತಲುಪಿದ್ದಾರೆ. ಮೋಡ, ತುಂತುರು ಮಳೆಯ ಕಾರಣದಿಂದ ಸರೋವರ ದಡದಲ್ಲಿ ಜನ ಸಂಚಾರ ವಿರಳವಾಗಿತ್ತು. ಇವರು ಏಕಾಏಕಿ ನೀರಿಗೆ ಧುಮುಕಿ ಜೀವನ ಅಂತ್ಯಗಾಣಿಸಿಕೊಂಡರು.
ಕುಂದಾಪುರ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದು, ಪಾರ್ಥಿವ ಶರೀರವನ್ನು ಶವಾಗಾರದಲ್ಲಿರಿಸಲಾಗಿದೆ. ಸೋಮವಾರ ಪೋಸ್ಟ್ ಮಾರ್ಟಮ್ ನಡೆಯುವುದಾಗಿ ತಿಳಿದುಬಂದಿದೆ.