



ಡೈಲಿ ವಾರ್ತೆ: 22/NOV/2023


ಗುರುಪುರ: ಬೈಕ್ ಹಾಗೂ ಟಿಪ್ಪರ್ ನಡುವೆ ಅಪಘಾತ – ಬೈಕ್ ಸವಾರ ಮೃತ್ಯು!
ಮಂಗಳೂರು:ಬೈಕ್ ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ನಡುವೆ ಮೃತಪಟ್ಟಘಟನೆ ಗುರುಪುರ ಸರಕಾರಿ ಕಾಲೇಜು ಬಳಿ ನಡೆದಿದೆ.
ಮೃತ ಬೈಕ್ ಸವಾರ ಅಡ್ಡೂರು ಕಾಂಜರಕೋಡಿ ಮಸೀದಿ ಬಳಿಯ ನಿವಾಸಿ ಡಿ.ಎಸ್. ಅಬ್ದುಲ್ ರಹೀಮ್ (62) ಎಂದು ಗುರುತಿಸಲಾಗಿದೆ.
ರಹೀಮ್ ಅವರು ಮಂಗಳೂರಿನಿಂದ ಕೈಕಂಬಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಇನ್ನೊಂದು ಬೈಕ್ ಸವಾರನೊಬ್ಬ ಓವರ್ ಟೇಕ್ ಮಾಡುವ ರಭಸದಲ್ಲಿ ರಹೀಮ್ ಅವರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ರಹೀಮ್ ಅವರ ಬೈಕ್ ಬ್ಯಾಲೆನ್ಸ್ ತಪ್ಪಿ ಎದುರಿಗೆ ಬರುತ್ತಿದ್ದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ಘಟನೆಯಿಂದಾಗಿ ರಹೀಮ್ ಅವರಿಗೆ ಗಂಭೀರ ಗಾಯಗಳಾಗಿತ್ತು, ತಕ್ಷಣ ಸ್ಥಳೀಯರು ಮತ್ತು ಸಹ ವಾಹನ ಸವಾರರು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ದಾರಿಮಧ್ಯೆ ಅವರು ಮೃತ ಪಟ್ಟರೆಂದು ತಿಳಿದು ಬಂದಿದೆ.