ಡೈಲಿ ವಾರ್ತೆ: 11/NOV/2023

ಕೋಟತಟ್ಟು ಗ್ರಾ. ಪಂ. ನ 2023 – 24ನೇ ಸಾಲಿನ ಪ್ರಥಮ ಗ್ರಾಮಸಭೆ

ಕೋಟತಟ್ಟು ಗ್ರಾಮ ಪಂಚಾಯತ್ ನ 2023-24ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ನ. 10 ರಂದು ಶುಕ್ರವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಟತಟ್ಟು ಪಡುಕರೆಯಲ್ಲಿ ಅಧ್ಯಕ್ಷರಾದ ಶ್ರೀ ಕೆ ಸತೀಶ್ ಕುಂದರ್ ಬಾರಿಕೆರೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕೋಟತಟ್ಟು ಗ್ರಾಮ ಪಂಚಾಯತ್ ನ ನಿಖಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ, ನಿಖಟ ಪೂರ್ವ ಉಪಾಧ್ಯಕ್ಷರಾದ ಶ್ರೀ. ವಾಸು ಪೂಜಾರಿ, ನಿವೃತ್ತ ಪಂಪು ಚಾಲಕರಾದ ಶ್ರೀ. ಶ್ರೀಧರ ಗಾಣಿಗ, SLRM ಘಟಕಕ್ಕೆ ಬೆಂಕಿ ಅವಘಡ ಆದಾಗ ಸಹಕರಿಸಿದ ಶ್ರೀ. ಯೋಗೇಂದ್ರ ಪುತ್ರನ್, ಆರೋಗ್ಯ ಸಹಾಯಕರಾದ ಶ್ರೀ. ಹರೀಶ್, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ. ಸುಶೀಲ, ಕೋಟತಟ್ಟು ಗ್ರಾಮ ಪಂಚಾಯತ್ SLRM ಸ್ವಚ್ಚತಾ ಕಾರ್ಯಕರ್ತರು,ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನಿಸಲಾಯಿತು.

ಈಗಾಗಲೇ 60ಶೇಕಡಾ ಒಣಕಸ ಸಂಗ್ರಹಿಸಲಾಗಿದ್ದು, 100ಶೇಕಡಾ ಒಣಕಸ ಸಂಗ್ರಹಿಸುವ ಗುರಿ ಇಟ್ಟಕೊಂಡು ಕರಪತ್ರ ಕೊಟ್ಟು ಎಲ್ಲಾ ಮನೆಗಳಿಂದ ಕಸ ಸಂಗ್ರಹಿಸುವ ಬಗ್ಗೆ ಗ್ರಾಮ ಪಂಚಾಯತ್ ಮುಂದುವರೆದ ಬಗ್ಗೆ ಶ್ಲಾಘನೆ ವ್ಯಕ್ತವಾಯಿತು. ಹಾಗೆ ಹಸಿ ಕಸವನ್ನು ತೆಗೆದುಕೊಳ್ಳುವ ಬಗ್ಗೆ ಪ್ರಶ್ನಿಸಲಾಗಿದ್ದು, ಆರ್ಥಿಕ ಅಸಾಧ್ಯವಾದ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆ ಅಧ್ಯಕ್ಷರು ತಿಳಿಸಿದರು.

ಗ್ರಾಮ ಪಂಚಾಯತ್ ಎಲ್ಲಾ ಕಡೆ ಬೀದಿದೀಪ ಅಳವಡಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿ, ಟೈಮರ್ ಅಳವಡಿಸುವ ಬಗ್ಗೆ ಸಾರ್ವಜನಿಕರ ಬೇಡಿಕೆ ಬಂದಿದ್ದು ಇದರ ಬಗ್ಗೆ ಮುಂದಿನ ಕ್ರಿಯಾ ಯೋಜನೆಯಲ್ಲಿ ತೆಗೆದುಕೊಳ್ಳುವುದಾಗಿ ತಿಳಿಸಲಾಯಿತು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆರೆ, ತೋಡು ಹೂಳು ಎತ್ತಿರುವುದ ಬಗ್ಗೆ ಪ್ರಶಂಸೆ ವ್ಯಕ್ತವಾಗಿ ಇನ್ನೂ ಹೆಚ್ಚಿನ ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾ ಯೋಜನೆಯಲ್ಲಿ ಸೇರಿಸಲು ಸಾರ್ವಜನಿಕರು ಅರ್ಜಿ ನೀಡಿದರು.

ಜಲ ಜೀವನ್ ಯೋಜನೆಯಲ್ಲಿ ಎಲ್ಲಾ ಮನೆಗಳಿಗೆ ಕುಡಿಯುವ ನೀರಿನ ನಳ್ಳಿಗೆ ಮೀಟರ್ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮೀಟರ್ ರೀಡಿಂಗ್ ಮೂಲಕ ಕರ ವಸೂಲಿ ಮಾಡಲಾಗುವುದೆಂದು ತಿಳಿಸಲಾಯಿತು.

ಪಡುಕರೆ ಸರ್ಕಲ್ ಬಳಿ ಕಾಂಪೌಂಡ್ ರಚನೆಯಿಂದ ವಾಹನ ಸಂಚಾರಕ್ಕೆ ಅಡೆತಡೆ ಆಗಿರುವ ಬಗ್ಗೆ ಶ್ರೀ. ಯೋಗೇಂದ್ರ ಪುತ್ರನ್ ಅವರು ತಿಳಿಸಿದರು. ಇದರ ಬಗ್ಗೆ ಸಂಬಂಧ ಪಟ್ಟ ಇಲಾಖೆಗೆ ಬರೆದುಕೊಳ್ಳುವುದೆಂದು ಗ್ರಾಮ ಸಭೆಯಲ್ಲಿ ನಿರ್ಣಯಿಸಲಾಯಿತು.

ಕೋಟತಟ್ಟು ಗ್ರಾಮ ಪಂಚಾಯತ್ ನ ಸ್ಮಶಾನದ ಬಳಿ ಇರುವ ಸೇತುವೆಯ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತವಾಗಿ ತೆಕ್ಕಟ್ಟೆ ಕೊಮೆಯಿಂದ ಅಧಿಕ ಭಾರದ ಮರಳು ವಾಹನಗಳು ಹಾಗೂ ವಿವಿಧ ಕಾರ್ಖಾನೆಗಳ ಅಧಿಕ ಭಾರದ ವಾಹನಗಳು ಚಲಿಸುವುದರಿಂದ ಅಪಾಯದ ಬಗ್ಗೆ ಶ್ರೀ.ಶ್ರೀನಿವಾಸ ಪುತ್ರನ್ ಅವರು ತಿಳಿಸಿದರು. ಈಗಾಗಲೇ ಗ್ರಾಮ ಪಂಚಾಯತ್ ನಿಂದ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದು, ತಮ್ಮ ಇಲಾಖೆಯ ರಸ್ತೆ ಅಲ್ಲಾ ಎನ್ನುವ ಬಗ್ಗೆ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಮೀನುಗಾರಿಕಾ ಇಲಾಖೆಗೆ ಕೇಳಿಕೊಳ್ಳುವುದೆಂದು ನಿರ್ಣಯಿಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಸಭೆಯ ನೋಡೆಲ್ ಅಧಿಕಾರಿ ಡಾ|ಅನಿಲ್ ಕುಮಾರ್ ಹೆಚ್.(ಹಿರಿಯ ಪಶು ವೈದ್ಯಾಧಿಕಾರಿಗಳು, ಪಶು ಆಸ್ಪತ್ರೆ ಕೋಟ), ಉಪಾಧ್ಯಕ್ಷರಾದ ಶ್ರೀಮತಿ ಸರಸ್ವತಿ, ಸದಸ್ಯರಾದ ಶ್ರೀ. ಹೆಚ್ ಪ್ರಮೋದ್ ಹಂದೆ, ಶ್ರೀ. ವಾಸು ಪೂಜಾರಿ, ಶ್ರೀಮತಿ. ಜ್ಯೋತಿ, ಶ್ರೀ.ಪ್ರಕಾಶ್ ಹಂದಟ್ಟು, ಶ್ರೀಮತಿ ಪೂಜಾ, ಶ್ರೀ. ರವೀಂದ್ರ ತಿಂಗಳಾಯ, ಶ್ರೀಮತಿ ಅಶ್ವಿನಿ, ಶ್ರೀಮತಿ ಸೀತಾ, ಶ್ರೀಮತಿ ವಿದ್ಯಾ ಪಿ, ಶ್ರೀಮತಿ ಸಾಹಿರಾ ಬಾನು, ಶ್ರೀ. ರಾಬರ್ಟ್ ರೋಡ್ರಿಗಸ್, ಶ್ರೀಮತಿ ಸುಮತಿ ಅಂಚನ್ ಕಾರ್ಯದರ್ಶಿ , ಸಮುದಾಯ ಆರೋಗ್ಯ ಕೇಂದ್ರದ ಡಾ| ಮಾಧವ ಪೈ, ಶ್ರೀಮತಿ ಮೀನಾಕ್ಷಿ – ಮೇಲ್ವಿಚಾರಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮೆಸ್ಕಾಂ ಕೋಟದ ಶ್ರೀ . ಚಂದ್ರ ಶೇಖರ್, ಶ್ರೀ. ಗೋಪಾಲ ಪೂಜಾರಿ ASI ಆರಕ್ಷಕರ ಠಾಣೆ ಕೋಟ, ಡಾ|ಅಮೃತ ಎ ಎಸ್, ಸಹಾಯಕ ಪರಿಸರ ಅಧಿಕಾರಿ, ಶ್ರೀಮತಿ ಜಾನಕಿ ಮುಖ್ಯೋಪಧ್ಯಾಯರು ಸ. ಹಿ.ಪ್ರಾ.ಶಾಲೆ, ಕೋಟತಟ್ಟು ಪಡುಕರೆ,ಶ್ರೀ. ರೊಬ್ಬಿ ಪಿಂಟೋ ಸ. ಹಿ. ಪ್ರಾ.ಶಾಲೆ ಕೋಟ, ಶ್ರೀ.ರಾಘವೇಂದ್ರ ಗ್ರಾಮ ಆಡಳಿತಾಧಿಕರಿ, ಶ್ರೀ. ರಾಘವೇಂದ್ರ ಕಾಂಚನ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಸಾರ್ವಜನಿಕರು ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ರವೀಂದ್ರ ರಾವ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಪಂಚಾಯತ್ ಸಿಬ್ಬಂದಿ ಶ್ರೀ. ನವೀನ್ ಅವರು ವಂದಿಸಿದರು.