ಡೈಲಿ ವಾರ್ತೆ: 14/NOV/2023

ಬಿಗ್ ಬಾಸ್ ಮನೆಯಲ್ಲಿ ಉಳಿಯಲು ನಿರ್ಧರಿಸಿದ ವರ್ತೂರು ಸಂತೋಷ್

ಬಿಗ್ ಬಾಸ್:ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಮನೆಯಲ್ಲಿ ಮುಂದುವರಿಯತ್ತಾರೋ ಇಲ್ಲವೋ ಎಂಬ ಅನುಮಾನ ಮೂಡಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ವರ್ತೂರು ಸಂತೋಷ್ ಅವರ ತಾಯಿ ದೊಡ್ಮನೆಯೊಳಗೆ ಕಾಲಿಟ್ಟು ಮಗನ ಮನಸ್ಸು ಬದಲಾಯಿಸಿದ್ದಾರೆ.ಆಟವನ್ನು ಅರ್ಧಕ್ಕೆ ನಿಲ್ಲಿಸಬಾರದು ಎಂದು ಅವರು ಸಲಹೆ ನೀಡಿದ್ದಾರೆ.

ಮೊದಲಿಗೆ ‘ನನ್ನಿಂದ ಇದು ಸಾಧ್ಯವಿಲ್ಲ’ ಎಂದು ಕಣ್ಣೀರು ಹಾಕಿದ ವರ್ತೂರು ಸಂತೋಷ್ ಅವರು ನಂತರದಲ್ಲಿ ತಾಯಿಯ ಮಾತನ್ನು ಒಪ್ಪಿಕೊಂಡಿದ್ದಾರೆ. ದೊಡ್ಮನೆಯಿಂದ ಹೊರಗೆ ಹೋಗಬೇಕು ಎಂದುಕೊಂಡಿದ್ದ ಅವರ ನಿರ್ಧಾರ ಈಗ ಬದಲಾಗಿದೆ. ‘ಈಗ ಗೇಮ್ ಸ್ಟಾರ್ಟ್’ ಎಂದು ಹೊಸ ಉತ್ಸಾಹದಲ್ಲಿ ಅವರು ಆಟಕ್ಕೆ ಸಜ್ಜಾಗಿದ್ದಾರೆ. ಈ ಸಂದರ್ಭ ಹೇಗಿತ್ತು ಎಂಬುದನ್ನು ತಿಳಿಸುವ ಪ್ರೋಮೋ ಬಿಡುಗಡೆ ಆಗಿದೆ. ಈ ಸಂಚಿಕೆ ನ.14ರ ರಾತ್ರಿ 9.30ಕ್ಕೆ ‘ಕಲರ್ಸ್ ಕನ್ನಡ’ದಲ್ಲಿ ಪ್ರಸಾರ ಆಗಲಿದೆ.