ಡೈಲಿ ವಾರ್ತೆ: 18/NOV/2023
ಕೋಟತಟ್ಟು ಸ. ಹಿ. ಪ್ರಾ. ಶಾಲೆಯ ರಂಗಮಂದಿರ ಹಾಗೂ ಒಂದು ತರಗತಿ ಕೋಣೆ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 1.50 ಲಕ್ಷ. ಕೊಡುಗೆ
ಕೋಟತಟ್ಟು ಸ. ಹಿ. ಪ್ರಾ. ಶಾಲೆಯ ರಂಗಮಂದಿರ ಹಾಗೂ ಒಂದು ತರಗತಿ ಕೋಣೆ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 1.50 ಲಕ್ಷ. ಕೊಡುಗೆ
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಂಗಮಂದಿರ ಮತ್ತು ಒಂದು ತರಗತಿ ಕೋಣೆಯ ನಿರ್ಮಾಣಕ್ಕಾಗಿ ಒಂದು ಲಕ್ಷದ ಐವತ್ತು ಸಾವಿರ ರೂ. ಅನುದಾನವನ್ನು ಮಂಜೂರು ಮಾಡಿರುತ್ತಾರೆ.
ಸಹಾಯಧನದ ಹಸ್ತಾಂತರ ಕಾರ್ಯಕ್ರಮವು ನ. 16 ರಂದು SDMC ಅಧ್ಯಕ್ಷ ಸುಲೇಮಾನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಹಾಯಧನದ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬ್ರಹ್ಮಾವರ ತಾಲೂಕು ಯೋಜನಾಧಿಕಾರಿಗಳಾದ ರಮೇಶ್ ಪಿ ಕೆ ರವರು ಕಟ್ಟಡ ಸಮಿತಿಯ ಅಧ್ಯಕ್ಷ ರವೀಂದ್ರನಾಥ ಹಂದೆಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜನತಾ ಫಿಶ್ ಮಿಲ್ ಮಾಲಿಕರಾದ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ಪಂಚಾಯತ್ ಸದಸ್ಯರಾದ ರವೀಂದ್ರ ತಿಂಗಳಾಯ, ಶ್ರೀಮತಿ ಅಶ್ವಿನಿ ದಿನೇಶ್, ಶ್ರೀಮತಿ ವಿದ್ಯಾ, ಪ್ರಗತಿಪರ ಕೃಷಿಕ ಜಯರಾಮ್ ಶೆಟ್ಟಿ, ರವೀಂದ್ರ ಐತಾಳ್ ಪಾರಂಪಳ್ಳಿ, ಕಟ್ಟಡ ಸಮಿತಿಯ ಉಪಾಧ್ಯಕ್ಷ ಶಿವಮೂರ್ತಿ ಉಪಾಧ್ಯ, ಕಟ್ಟಡ ಸಮಿತಿಯ ಸದಸ್ಯರಾದ ಹುಸೇನ್ ಕೆ ಎಚ್, ಧ.ಗ್ರಾ. ಯೋಜನೆಯ ಕೋಟ ವಲಯದ ಮೇಲ್ವಿಚಾರಕರಾದ ಶ್ರೀಮತಿ ನೇತ್ರಾವತಿ ಗೌಡ, ಶ್ರೀಮತಿ ಲಕ್ಷ್ಮಿ, ಶಾಲಾ ಮುಖ್ಯಶಿಕ್ಷಕಿ ಜಾನಕಿ ಶಿಕ್ಷಕರುಗಳಾದ ಶ್ರೀಮತಿ ತಾರಾ, ಲಕ್ಷ್ಮಣ ಸುವರ್ಣ, ಶ್ರೀಮತಿ ಶೈಲಜ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಗಣೇಶ ಆಚಾರಿ ನಿರೂಪಿಸಿದರು.
ಶ್ರೀಮತಿ ಸಂಗೀತ ಎಸ್ ಕೆ ಧನ್ಯವಾದಗೈದರು.