ಡೈಲಿ ವಾರ್ತೆ: 13/NOV/2023

ನೇಜಾರು: ತಾಯಿ,ಮಕ್ಕಳ ಹತ್ಯೆ ಖಂಡನೀಯ: ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ಹಾಗೂ ಸೆಂಟ್ರಲ್ ಕಮಿಟಿ

ಸಂತೆಕಟ್ಟೆ : ಉಡುಪಿ ಜಿಲ್ಲೆ ನೆಜಾರ್ ತೃಪ್ತಿ ಲೇಔಟ್ ಎಂಬಲ್ಲಿ ದಿನಾಂಕ 12- ನವೆಂಬರ್ 2023 ಬೆಳಿಗ್ಗೆ 8.30 ಕ್ಕೆ ದುಷ್ಕರ್ಮಿ ಮನೆಗೆ ನುಗ್ಗಿ ನೂರ್ ಮುಹಮ್ಮದ್ ಎಂಬುವರ ಪತ್ನಿ ಹಸೀನಾ,ಇಬ್ಬರು ಪುತ್ರಿ ಅಫ್ನನ್ ಹಾಗೂ ಅಜ್ಞಾಝ್, ಪುತ್ರ ಅಸೀಮ್ ಮೇಲೆ ಮಾರಕ ಹಲ್ಲೆ ನಡೆಸಿ ಕೊಲೆಗೈದಿರುತಾನೇ. ಹಾಗೂ ತಾಯಿ ಮೇಲೆ ಹಲ್ಲೆ ನಡೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪೆಡೆಯುತಿದ್ದಾರೆ. ಈ ದುಷ್ಕರ್ತ್ಯವನ್ನು ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ಹಾಗೂ ಸೆಂಟ್ರಲ್ ಕಮಿಟಿ ತೀವ್ರವಾಗಿ ಖಂಡಿಸುತ್ತದೆ. ಹಾಗೂ ಈ ಕರ್ತ್ಯ ಏಸಗಿದವರನ್ನು ಹಾಗೂ ಇದರ ಹಿಂದೆ ಯಾರಿದ್ದಾರೆ ಎಂಬುದು ಪತ್ತೆ ಹಚ್ಚಿ ಸೂಕ್ತ ಕಾನೂನು ರೀತಿಯಲ್ಲಿ ತನಿಖೆ ಮಾಡಿ ಶಿಕ್ಷೆ ನೀಡಬೇಕು ಎಂಬುದು ಪೊಲೀಸ್ ಇಲಾಖೆಯನ್ನು ಮನವಿ ಮಾಡಿಕೊಳ್ಳುತ್ತೇವೆ.

ಈ ಘಟನೆಯಿಂದ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ವಾತಾವರಣ ಸೃಷ್ಠಿಯಾಗಿದೆ. ಹಾಗೂ ಜಿಲ್ಲೆಯ ಜನತೆ ಭಯಭೀತರಾಗಿ ಮನೆಯಿಂದ ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ ಹಾಗೂ ಭಯದ ವಾತಾವರಣದಲ್ಲಿ ತಿರುಗಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿ ಯಾ ಸಂಘಟನ ಕಾರ್ಯದರ್ಶಿ ಹುಸೇನ್ ಹೈಕಾಡಿ. ಉಡುಪಿ ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ ತಿಳಿಸಿದ್ದಾರೆ. ಹಾಗೂ ಈ ಘಟನೆಯ ಆರೋಪಿಗಳನ್ನು ಆದಷ್ಟು ಶೀಘ್ರದಲ್ಲಿ ಪತ್ತೆ ಹಚ್ಚಿ ಶಿಕ್ಷಿಸುವಂತೆ ಹಾಗೂ ಜಿಲ್ಲೆಯಲ್ಲಿ ರಕ್ಷಣೆ , ಕಾನೂನು ಹಾಗೂ ಸುವ್ಯವಸ್ಥೆಯನ್ನು ಹೆಚ್ಚಿಸುವಂತೆ ಈ ಮೂಲಕ ಕೇಳಿಕೊಳ್ಳುತ್ತೇವೆ . ಈ ಘಟನೆಯಲ್ಲಿ ಮೃತ ಪಟ್ಟ ನಾಲ್ಕು ಮಂದಿಯ ಮರಣೋತ್ತರ ಪರೀಕ್ಷೆ ನಡೆಸಿದ ಕೆ. ಎಂ.ಸಿ ಮಣಿಪಾಲ ಆಸ್ಪತ್ರೆ, ಹಾಗೂ ಅಂತಿಮ ವಿಧಿವಿಧಾನ ನೆರವೇರಲು ಸೂಕ್ತ ರಕ್ಷಣೆ ವ್ಯವಸ್ಥೆ ನೆರವೇರಿಸಿ ಕೊಟ್ಟ ಜಿಲ್ಲಾ ಆಡಳಿತ ಹಾಗೂ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇವೆ . ಹಾಗೂ ಅಂತಿಮ ಕಾರ್ಯ ಸುಸೂತ್ರವಾಗಿ ನಡೆಯಲು ಸಹಕರಿಸಿದ ನೇಜಾರ್,ಕೊಡಿಬೆಂಗ್ರೆ,ಇಂದ್ರಾಳಿ, ಉಡುಪಿ ಜಾಮಿಯಾ ಮಸೀದಿಯ ಜಮಾತ್ ಆಡಳಿತ ಮಂಡಳಿಗೆ ದನ್ಯವಾದ ಗಳನ್ನು ಈ ಸಂದರ್ಭದಲ್ಲಿ ತಿಳಿಸುತ್ತೇವೆ . ನಮ್ಮ ನಾಡ ಒಕ್ಕೂಟ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮೌಲಾನ ಜಮೀರ್ ಅಹಮದ್ ರಷಾದಿ, ಜಿಲ್ಲಾ ಸದ್ಯಸ್ಯರಾದ ರಫೀಕ್ ಗಂಗೊಳ್ಳಿ. ಶಾಬಾನ್ ಹಂಗ್ಲೂರ್. ಸಜೀರ್ ಹೈಕಾಡಿ.ಕುಂದಾಪುರ ತಾಲೂಕು ಅಧ್ಯಕ್ಷರಾದ ದಸ್ತಗೀರ ಸಾಹೇಬ್ ಕಂಡ್ಲೂರ್, ಉಡುಪಿ ತಾಲೂಕು ಅಧ್ಯಕ್ಷ ನಝೀರ್ ನೇಜಾರ್, ಹೆಬ್ರಿ ಘಟಕದ ಉಪಾಧ್ಯಕ್ಷ ಅಬ್ದುಲ್ ಸಮದ್ ಹೈಕಾಡಿ. ಸದ್ಯಸ್ಯ ಅಸ್ಲಾಂ ಹೈಕಾಡಿ ಸಮಾಜ ಸೇವಕ ಪೀರ್ ಸಾಹೇಬ್ ಉಡುಪಿ ಉಪಸಿತ್ದರಿದ್ದರು.