ಡೈಲಿ ವಾರ್ತೆ: 13/NOV/2023

– ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ,ಕುಂದಾಪುರ. ಅಂಕಣಕಾರರು, ಪತ್ರಕರ್ತರು.m:9632581508

” ಬಡಗು ತಿಟ್ಟು ಯಕ್ಷಗಾನಕ್ಕೆ ಗೆಜ್ಜೆ ಕಟ್ಟಲು “ಮೆಕ್ಕೆ ಕಟ್ಟು ಶ್ರೀ ನಂದಿಕೇಶ್ವರ ಮೇಳ ಸಜ್ಜು….!” ಪ್ರಸಿದ್ಧ ಕಲಾವಿದರ ಕೂಡುವಿಕೆ…., ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿಯಲ್ಲಿ ಪಾರಂಪರಿಕ ಯಕ್ಷಗಾನ ಕಲೆಯ ಸಮಾಗಮ….!”120 ಕಲಾತ್ಮಕ ಸೇವೆಗಳು ಮುಂಗಡ ಕಾಯ್ದಿರಿಸುವಿಕೆ….!” ನವೆಂಬರ್ 21 ರಂದು ಮೆಕ್ಕೆಕಟ್ಟು ಕ್ಷೇತ್ರದಲ್ಲಿ ಪ್ರಥಮ ಸೇವೆ ಯಕ್ಷಗಾನ….!” ಕಲಾತ್ಮಕ ಸೇವೆಯ ರಂಗ ಸಜ್ಜಿಕೆಯ ಹಿರಿಮೆ “ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ಯಕ್ಷಗಾನ ಮೇಳ…!”

ಸುದ್ದಿ:ಕುಂದಾಪುರ: ಕರಾವಳಿಯ ಗಂಡು ಕಲೆ ಯಕ್ಷಗಾನ ದೈವ ಹಾಗೂ ದೈವತ್ತದ ಆರಾಧನೆಯ ಕಲೆಯಾಗಿ ರೂಪಗೊಂಡಿದ್ದು, ಯಕ್ಷಗಾನ ಬೆಳಕಿನ ಸೇವೆಯಲ್ಲಿ ಹರಿಕೆಯ ರೂಪದಲ್ಲಿ ಪ್ರದರ್ಶನ ಗೊಳ್ಳುವ ಯಕ್ಷಗಾನ ಕಲೆಯು ತಾಯಿಗೆ ಸಮರ್ಪಣೆಯಾಗುತ್ತದೆ ಎನ್ನುವುದು ಕರಾವಳಿಗರ ಅಪಾರ ನಂಬಿಕೆ. ಗತಕಾಲದ ವೈಭವ ಸಾರುವ ಯಕ್ಷಗಾನ ಕಲೆಯು ಕರಾವಳಿ ಮಾತ್ರವಲ್ಲದೆ, ಬೇರೆ ಬೇರೆ ಜಿಲ್ಲೆಗಳು ವಿಶೇಷವಾಗಿ ಪ್ರದರ್ಶನವನ್ನು ನೀಡಿ ಕಲಾವಿದರನ್ನ ಮನಸುರೆಗುಳ್ಳುತ್ತಾರೆ. ಯಕ್ಷಗಾನ ಕಲೆಯು ಕರಾವಳಿಯ ಧೀಮಂತಕಲೆಯಲ್ಲಿ ಪ್ರಾಧಿನ್ಯತೆಯನ್ನ ಪಡೆದಿದೆ ಅದಲ್ಲದೆ ಇಂತಹ ಯಕ್ಷಗಾನ ಕಲೆಗೆ ದಶಕಗಳ ಇತಿಹಾಸ ಇರುವುದು ವಿಶೇಷ…!”

ಬಡಗುತಿಟ್ಟು ಯಕ್ಷಗಾನ ಮೇಳಕ್ಕೆ ಇನ್ನೊಂದು ಹೊಸ ಯಕ್ಷಗಾನ ಮೇಳ ತಿರುಗಾಟಕ್ಕೆ ಸಜ್ಜಾಗಿದೆ. ಕಡಲತಡಿಯ ಯಕ್ಷ ಕಾಶಿ ಎಂದೇ ಕರೆಯಲ್ಪಡುವ ಕರಾವಳಿ ಯಕ್ಷಗಾನ ಪ್ರದರ್ಶನಕ್ಕೆ ತನ್ನದೇ ಆದಂತಹ ಚಾಪು ಮೂಡಿಸುವುದರ ಮೂಲಕ ಯಕ್ಷಗಾನ ಇನ್ನು ಪ್ರತಿ ಮನೆಯ ಕಲೆ ಹಾಗೂ ದೈವರಾದನೆಯ ಸಂಕೇತವಾಗಿ ಮಾರ್ಪಾಡು ಹೊಂದಿದೆ.
ಅದೇ ರೀತಿ, ಕರಾವಳಿಯ ಐತಿಹಾಸಿಕ ಮತ್ತು ಪುರಾಣ ಪ್ರಸಿದ್ಧ ದೇಗುಲಗಳಲ್ಲಿ ಒಂದಾದ “ಶ್ರೀ ಮೆಕ್ಕೆ ಕಟ್ಟು ನಂದಿಕೇಶ್ವರ ದೇವಸ್ಥಾನದ ಹೆಸರಿನಲ್ಲಿ “ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ, ಮೆಕ್ಕೆ ಕಟ್ಟು”, ಹೆಸರಿನಲ್ಲಿ ಜಿಲ್ಲೆಯಾದ್ಯಂತ ಸಂಚಲನಾದ ಸಂಚಾರ ಮೂಡಿಸಲಿದೆ.
ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ, ಮೆಕ್ಕೆ ಕಟ್ಟು, ಹೆಸರಿನಲ್ಲಿ ಸುಮಾರು 120 ಕಲಾ ಪ್ರದರ್ಶನದ ಮೇಳ ಇಂದಿಗೆ ಮುಂಗಡ ಬುಕ್ಕಿಂಗ್ ಆಗಿದೆ. ಅದಲ್ಲದೆ ಯಕ್ಷಗಾನದ ಸಂಚಾಲಕರಾಗಿ ರಂಜಿತ್ ಶೆಟ್ಟಿ ಕಾರ್ಯನಿರ್ವಹಿಸಲಿದ್ದಾರೆ.
ಶ್ರೀಯುತ ರಂಜಿತ ಶೆಟ್ಟಿ ಅವರು ಇದುವರೆಗೆ ಶ್ರೀ ಮಹಾಗಣಪತಿ ದಶಾವತಾರ ಯಕ್ಷಗಾನ ಮೇಳ ಹಟ್ಟಿ ಅಂಗಡಿ ಹಾಗೂ ಬೋಳಂಬಳ್ಳಿ ಮೇಳ ಮತ್ತು ಮೇಗರವಳ್ಳಿ ಯಕ್ಷಗಾನ ಮೇಳವನ್ನು ವಿಶೇಷವಾಗಿ ಸಂಚರಿಸುವುದರ ಮೂಲಕ ಯಕ್ಷಗಾನ ವಿಭಾಗದಲ್ಲಿ ತನ್ನದೇ ಆದಂತಹ ಚಾಕಚಕ್ಕೆ ತನ್ನ ಹೊಂದಿದರು ಈ ಕಾರಣದಿಂದಲೇ ಮೆಕ್ಕೆಕಟ್ಟು ನಂದಿಕೇಶ್ವರ ದೇಗುಲದ ಯಕ್ಷಗಾನ ಮೇಳ ಪ್ರಾರಂಭಿಸಲು ಉದ್ದೇಶಿಸಿದ್ದಾರೆ.

ಕ್ಷೇತ್ರದಲ್ಲಿ ನವಂಬರ್ 21ರಂದು ಪ್ರಥಮ ಸೇವೆ ಆಟ:
ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಮೆಕ್ಕೆ ಕಟ್ಟು ಇವರ ಪ್ರಥಮ ವರ್ಷದ ಹಾಗೂ ಪ್ರಾರಂಭಿಕ ವರ್ಷದ ಸೇವಾ ತಿರುಗಾಟ ನವಂಬರ್ ತಿಂಗಳ 21ರಂದು ರಾತ್ರಿ ಗೆಜ್ಜೆ ಕಟ್ಟಲು ಸನ್ನಿತವಾಗಿದೆ. ಕ್ಷೇತ್ರದಿಂದ ಹೊರಟ ಯಕ್ಷಗಾನ ಮೇಳವು ಪ್ರಪ್ರಥಮವಾಗಿ ಶಿರಿಯಾರ ಗ್ರಾಮಸ್ಥರ ಸೇವೆ ಹಾಗೂ ಎರಡನೆಯ ದಿನ – ಕೆದೂರು ಸಮೀಪದ ಉಳ್ತೂರು ನಲ್ಲಿ ಎರಡನೇ ದಿನದ ಪ್ರದರ್ಶನ ನಡೆಯಲಿದೆ. ಹೀಗೆ ತಾಲೂಕಿನ ಮತ್ತು ಜಿಲ್ಲೆಯ ಬೇರೆ, ಬೇರೆ ಗ್ರಾಮದಲ್ಲಿ ಮೆಕ್ಕೆಕಟ್ಟು ದೇವರ ಸೇವೆಯಾಟ ಚಾಲ್ತಿಯಲ್ಲಿರುತ್ತದೆ.


ಕರಾವಳಿಯಲ್ಲಿ ಯಕ್ಷಗಾನಕ್ಕೆ ತನ್ನದೇ ಆದಂತಹ ವೈಶಿಷ್ಟ್ಯ ಮತ್ತು ಪಾರಂಪರಿಕಗತವಾದ ಅಂತಹ ಶಕ್ತಿ ಇದೆ. ಅದಲ್ಲದೆ ಇದೀಗ ಪ್ರೇಕ್ಷಕರು ಕಡಿಮೆ ಇದ್ದಾರೆ ಎಂಬ ಉದ್ದೇಶಕ್ಕಾಗಿ ಬೇರೆಬೇರೆ ದೊಡ್ಡ ದೊಡ್ಡ ದೇವಸ್ಥಾನದ ಮೇಳಗಳು ಕಾಲಮಿತಿ ಎಂಬ ಹೆಸರಿನಲ್ಲಿ ಯಕ್ಷಗಾನಕ್ಕೆ ಮಧ್ಯ ರಾತ್ರಿಗೆ ಕಡಿಯೋಣ ಹಾಕುತ್ತಿವೆ. ಆದರೆ ಪ್ರೇಕ್ಷಕರ ಹಾಗೂ ಆಟ ಆಡಿಸುವವರ ಅಪೇಕ್ಷೆಯ ಮೇರೆಗೆ ಇಡೀ ರಾತ್ರಿ ನಿರಂತರವಾಗಿ ಪ್ರದರ್ಶನ ಮಾಡಲು ಅನುಕೂಲವಾಗುವ ರೀತಿಯಲ್ಲಿ ಸೆಟ್ಟನ್ನ ನಿರ್ಮಾಣ ಮಾಡಲಾಗಿದೆ.
ಅದಲ್ಲದೆ ವಿಶೇಷ ರೀತಿಯ ತಂಡವನ್ನು ಕಟ್ಟುವುದರೊಂದಿಗೆ ಮೆಕ್ಕೆ ಕಟ್ಟು ನಂದಿಕೇಶ್ವರ ಸಾನಿಧ್ಯದಿಂದ ಹೊರಡುವ ಯಕ್ಷಗಾನ ಮೇಳ ಜಿಲ್ಲೆಯಾದ್ಯಂತ ಹಾಗೂ ಭಕ್ತಾದಿಗಳ ಅನುಗುಣದ ಮೇರೆಯಾಗಿ ಪ್ರದರ್ಶನ ಕೈಗೊಳ್ಳುತ್ತದೆ, ಅದೇ ರೀತಿ ಪಾರಂಪರಿಕವಾದ ವೈಶಿಷ್ಟ್ಯತೆಯನ್ನ ಹೊಂದಿರುವ ಉತ್ತಮವಾದ ರಂಗಸ್ಥಳ ಹಾಗೂ ವೇಷ ಭೂಷಣಕ್ಕೆ ಚೌಕಿ ಹಾಗೂ ಸಂಚಾರಕ್ಕೆ ವಾಹನವನ್ನು ಸಿದ್ಧತೆಯನ್ನ ಮಾಡಿಕೊಳ್ಳುವುದರೊಂದಿಗೆ ಯಕ್ಷಗಾನ ಪ್ರದರ್ಶನ ಹೊರಡಲು ಸಿದ್ಧತೆ ಮಾಡಿಕೊಂಡಿದೆ. ಈ ವರ್ಷದ ಪ್ರದರ್ಶನದ ವಿಶೇಷವಾಗಿ ಬೇಳೂರು ಕೃಷ್ಣಮೂರ್ತಿ ವಿರಚಿತ “ಮೆಕ್ಕೆ ಕಟ್ಟು ಕ್ಷೇತ್ರ ಮಹಾತ್ಮೆ..!”ಎಂಬ ಪ್ರದರ್ಶನವನ್ನ ಹರಕೆಯ ರೂಪದಲ್ಲಿಯೂ ಕೂಡ ಪ್ರದರ್ಶನ ನಡೆಸಲು ಸಿದ್ಧಗೊಂಡಿದೆ.
ಹಿಮ್ಮೇಳ ಮತ್ತು ಮುಮ್ಮೇಳ:
ಯಕ್ಷಗಾನದ ವೈಶಿಷ್ಟ್ಯತೆಯನ್ನ ಹಾಗೂ ಮೆರುಗನ್ನ ಹೆಚ್ಚಿಸಲು ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಪ್ರಸಿದ್ಧ ಹಾಗೂ ಪ್ರತಿಭಾನ್ವಿತ ಕಲಾವಿದರನ್ನು ನೇಮಿಸಲಾಗಿದೆ. ಹಾಸ್ಯಗಾರ ರಮೇಶ್ ಭಂಡಾರಿ, ಕೆಕ್ಕೆರ ಆನಂದ್ ಭಟ್, ವಿದ್ಯಾಧರ ಜಲವಳ್ಳಿ, ನಿಲ್ಕೂಡು ಶಂಕರ ಹೆಗಡೆ , ರಾಘುವ ಪಡಿಯಾರ್, ನರಸಿಂಹ , ಕಾರ್ತಿಕ್ ಕಿಣಿ, ಸಂತೋಷ್ ರಟ್ಟಾಡಿ ಮುಮ್ಮೇಳದಲ್ಲಿ ಅಗ್ರಸ್ಥಾನದಲ್ಲಿರುತ್ತಾರೆ. ಶಂಕರ್ ಭಟ್ ಹಾಗೂ ಸಂತೋಷ್ ಕುಮಾರ್ ಆರ್ಡಿ, ಶಶಾಂಕ್ ಆಚಾರ್ಯ ಮತ್ತು ಸುಜನ್ ಹಾಲಾಡಿ ಹಿಮ್ಮೇಳದಲ್ಲಿ ಇರುತ್ತಾರೆ.
ಯಕ್ಷಗಾನ ಕಲಾಪ್ರಸಂಗವು ಕಥಾಂದರದ ಜೊತೆಗೆ ಇನ್ನಷ್ಟು ಯಕ್ಷಕಲೆಯನ್ನ ಈ ಪ್ರಸಂಗದ ಜೊತೆಗೆ ಸೇರ್ಪಡೆಗೊಳಿಸುವುದರೊಂದಿಗೆ ಇನ್ನು ವಿಭಿನ್ನತೆ ಹಾಗೂ ಮೆರುಗನ್ನ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ ಶ್ರೀ ನಂದಿಕೇಶ್ವರ ಯಕ್ಷಗಾನ ತಂಡ ವಿವಿಧ ಗ್ರಾಮೀಣ ಭಾಗಕ್ಕೆ ತೆರಳಿ ಕಥಾಪ್ರಸಂಗದ ಜೊತೆಗೆ ಹರಿಕೆಯ ರೂಪದಲ್ಲಿಯೂ ಕೂಡ ಪ್ರದರ್ಶನ ನೀಡಲು ಸಜ್ಜಾಗುತ್ತಿದೆ. ಕರಾವಳಿ ಭಾಗದ ಯಕ್ಷಗಾನದ ತಂಡಕ್ಕೆ ಇದೀಗ ಹೊಚ್ಚ ಹೊಸದಾಗಿ ಮೆಕ್ಕೆ ಕಟ್ಟು ಮೇಳ ಸೇರ್ಪಡೆಗೊಂಡಿದೆ. ಕರಾವಳಿಯ ದಂತಕತೆಯಾದ ಯಕ್ಷಗಾನೋ ಪಾರಂಪರಿಕ ದೈವತ್ವವನ್ನು ಹೊಂದಿರುವುದರೊಂದಿಗೆ ದೈವ ಭಕ್ತರು ಕೂಡ ಆರಾಧಿಸುವಂತಹ ಶ್ರೇಷ್ಠತೆಯ ಕಲೆಯಾಗಿ ಇನ್ನೂ ಕರಾವಳಿಯ ಪುಣ್ಯಭೂಮಿಯಲ್ಲಿ ಜೀವಂತವಾಗಿರುವುದು ಸತ್ಯ…!” ಯಕ್ಷಗಾನ ಎನ್ನುವಂತಹ ಕಲೆಯು ಕರಾವಳಿಗರ ಜನಪದ ಕಲೆಯಾಗಿ ಸಾವಿರಾರು ವರುಷಗಳ ಗತಕಾಲದಲ್ಲಿ ಸಾಗಿಬಂದಂತಹ ಪದ್ಧತಿ ಇದೀಗ ಹೊಚ್ಚ ಹೊಸ ಮತ್ತು ನೂತನ ಮಾರತ್ ಮಾದರಿಯಲ್ಲಿ ಯಕ್ಷಗಾನ ಪ್ರಸಂಗಗಳು ಹಾಗೂ ಮೇಳಗಳು ತನ್ನ ವೈಭವೀಕರಣವನ್ನ ಹೆಚ್ಚಿಸಿಕೊಳ್ಳುತ್ತಾ ಇನ್ನಷ್ಟು ಕಲಾವಿದರಿಗೂ ಮತ್ತು ಕಲೆಗೂ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪ್ರಸ್ತುತ ಸಂತಸದ ವಿಚಾರ.

“ಯಕ್ಷಗಾನ ಕಲೆ ಕರಾವಳಿಗೆ ಮಾತ್ರ ಸೀಮಿತ ಬಹುತೇಕ ಕರಾವಳಿಯ ಭಕ್ತಾದಿಗಳು ಕೂಡ ಆರಾಧಿಸುವ ಕಲೆಯಾಗಿದೆ. ಅದೇ ರೀತಿ ಮೆಕ್ಕೆ ಕಟ್ಟು ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ , ಈಗಾಗಲೇ ಸರಿ ಸುಮಾರು 80 ಕ್ಕೂ ಹೆಚ್ಚು ಹರಿಕೆ ಬಯಲಾಟ, ಮುಂಗಡ ಬುಕ್ಕಿಂಗ್ ಆಗಿರುವುದು ಸಂತಸದ ವಿಚಾರ, ಅದಲ್ಲದೆ, ಯಕ್ಷಗಾನಕ್ಕಿರುವಂತಹ ಕಟ್ಟುಪಾಡುಗಳನ್ನು ಈ ಮೇಳದಲ್ಲಿ ಪರಂಪರಾಗತವಾಗಿ ನಡೆದುಕೊಂಡು ಬರುವಂತಹ ಪದ್ಧತಿಯನ್ನು ಯಥಾ ಪ್ರಕಾರ ಅಳವಡಿಸುತ್ತೇವೆ. ಅದಲ್ಲದೆ, ಪ್ರೇಕ್ಷಕರ ಅನುಗುಣದ ಮೇರೆಗೆ ಯಕ್ಷಗಾನವನ್ನು ಕಥಾಪ್ರಸಂಗ ರೂಪದಲ್ಲಿ ಮತ್ತು ಹರಿಕೆ ರೂಪದಲ್ಲಿ ಹಾಗೂ ಬೇರೆ ಮೇಳಗಳ ಜೊತೆಗೆ ಜೋಡಾಟವನ್ನು ಕೂಡ ಮಾಡಲು ಸಿದ್ದರಿದ್ದೇವೆ. ಯಕ್ಷಗಾನವನ್ನು ಹರಕೆ ರೂಪದಲ್ಲಿ ಮಾಡಲು ಇಚ್ಚಿಸುವವರು ನಮ್ಮನ್ನು ಸಂಪರ್ಕಿಸಬಹುದು.ಮೊ:9900800593″

ರಂಜಿತ್ ಕುಮಾರ್ ಶೆಟ್ಟಿ ,ಸಂಚಾಲಕರು. ಶ್ರೀ ನಂದಿಕೇಶ್ವರ
ಪ್ರಸಾದಿತ ಯಕ್ಷಗಾನ ಮಂಡಳಿ ಮೆಕ್ಕೆ ಕಟ್ಟು.”


ಮೆಕ್ಕೆ ಕಟ್ಟು ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿಗೆ ಶುಭಾಶಯಗಳು ರೊಂದಿಗೆ ಇನ್ನಷ್ಟು ಕಲೆಗೂ ಕಲಾವಿದರಿಗೂ ಪ್ರೋತ್ಸಾಹ ಕೊಡುವಂತೆ ನಿಟ್ಟಿನಲ್ಲಿ, ಸಕಲೇಶ್ವರ್ಯವನ್ನು ನೀಡುವುದರೊಂದಿಗೆ, ಕಲಾ ಶಕ್ತಿ ಕಲಾಮಾತೆ ಪ್ರತಿಯೊಬ್ಬರ ಬದುಕಿನಲ್ಲಿಯೂ ಹೊಸತನ ನೀಡುವುದರೊಂದಿಗೆ ಉತ್ತಮವಾದ ಭವಿಷ್ಯವನ್ನು ಕಲ್ಪಿಸುವುದರೊಂದಿಗೆ, ಕಲೆಯ ಮೂಲಕ ಸಂಚರಿಸಿ ಇವರ ಮೇಳಕ್ಕೆ ಇನ್ನಷ್ಟು ಶಕ್ತಿ ಹಾಗೂ ಭವಿಷ್ಯ ದೊರೆಯಲಿ ಎಂದು ಶ್ರೀ ನಂದಿಕೇಶ್ವರನಲ್ಲಿ ಬೇಡಿಕೊಳ್ಳೋಣ. ಯಕ್ಷಗಾನ ಮೇಳವನ್ನ ಹರಿಕೆ ರೂಪದಲ್ಲಿ ಹಾಗೂ ವಿಶೇಷ ಕಾರ್ಯಕ್ರಮ ಸಂದರ್ಭದಲ್ಲಿ ಯಕ್ಷಗಾನ ಪ್ರದರ್ಶನ ಬಯಸುವವರು ಸಂಪರ್ಕಿಸಬಹುದು:9900800593.
ಸಂಚಾಲಕರು, ಶ್ರೀ ಕ್ಷೇತ್ರ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಮೆಕ್ಕೆಕಟ್ಟು, ಶಿರಿಯಾರ ಗ್ರಾಮ, ಉಡುಪಿ ಜಿಲ್ಲೆ.